ಗ್ರಾಹಕರ ಗಮನಕ್ಕೆ ಆಗಸ್ಟ್ 6-7 ರಂದು ಈ ಸಮಯದಲ್ಲಿ ಎಸ್ ಬಿಐ ಯೋನೋ ಸೇವೆಗಳು ಅಲಭ್ಯ!
ಎಸ್ ಬಿಐ ನ ಗ್ರಾಹಕರಿಗೆ ಆ.06-07 ರಂದು ಯೋನೋ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.

ನವದೆಹಲಿ: ಎಸ್ ಬಿಐ ನ ಗ್ರಾಹಕರಿಗೆ ಆ.06-07 ರಂದು ಯೋನೋ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.
ಎಸ್ ಬಿಐ ನ ಡಿಜಿಟಲ್ ಸೇವೆಗಳ ಮೆಂಟೆನೆನ್ಸ್ ಆಕ್ಟಿವಿಟಿ (ನಿರ್ವಹಣೆಯ ಕೆಲಸಗಳನ್ನು) ಬ್ಯಾಂಕ್ ಕೈಗೆತ್ತಿಕೊಂಡಿದ್ದು ಗ್ರಾಹಕರಿಗೆ ಎಸ್ ಬಿಐ ನ ಡಿಜಿಟಲ್ ಬ್ಯಾಂಕಿಂಗ್, ಇಂಟರ್ ನೆಟ್ ಬ್ಯಾಂಕಿಂಗ್, ಯೋನೋ, ಯೋನೋ ಲೈಟ್, ಯೋನೋ ಬ್ಯುಸಿನೆಸ್ ಸೇವೆಗಳು ಆ.06-07 ರಂದು ಅಲಭ್ಯವಾಗಲಿದೆ.
ಈ ಬಗ್ಗೆ ಎಸ್ ಬಿಐ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ತಾತ್ಕಾಲಿಕವಾಗಿ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿದೆ. ಆಗಸ್ಟ್ 6 ರಂದು 22.45 ಗಂಟೆಗಳಿಗೆ ಮೇಂಟೆನೆನ್ಸ್ ಆಕ್ಟಿವಿಟಿಯನ್ನು ಪ್ರಾರಂಭಿಸಲಿದ್ದು, ಆಗಸ್ಟ್ 7 ರಂದು 1.15 (150 ನಿಮಿಷಗಳು) ಸೇವೆ ಸ್ಥಗಿತಗೊಳ್ಳಲಿವೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ.
ಜು.16-17 ರಂದೂ ಎಸ್ ಬಿಐ ಬ್ಯಾಂಕ್ ನ ಡಿಜಿಟಲ್ ಸೇವೆಗಳನ್ನು ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಎಸ್ ಬಿಐ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 6,504 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಶೇ.55 ರಷ್ಟು ಏರಿಕೆ ಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


