ವಾಣಿಜ್ಯ

ಕೆಐಎನಿಂದ ಬೆಂಗಳೂರು ನಗರಕ್ಕೆ 10 ನಿಮಿಷಗಳಲ್ಲಿಆಗಮಿಸಲು ಹೈಪರ್‌ಲೂಪ್ ಸಾರಿಗೆ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಒಪ್ಪಂದ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಮತ್ತು ವರ್ಜಿನ್ ಹೈಪರ್‌ಲೂಪ್ ಭಾನುವಾರ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಐಎ) ಅನ್ನು ಸೂಪರ್ ಹೈಸ್ಪೀಡ್ ಹೈಪರ್‌ಲೂಪ್ ಸಾರಿಗೆ ಮೂಲಕ ನಗರದ ಕೇಂದ್ರಭಾಗದೊಡನೆ ಜೋಡಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸುವ ಸಲುವಾಗಿ ಜ್ಞಾಪನ ಪತ್ರಕ್ಕೆ ಸಹಿ ಹಾಕಿದೆ.

ಕೆಐಎನಿಂದ ಬೆಂಗಳೂರು ನಗರಕ್ಕೆ 10 ನಿಮಿಷಗಳಲ್ಲಿಆಗಮಿಸಲು ಹೈಪರ್‌ಲೂಪ್ ಸಾರಿಗೆ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಒಪ್ಪಂದ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಮತ್ತು ವರ್ಜಿನ್ ಹೈಪರ್‌ಲೂಪ್ ಭಾನುವಾರ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಐಎ) ಅನ್ನು  ಸೂಪರ್ ಹೈಸ್ಪೀಡ್ ಹೈಪರ್‌ಲೂಪ್ ಸಾರಿಗೆ ಮೂಲಕ ನಗರದ ಕೇಂದ್ರಭಾಗದೊಡನೆ ಜೋಡಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸುವ ಸಲುವಾಗಿ ಜ್ಞಾಪನ  ಪತ್ರಕ್ಕೆ ಸಹಿ ಹಾಕಿದೆ.

ಈ ಸಾರಿಗೆ ವಿಧಾನವು ನಿರ್ವಾತ ಪರಿಸ್ಥಿತಿಗಳಲ್ಲಿ ವಿದ್ಯುತ್ ಚಾಲಿತವಾಗಿರಲಿದ್ದು ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಹೈಪರ್‌ಲೂಪ್ ಗಂಟೆಗೆ 1,080 ಕಿ.ಮೀ ವೇಗದಲ್ಲಿ, ಬಿಎಲ್‌ಆರ್ ವಿಮಾನ ನಿಲ್ದಾಣದಿಂದ ನಗರದ ಕೇಂದ್ರಭಾಗಕ್ಕೆ ಚಲಿಸಲಿದೆ. ಇದರಿಂದಾಗಿ  ಗಂಟೆಗೆ ಸಾವಿರಾರು ಪ್ರಯಾಣಿಕರನ್ನು ವಿಮಾನ ನಿಲ್ದಾಣದಿಂದ ನಗರಕ್ಕೆ ಆಗಮಿಸುವಂತೆ ಮಾಡಲು ಸಾಧ್ಯವಾಗಲಿದೆ.

ಪ್ರಯಾಣಿಕರು ತಮ್ಮ ಮಲ್ಟಿಮೋಡಲ್ ಟ್ರಿಪ್ ಅನ್ನು ತಡೆರಹಿತ ಚೆಕ್-ಇನ್ ಮತ್ತು ತಮ್ಮ ಹೈಪರ್‌ಲೂಪ್ ಮತ್ತು ಕೇಂದ್ರೀಯವಾಗಿ ನೆಲೆಗೊಂಡಿರುವ ಹೈಪರ್‌ಲೂಪ್ ಪೋರ್ಟಲ್‌ಗಳಲ್ಲಿ ತಕ್ಕ ಸುರಕ್ಷತಾ ಕ್ರಮಗಳೊಂದಿಗೆ ಸುಗಮಗಿಳಿಸಿಕೊಳ್ಳಲು ಸಾಧ್ಯವಾಗಲಿದೆ.

ಹೈ-ಸ್ಪೀಡ್ ಹೈಪರ್‌ಲೂಪ್ ತಂತ್ರಜ್ಞಾನ ಪರಿಕಲ್ಪನೆಯನ್ನು ಜಾರಿಗೊಳಿಸಲು  ಕೆಲಸ ಮಾಡುವ ಅಮೆರಿಕದ ಸಾರಿಗೆ ತಂತ್ರಜ್ಞಾನ ಕಂಪನಿಯಾದ ವರ್ಜಿನ್ ಹೈಪರ್‌ಲೂಪ್, ಹೈಪರ್‌ಲೂಪ್ ತಂತ್ರಜ್ಞಾನಪ್ರಮಾಣದಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದ ವಿಶ್ವದ ಏಕೈಕ ಕಂಪನಿ ಎಂದು ಹೇಳಿಕೊಂಡಿದೆ,  ಈ ಸಂಸ್ಥೆ ಅಮೆರಿಕಾದ ಟೆಕ್ಸಾಸ್‌ನಲ್ಲಿ ಈ ತಂತ್ರಜ್ಞಾನ ಬಳಸಿ ಹೈಪರ್‌ಲೂಪ್ ವಾಹನ ಯಶಸ್ವಿಕಾರ್ಯಾಚರಣೆ ನಡೆಸಿದೆ.  ಅದು ವೇಗದ, ಸುರಕ್ಷಿತ, ಅಗ್ಗದ ಮತ್ತು ಅಸ್ತಿತ್ವದಲ್ಲಿರುವ ಮಾದರಿಗಳಿಗಿಂತ ಹೆಚ್ಚು ಸಮರ್ಥನೀಯವಾಗಿದೆ.

ಜ್ಞಾಪನ  ಪತ್ರದ ಪ್ರಕಾರ , ತಾಂತ್ರಿಕ, ಆರ್ಥಿಕ ಮತ್ತು ಮಾರ್ಗದ ಕಾರ್ಯಸಾಧ್ಯತೆಯನ್ನು ಕೇಂದ್ರೀಕರಿಸುವ ಪೂರ್ವ-ಕಾರ್ಯಸಾಧ್ಯತೆಯ ಅಧ್ಯಯನವು ಪ್ರತಿ ಆರು ತಿಂಗಳಿಗೊಮ್ಮೆ ಎರಡು ಹಂತಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. "ಕೆಐಎಯಿಂದ ಹೈಪರ್ ಲೂಪ್ ಸಂಪರ್ಕಕ್ಕಾಗಿ ಕಾರ್ಯಸಾಧ್ಯತಾ ಅಧ್ಯಯನವನ್ನು ನಿಯೋಜಿಸುವುದು ಭವಿಷ್ಯದ ಸಾರಿಗೆ ಸಂಪರ್ಕದ ಕುರಿತ ವ್ಯಾಖ್ಯಾನಕ್ಕೆ  ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸುವ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ, ಇದು ಜನರ ಸಮರ್ಥ ಪ್ರಯಾಣ ಅಥವಾ ವಲಸೆಯನ್ನು ಶಕ್ತಗೊಳಿಸುತ್ತದೆ" ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಹೇಳಿದರು.

ವರ್ಜಿನ್ ಹೈಪರ್‌ಲೂಪ್‌ನ ಅಧ್ಯಕ್ಷ ಮತ್ತು ಡಿಪಿ ವರ್ಲ್ಡ್‌ನ ಗ್ರೂಪ್ ಅಧ್ಯಕ್ಷ ಮತ್ತು ಸಿಇಒ ಸುಲ್ತಾನ್ ಬಿನ್ ಸುಲಾಯೆಮ್ ಅವರು, “ದಟ್ಟಣೆಯನ್ನು ನಿಭಾಯಿಸಲು ಮತ್ತು ಬೆಂಗಳೂರಿನಲ್ಲಿ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಹೈಪರ್‌ಲೂಪ್  ಸಾರಿಗೆ ವ್ಯವಸ್ಥೆ ಒಂದು ಉತ್ತಮ ಪರಿಹಾರವಾಗಿದೆ. ಪ್ರಯಾಣಿಕರ ಸಾಗಣೆಗೆ ಮೀರಿ, ವಿಮಾನ ನಿಲ್ದಾಣಗಳು ಸರಕುಗಳಿಗೆ ನಿರ್ಣಾಯಕ ಮಾರ್ಗವಾಗಿದೆ, ವಿಶೇಷವಾಗಿ ಸಮಯದ ಸೂಕ್ಷ್ಮ  ವಿತರಣೆಗಳು. ಹೈಪರ್ಲೂಪ್-ಸಂಪರ್ಕಿತ ವಿಮಾನ ನಿಲ್ದಾಣವು ಸರಕುಗಳ ವಿತರಣೆಯಲ್ಲಿಉಈ ಸುಧಾರಣೆ ಕಾಣಲಿದೆ.  ಈ ಒಪ್ಪಂದವನ್ನು ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿ ವಿಭಾಗದ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಅವರ ಸಮ್ಮುಖದಲ್ಲಿ ಸುಲ್ತಾನ್ ಬಿನ್ ಸುಲಾಯೆಮ್ ಮತ್ತು ಬಿಐಎ ಎಲ್  ನ ನಿರ್ದೇಶಕರ ಮಂಡಳಿಯ ಅಧ್ಯಕ್ಷರೂ ಆಗಿರುವ ವಿಜಯ್ ಭಾಸ್ಕರ್ ನಡುವೆ ನಡೆದಿದೆ.

ಕೆಐಎ ಶೀಘ್ರದಲ್ಲೇ ಕೆಲವು ವಾರಗಳಲ್ಲಿ ಉಪನಗರ ರೈಲ್ವೆ ಮತ್ತು ನಾಲ್ಕು ವರ್ಷಗಳಲ್ಲಿ ಮೆಟ್ರೋರೈಲು ಸಂಪರ್ಕವನ್ನು ಹೊಂದಲಿದೆ.

ಪ್ರಮುಖಾಂಶಗಳು

  • ಬಿಎಲ್‌ಆರ್ ವಿಮಾನ ನಿಲ್ದಾಣದಿಂದ ಕಾರ್ಯಸಾಧ್ಯವಾದ ಹೈಪರ್‌ಲೂಪ್ ಕಾರಿಡಾರ್‌ಗಳನ್ನು ಅಧ್ಯಯನ ಮಾಡಲು ಎಂಒಯು
  • ಬಿಎಲ್‌ಆರ್ ವಿಮಾನ ನಿಲ್ದಾಣವನ್ನು ಸಾರಿಗೆ ಕೇಂದ್ರವನ್ನಾಗಿ ಮಾಡುವ ಉದ್ದೇಶವನ್ನು ಬಿಐಎ ಎಲ್ ಹೊಂದಿದೆ 
  • ಹೈಪರ್‌ಲೂಪ್ ಸುಮಾರು 10 ನಿಮಿಷಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣವನ್ನು ನಗರ ಕೇಂದ್ರಕ್ಕೆ ಸಂಪರ್ಕಿಸಬಹುದು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.