2035 ರ ವೇಳೆಗೆ ವಿಶ್ವದ ಮೊದಲ ಹೈಡ್ರೋಜನ್ ಶಕ್ತ ವಿಮಾನ ಪರಿಚಯಿಸುವುದು ಏರ್ ಬಸ್ ಗುರಿ
2035ರ ವೇಳೆಗೆ ಮಾಲಿನ್ಯ ರಹಿತ ವಿಶ್ವದ ಮೊದಲ ವಾಣಿಜ್ಯಾತ್ಮಕ ವಿಮಾನದ ಮೂರು ಪರಿಕಲ್ಪನೆಗಳನ್ನು ವಿಮಾನಯಾನ ದೈತ್ಯ ಕಂಪನಿ ಏರ್ ಬಸ್ ಸೋಮವಾರ ಬಹಿರಂಗಪಡಿಸಿದೆ.

ನವದೆಹಲಿ: 2035ರ ವೇಳೆಗೆ ಮಾಲಿನ್ಯ ರಹಿತ ವಿಶ್ವದ ಮೊದಲ ವಾಣಿಜ್ಯಾತ್ಮಕ ವಿಮಾನದ ಮೂರು ಪರಿಕಲ್ಪನೆಗಳನ್ನು ವಿಮಾನಯಾನ ದೈತ್ಯ ಕಂಪನಿ ಏರ್ ಬಸ್ ಸೋಮವಾರ ಬಹಿರಂಗಪಡಿಸಿದೆ.
ಈ ಎಲ್ಲಾ ಪರಿಕಲ್ಪನೆಗಳು ಜಲಜನಕದಿಂದ ನಡೆಸಲ್ಪಡುತ್ತವೆ. ಇದು ಏರೋಸ್ಪೇಸ್ ಮತ್ತು ಇತರ ಅನೇಕ ಕೈಗಾರಿಕೆಗಳಿಗೆ ಶುದ್ಧ ವಾಯುಯಾನ ಇಂಧನವಾಗಿ ಪರಿಹಾರವಾಗುವ ಸಾಧ್ಯತೆಯಿರುವುದಾಗಿ ಯುರೋಪಿಯನ್ ಸಂಸ್ಥೆಯು ವಿಶ್ವಾಸ ಹೊಂದಿದೆ.
ಇದು ಒಟ್ಟಾರೆಯಾಗಿ ವಾಣಿಜ್ಯ ವಾಯುಯಾನ ಕ್ಷೇತ್ರಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ ಮತ್ತು ಈ ಉದ್ಯಮವು ಹಿಂದೆಂದೂ ಕಾಣದ ಪ್ರಮುಖ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಲು ನಾವು ಉದ್ದೇಶಿಸಿದ್ದೇವೆ. ಇಂದು ಬಹಿರಂಗಪಡಿಸಿರುವ ಪರಿಕಲ್ಪನೆಗಳು ವಾಯುಮಾಲಿನ್ಯವಿಲ್ಲದೆ ವಿಮಾನ ಹಾರಾಟ ನಡೆಸುವ ಮಹತ್ವಾಕಾಂಕ್ಷೆಯ ನೋಟವನ್ನು ಜಗತ್ತಿಗೆ ನೀಡುತ್ತವೆ ಎಂದು ಏರ್‌ಬಸ್ ಸಿಇಒ ಗುಯಿಲೌಮ್ ಫೌರಿ ಹೇಳಿದ್ದಾರೆ.
ಜಲಜನಕದ ಬಳಕೆಯು - ಸಂಶ್ಲೇಷಿತ ಇಂಧನಗಳಲ್ಲಿ ಮತ್ತು ವಾಣಿಜ್ಯಾತ್ಮಕ ವಿಮಾನಗಳ ಪ್ರಾಥಮಿಕ ವಿದ್ಯುತ್ ಮೂಲವಾಗಿ ವಾಯುಯಾನದ ಹವಾಮಾನ ಪರಿಣಾಮವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಲವಾಗಿ ನಂಬಿರುವುದಾಗಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


