ಪಿಎನ್‌ಬಿ ಹಗರಣ: ಯುಕೆ ನ್ಯಾಯಾಲಯದಲ್ಲಿ ನೀರವ್ ಮೋದಿ ಜಾಮೀನು ಅರ್ಜಿ ವಜಾ
ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಯುಕೆ ನ್ಯಾಯಾಲಯದಲ್ಲಿ ದೊಡ್ಡ ಹಿನ್ನೆಡೆಯಾಗಿದೆ. ಯುಕೆ ನ್ಯಾಯಾಲಯ ಸೋಮವಾರ ಮೋದಿಯ ಜಾಮೀನು ಅರ್ಜಿಯನ್ನು ಮತ್ತೊಮ್ಮೆ ತಿರಸ್ಕರಿಸಿದೆ.

ಲಂಡನ್: ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಯುಕೆ ನ್ಯಾಯಾಲಯದಲ್ಲಿ ದೊಡ್ಡ ಹಿನ್ನೆಡೆಯಾಗಿದೆ. ಯುಕೆ ನ್ಯಾಯಾಲಯ ಸೋಮವಾರ ಮೋದಿಯ ಜಾಮೀನು ಅರ್ಜಿಯನ್ನು ಮತ್ತೊಮ್ಮೆ ತಿರಸ್ಕರಿಸಿದೆ.
ಈ ತಿಂಗಳ ಆರಂಭದಲ್ಲಿ, ಯುಕೆ ನ್ಯಾಯಾಲಯವು ಪ್ರಸ್ತುತ ನಡೆಯುತ್ತಿರುವ ಹಸ್ತಾಂತರ ಸಂಬಂಧ ವಿಚಾರಣೆಯಲ್ಲಿ ಮುಂದಿನ ನಿಗದಿತ ವಿಚಾರಣೆಯವರೆಗೆ ನೀರವ್ ಮೋದಿಯ ರಿಮಾಂಡ್ ಅನ್ನು ವಿಸ್ತರಿಸಿ ಆದೇಶಿಸಿತ್ತು.
ಕಳೆದ ತಿಂಗಳು, ಮೋದಿ ಕಾನೂನು ಸಲಹೆಗಾರ ಯುಕೆ ನ್ಯಾಯಾಲಯಕ್ಕೆ ತಿಳಿಸಿದಂತೆ ನೀರವ್ ಮೋದಿ ಭಾರತದಲ್ಲಿ ನ್ಯಾಯಯುತ ವಿಚಾರಣೆಯನ್ನು ಎದುರಿಸುವ ಸಾಧ್ಯತೆ ಇಲ್ಲ ಅವರ ಪ್ರಕರಣದ ರಾಜಕೀಯ ಸ್ವರೂಪ ಪಡೆಯಬಹುದು, ಮತ್ತು ಭಾರತೀಯ ಕಾರಾಗೃಹಗಳಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯಗಳ ಕೊರತೆ ಇದ್ದು ಅವರು "ಆತ್ಮಹತ್ಯೆಯ ಅಪಾಯ" ವನ್ನು ಎದುರಿಸುತ್ತಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿಅಂದಾಜು 2 ಬಿಲಿಯನ್ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪದ ಮೇಲೆ 49 ವರ್ಷದ ವಜ್ರದ ವ್ಯಾಪಾರಿ ಭಾರತಕ್ಕೆ ಬೇಕಾಗಿರುವವನಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


