ವಾಣಿಜ್ಯ

ಟಿಸಿಎಸ್ ಸಂಸ್ಥಾಪಕ, ಭಾರತದ ಐಟಿ ಉದ್ಯಮದ ಪಿತಾಮಹ ಎಫ್ ಸಿ ಕೊಹ್ಲಿ ನಿಧನ

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌(ಟಿಸಿಎಸ್)ನ ಸ್ಥಾಪಕ ಮತ್ತು ಭಾರತದ ಐಟಿ ಉದ್ಯಮದ ಪಿತಾಮಹ ಎಂದೇ ಕರೆಯಲ್ಪಡುವ ಫಕೀರ್ ಚಂದ್ ಕೊಹ್ಲಿ ಅವರು ಗುರುವಾರ ನಿಧನರಾಗಿದ್ದಾರೆ.

ಟಿಸಿಎಸ್ ಸಂಸ್ಥಾಪಕ, ಭಾರತದ ಐಟಿ ಉದ್ಯಮದ ಪಿತಾಮಹ ಎಫ್ ಸಿ ಕೊಹ್ಲಿ ನಿಧನ
ಎಫ್ ಸಿ ಕೊಹ್ಲಿ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌(ಟಿಸಿಎಸ್)ನ ಸ್ಥಾಪಕ ಮತ್ತು ಭಾರತದ ಐಟಿ ಉದ್ಯಮದ ಪಿತಾಮಹ ಎಂದೇ ಕರೆಯಲ್ಪಡುವ ಫಕೀರ್ ಚಂದ್ ಕೊಹ್ಲಿ ಅವರು ಗುರುವಾರ ನಿಧನರಾಗಿದ್ದಾರೆ.

ಟಿಸಿಎಸ್ ನ ಮೊದಲ ಸಿಇಒ ಆಗಿದ್ದ 96 ವರ್ಷದ ಎಫ್ ಸಿ ಕೊಹ್ಲಿ ಅವರು ಇಂದು ನಿಧನರಾಗಿದ್ದು, ನಾಸ್ಕಾಮ್ ಟ್ವೀಟ್ ಮೂಲಕ ಅವರಿಗೆ ಸಂತಾಪ ಸೂಚಿಸಿದೆ.

"ನಿಜವಾದ ದೂರದೃಷ್ಟಿ ಹೊಂದಿದ್ದ ಮತ್ತು ಭಾರತೀಯ ಸಾಫ್ಟ್‌ವೇರ್ ಉದ್ಯಮದ ಪಿತಾಮಹ - ಎಫ್‌ಸಿ ಕೊಹ್ಲಿ ಅವರು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಮತ್ತು ನಾಸ್ಕಾಮ್‌ನಲ್ಲಿ ಗಮನಾರ್ಹ ನಾಯಕತ್ವಕ್ಕಾಗಿ ಅವರನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುವುದು. ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು" ಎಂದು ನಾಸ್ಕಾಮ್ ಟ್ವೀಟ್ ಮಾಡಿದೆ.

ಎಫ್‌ಸಿ ಕೊಹ್ಲಿ ಅವರು 1924ರ ಮಾರ್ಚ್ 19 ರಂದು ಬ್ರಿಟೀಷ್ ಆಡಳಿತದ ಪೇಶಾವರ್ ನಲ್ಲಿ ಜನಿಸಿದರು. ಪೇಶಾವರದಲ್ಲಿಯೇ ಶಾಲಾ ಶಿಕ್ಷಣವನ್ನು ಮಾಡಿದ ಅವರು, ಲಾಹೋರ್‌ನ ಪಂಜಾಬ್ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಬಿಎಸ್ಸಿ ಪದವಿ ಪಡೆದರು. ನಂತರ 1948 ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮುಗಿಸಿದರು. ಕೆನಡಿಯನ್ ಜನರಲ್ ಎಲೆಕ್ಟ್ರಿಕ್ ಕಂಪನಿಯಲ್ಲಿ ಒಂದು ವರ್ಷ ಕೆಲಸ ಮಾಡಿದರು ಮತ್ತು 1950 ರಲ್ಲಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಎಸ್ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.