2020 ಆರ್ಥಿಕ ವರ್ಷದಲ್ಲಿ ವಿಪ್ರೋ ಅಜಿಮ್ ಪ್ರೇಮ್ ಜಿ ಅತ್ಯಂತ ಉದಾರಿ ಭಾರತೀಯ
2020 ನೇ ಆರ್ಥಿಕ ವರ್ಷದಲ್ಲಿ ಐಟಿ ಕಂಪನಿ ವಿಪ್ರೋ ಮುಖ್ಯಸ್ಥ ಅಜಿಮ್ ಪ್ರೇಮ್ ಜಿ ದಿನವೊಂದಕ್ಕೆ 22 ಕೋಟಿಯ ಲೆಕ್ಕದಲ್ಲಿ ವರ್ಷದಲ್ಲಿ 7,904 ಕೋಟಿ ರೂಪಾಯಿ ಸಮಾಜಕ್ಕೆ, ಸಾಮಾಜಿಕ ಕೆಲಸಗಳಿಗಾಗಿ ದಾನ ನೀಡಿದ್ದಾರೆ.

2020 ನೇ ಆರ್ಥಿಕ ವರ್ಷದಲ್ಲಿ ಐಟಿ ಕಂಪನಿ ವಿಪ್ರೋ ಮುಖ್ಯಸ್ಥ ಅಜಿಮ್ ಪ್ರೇಮ್ ಜಿ ದಿನವೊಂದಕ್ಕೆ 22 ಕೋಟಿಯ ಲೆಕ್ಕದಲ್ಲಿ ವರ್ಷದಲ್ಲಿ 7,904 ಕೋಟಿ ರೂಪಾಯಿ ಸಮಾಜಕ್ಕೆ, ಸಾಮಾಜಿಕ ಕೆಲಸಗಳಿಗಾಗಿ ದಾನ ನೀಡಿದ್ದಾರೆ.
ಈ ಮೂಲಕ 2020 ನೇ ಸಾಲಿನಲ್ಲಿ ಭಾರತದ ಅತ್ಯಂತ ಉದಾರಿ ಉದ್ಯಮಿ ಎಂಬ ಹೆಗ್ಗಳಿಕೆಗೆ ಅಜಿಮ್ ಪ್ರೇಮ್ ಜಿ ಭಾಜನರಾಗಿದ್ದಾರೆ.
ಹೆಚ್ ಸಿಎಲ್ ಟೆಕ್ನಾಲಜೀಸ್ ನ ಶಿವ್ ನಡಾರ್ ಕಳೆದ ವರ್ಷ ಅತಿ ಹೆಚ್ಚು ದಾನ ಮಾಡಿದ್ದ ಉದಾರಿ ಉದ್ಯಮಿ ಎಂಬ ಹೆಗ್ಗಳಿಕೆ ಪಡೆದಿದ್ದರು. ಈ ಬಾರಿ ಅವರನ್ನು ಅಜಿಮ್ ಪ್ರೇಮ್ ಜಿ ಹಿಂದಿಕ್ಕಿದ್ದಾರೆ ಎಂದು
ಹುರುನ್ ರಿಪೋರ್ಟ್ ಇಂಡಿಯಾ ಮತ್ತು ಎಡೆಲ್ಗೈವ್ ಫೌಂಡೇಶನ್ ಮೂಲಕ ತಿಳಿದುಬಂದಿದೆ.
ನಡಾರ್ ಫೌಂಡೇಶನ್ 2020 ನೇ ಸಾಲಿನಲ್ಲಿ 795 ಕೋಟಿ ರೂಪಾಯಿ ದಾನ ನೀಡಿದ್ದರೆ ಕಳೆದ ವರ್ಷ 826 ಕೋಟಿ ರೂಪಾಯಿ ದಾನ ನೀಡಿದ್ದರು. ಕಳೆದ ವರ್ಷ ಪ್ರೇಮ್ ಜಿ 426 ಕೋಟಿ ರೂಪಾಯಿ ಸಮಾಜಿಕ ಕಾರ್ಯಗಳಿಗೆ ತೊಡಗಿಸಿದ್ದರು.
ರಿಲಾಯನ್ಸ್ ಇಂಡಸ್ಟ್ರಿಯ ಮುಖೇಶ್ ಅಂಬಾನಿ 458 ಕೋಟಿ ರೂಪಾಯಿಗಳ ದಾನ ನೀಡುವ ದಾನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅಂಬಾನಿ 402 ಕೋಟಿ ದಾನ ನೀಡಿದ್ದರು.
ಕೋವಿಡ್-19 ಸಂದರ್ಭದಲ್ಲಿ ಉದ್ಯಮಿಗಳು ಪರಿಸ್ಥಿತಿ ನಿಭಾಯಿಸುವುದಕ್ಕೆ ಸಹಕಾರಿಯಾಗಿ ಪಿಎಂ ಕೇರ್ಸ್ ಗೂ ಹಣ ನೀಡುತ್ತಿದ್ದು, 1,500 ಕೋಟಿ ರೂಪಾಯಿ ಘೋಷಣೆ ಮಾಡುವ ಮೂಲಕ ಅತಿ ಹೆಚ್ಚು ದಾನ ಮಾಡಿದ್ದಾರೆ. ಈ ಬಳಿಕ 1,125 ಕೋಟಿ ರೂಪಾಯಿಗಳನ್ನು ಅಜಿಂ ಪ್ರೇಮ್ ಜಿ ನೀಡಿದ್ದು ಅಂಬಾನಿ 510 ಕೋಟಿ ರೂಪಾಯಿ ನೀಡಿದ್ದರೆ, ಆದಿತ್ಯ ಬಿರ್ಲಾ ಗ್ರೂಪ್ 400 ಕೋಟಿ ರೂಪಾಯಿಗಳನ್ನು ನೀಡಿದೆ.
10 ಕೋಟಿಗಳಿಗಿಂತಲೂ ಹೆಚ್ಚು ದಾನ ಮಾಡಿದವರ ವ್ಯಕ್ತಿಗಳ ಪಟ್ಟಿ ಕಳೆದ ವರ್ಷ ಶೇ.72 ರಷ್ಟು ಇದ್ದದ್ದು ಈ ವರ್ಷ ಶೇ.78 ರಷ್ಟು ಬೆಳೆದಿದೆ. ಎಟಿಇ ಚಂದ್ರ ಫೌಂಡೇಶನ್ ಮೂಲಕ ಅಮಿತ್ ಚಂದ್ರ ಹಾಗೂ ಅರ್ಚನ ಚಂದ್ರ 27 ಕೋಟಿ ನೀಡುವ ಮೂಲಕ ಈ ಪಟ್ಟಿಗೆ ಸೇರ್ಪಡೆಯಾದ ಮೊದಲ ಪ್ರೊಫೆಷನಲ್ ಮ್ಯಾನೇಜರ್ ಗಳಾಗಿದ್ದಾರೆ.
ಇನ್ಫೋಸಿಸ್ ನ ಮೂವರು ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ (159 ಕೋಟಿ) ಎಸ್ ಗೋಪಾಲಕೃಷ್ಣನ್ (50 ಕೋಟಿ) ಹಾಗೂ ಎಸ್ ಡಿ ಶಿಬುಲಾಲ್ (32 ಕೋಟಿ ರೂಪಾಯಿ) ದಾನ ನೀಡಿದ್ದಾರೆ. 90 ದಾನಿಗಳ ಹಣದಿಂದ ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚು ಹಣ ಹರಿದುಬಂದಿದ್ದು ಅಜಿಮ್ ಪ್ರೇಮ್ ಜಿ ಹಾಗೂ ನಡಾರ್ ಮೂಲಕ 9,324 ಕೋಟಿ ಬಂದಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.
ಶಿಕ್ಷಣದ ನಂತರ ವಿಪತ್ತು ನಿರ್ವಹಣೆ ಹಾಗೂ ಪುನರ್ವಸತಿ ಅತಿ ಹೆಚ್ಚು ಹಣ ಪಡೆದಿರುವ ಕ್ಷೇತ್ರವಾಗಿದ್ದು 41 ದಾನಿಗಳು ಹಣ ನೀಡಿದ್ದಾರೆ. ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್ ಅತಿ ಕಿರಿಯ ದಾನಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


