ವಾಣಿಜ್ಯ

ಹಬ್ಬಗಳ ಋತುವಿನಲ್ಲಿ ಗ್ರಾಹಕರಿಗೆ ಶಾಕ್! ಬಂಗಾರದ ಬೆಲೆ 791 ರೂ. ಏರಿಕೆ, ಬೆಳ್ಳಿಯೂ ದುಬಾರಿ

ಹಬ್ಬದ ಋತು ಪ್ರಾರಂಭವಾಗಿರುವ ಬೆನ್ನಲ್ಲೇ ಶುಕ್ರವಾರ ಚಿನ್ನದ ಬೆಲೆಯಲ್ಲಿ 791 ರೂ.ಏರಿಕೆ ಕಂಡುಬಂದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ. ಈ ಬೆಲೆ ಏರಿಕೆಯಿಂದ ಹತ್ತು ಗ್ರಾಂ ಚಿನ್ನದ ಬೆಲೆ 51,717 ರೂ.ಗೆ ಏರಿಕೆಯಾಗಿದೆ.

ಹಬ್ಬಗಳ ಋತುವಿನಲ್ಲಿ ಗ್ರಾಹಕರಿಗೆ ಶಾಕ್! ಬಂಗಾರದ ಬೆಲೆ 791 ರೂ. ಏರಿಕೆ, ಬೆಳ್ಳಿಯೂ ದುಬಾರಿ
Published On :

ನವದೆಹಲಿ: ಹಬ್ಬದ ಋತು ಪ್ರಾರಂಭವಾಗಿರುವ ಬೆನ್ನಲ್ಲೇ ಶುಕ್ರವಾರ ಚಿನ್ನದ ಬೆಲೆಯಲ್ಲಿ 791 ರೂ.ಏರಿಕೆ ಕಂಡುಬಂದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ. ಈ ಬೆಲೆ ಏರಿಕೆಯಿಂದ ಹತ್ತು ಗ್ರಾಂ ಚಿನ್ನದ ಬೆಲೆ 51,717 ರೂ.ಗೆ ಏರಿಕೆಯಾಗಿದೆ. 

ಕಳೆದ ವಹಿವಾಟಿನಲ್ಲಿ ಇದು 10 ಗ್ರಾಂಗೆ 50,926 ರೂ. ಇತ್ತು. ಚಿನ್ನದ ಬೆಲೆ ಏರಿಕೆಯೊಂದಿಗೆ ಬೆಳ್ಳಿ ದರ ಸಹ ಏರಿಕೆಯಾಗಿದ್ದು ಕೆ.ಜಿ.ಗೆ 2,147 ರೂ ಏರಿಕೆ ದಾಖಲಾಗಿದೆ. ಇದರಿಂದಾಗಿ ಹಿಂದಿನ 62,431 ರೂ.ಗಳಿಂದ ಕೆಜಿ ಬೆಳ್ಳಿ ಬೆಲೆ 64,578 ರೂ.ಗೆ ಜಿಗಿತ ಕಂಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನಔನ್ಸ್ ಗೆ 1,950 ಡಾಲರ್ ಬೆಳ್ಳಿ ಔನ್ಸ್ ಗೆ ಗೆ 25.44 ಡಾಲರ್‌ ಬೆಲೆ ದಾಖಲಿಸಿದೆ.

ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಕಮಾಡಿಟೀಸ್)ತಪನ್ ಪಟೇಲ್ ಮಾತನಾಡಿ, ಹೆಚ್ಚಿನ ಉತ್ತೇಜಕ ಪ್ಯಾಕೇಜ್ ನಿರೀಕ್ಷೆಯ ಮೇರೆಗೆ ಚಿನ್ನದ ಬೆಲೆ ಏರಿಕೆಯಾಗಿದೆ ಎಂದಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.