ಲಾಕ್‌ಡೌನ್ 4.0: ಮೇ 19ರಿಂದ ಬೆಂಗಳೂರು ಸೇರಿದಂತೆ ರಾಜ್ಯದ ನಾಲ್ಕು ನಗರಗಳಲ್ಲಿ ಓಲಾ ಸೇವೆ ಪುನಾರಂಭ
ದೇಶಾದ್ಯಂತ ನಾಲ್ಕನೇ ಹಂತದ ಕೊರೋನಾ ಲಾಕ್‌ಡೌನ್‌ನ ಅಂಗವಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಆಧಾರದ ಮೇಲೆ ಕ್ಯಾಬ್ ಸೇವಾ ಕಂಪನಿ ಓಲಾ ತನ್ನ ಸೇವೆಗಳನ್ನು ಪುನಾರಂಭಿಸಲು ನಿರ್ಧರಿಸಿದ್ದು ಇದರ ಅಂಗವಾಗಿ ಮಂಗಳವಾರದಿಂದ ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕdದ ನಾಲ್ಕು ನಗರಗಳಲ್ಲಿ ಕ್ಯಾಬ್ ಸಂಚಾರ ನಡೆಸಲಿದೆ.

ಬೆಂಗಳೂರು: ದೇಶಾದ್ಯಂತ ನಾಲ್ಕನೇ ಹಂತದ ಕೊರೋನಾ ಲಾಕ್‌ಡೌನ್‌ನ ಅಂಗವಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಆಧಾರದ ಮೇಲೆ ಕ್ಯಾಬ್ ಸೇವಾ ಕಂಪನಿ ಓಲಾ ತನ್ನ ಸೇವೆಗಳನ್ನು ಪುನಾರಂಭಿಸಲು ನಿರ್ಧರಿಸಿದ್ದು ಇದರ ಅಂಗವಾಗಿ ಮಂಗಳವಾರದಿಂದ ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕdದ ನಾಲ್ಕು ನಗರಗಳಲ್ಲಿ ಕ್ಯಾಬ್ ಸಂಚಾರ ನಡೆಸಲಿದೆ.
ಈ ಸೇವೆಗಳನ್ನು ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡಗಳಲ್ಲಿ "ಉನ್ನತ ಮಟ್ಟದ" ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಒದಗಿಸಲಾಗುತ್ತದೆ ಸಾರ್ವಜನಿಕರಿಗೆ ನಗರದೊಳಗಿನ ಪ್ರಯಾಣಕ್ಕಾಗಿ ಕ್ಯಾಬ್‌ಗಳು ಮತ್ತು ಆಟೋರಿಕ್ಷಾಗಳನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ ಎಂದು ಓಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊರೋನಾ ಕಾರಣದಿಂದ ಮಾರ್ಚಿನಲ್ಲಿ ಲಾಕ್ ಡೌನ್ ಪ್ರಾರಂಬವಾದಂದಿನಿಂದ ಬ್ ಸೇವೆಗಳನ್ನು ಸ್ಥಗಿತವಾಗಿತ್ತು.
ಚಾಲಕ-ಗ್ರಾಹಕರು ತಲಾ ಐದು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಕಡ್ಡಾಯಗೊಳಿಸಿದ್ದು ಸಾಮಾಜಿಕ ಅ<ತರ, ನೈರ್ಮಲ್ಯೀಕರಣ ಕ್ರಮಗಳು ಮತ್ತು ವೈಯಕ್ತಿಕ ನೈರ್ಮಲ್ಯ ಶಿಷ್ಟಾಚಾರಗಳನ್ನು ಎಲ್ಲಾ ಸಮಯದಲ್ಲೂ ಅಭ್ಯಾಸ ಮಾಡುವುದು ಕಡ್ಡಾಯ. ಕೊರೋನಾ ಲಾಕ್‌ಡೌನ್‌ನಿಂದಾಗಿ ಆದಾಯದ ಮೂಲವನ್ನು ಕಳೆದುಕೊಂಡಿರುವ ರಾಜ್ಯದ ಕ್ಯಾಬ್ ಮತ್ತು ಆಟೋರಿಕ್ಷಾ ಚಾಲಕರ ಕುಟುಂಬಗಳಿಗೆ ಈ ಸೇವಾ ಪುನಾರಂಭವಾಗುತ್ತಿರುವುದು ನೆಮ್ಮದಿ ನೀಡುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


