ವಾಣಿಜ್ಯ

ಜಿಯೋಫೈಬರ್ ಬಳಕೆದಾರರಿಗೆ ಬಂಪರ್ ಆಫರ್ ಘೋಷಿಸಿದ ಜಿಯೋ!

ದೇಶದೆಲ್ಲೆಡೆಯ ಜಿಯೋಫೈಬರ್ ಬಳಕೆದಾರರು ಇದೀಗ ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ಅಮೆಜಾನ್ ಪ್ರೈಮ್ ಕಂಟೆಂಟ್ ಅನ್ನು ವೀಕ್ಷಿಸಬಹುದಾಗಿದೆ.

ಜಿಯೋಫೈಬರ್ ಬಳಕೆದಾರರಿಗೆ ಬಂಪರ್ ಆಫರ್ ಘೋಷಿಸಿದ ಜಿಯೋ!
ಜಿಯೋ
Published On :

ಮುಂಬೈ: ದೇಶದೆಲ್ಲೆಡೆಯ ಜಿಯೋಫೈಬರ್ ಬಳಕೆದಾರರು ಇದೀಗ ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ಅಮೆಜಾನ್ ಪ್ರೈಮ್ ಕಂಟೆಂಟ್ ಅನ್ನು ವೀಕ್ಷಿಸಬಹುದಾಗಿದೆ. 

ಜಿಯೋಫೈಬರ್‌ನ ಸದ್ಯದ ಅಥವಾ ಹೊಸ ಬಳಕೆದಾರರಿಗೆ, ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ, ರೂ. 999 ಮೌಲ್ಯದ ಅಮೆಜಾನ್ ಪ್ರೈಮ್ ಒಂದು ವರ್ಷದ ಸದಸ್ಯತ್ಯವನ್ನು ರಿಲಯನ್ಸ್ ಜಿಯೋ ಘೋಷಿಸಿದೆ. ಅಮಿತಾಭ್ ಬಚ್ಚನ್ ಹಾಗೂ ಆಯುಷ್ಮಾನ್ ಖುರಾನಾ ಅಭಿನಯದ ಗುಲಾಬೊ ಸೀತಾಬೊ ಅಮೆಜಾನ್ ಪ್ರೈಮ್‌ನಲ್ಲಿ ಶುಕ್ರವಾರ ಸಂಜೆ ಪ್ರದರ್ಶನಗೊಳ್ಳುತ್ತಿದೆ. ಜಿಯೋಫೈಬರ್ ಬಳಕೆದಾರರು ಈ ಪ್ರೀಮಿಯರ್ ಅನ್ನು ಆನಂದಿಸಬಹುದಾಗಿದೆ. ಕನ್ನಡ, ಹಿಂದಿ, ಇಂಗ್ಲಿಷ್, ಮರಾಠಿ, ತಮಿಳು, ಮಲಯಾಳಂ, ಗುಜರಾತಿ, ತೆಲುಗು, ಪಂಜಾಬಿ ಮತ್ತು ಬಂಗಾಳಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅಮೆಜಾನ್ ಪ್ರೈಮ್ ವೀಡಿಯೊ ಅನ್ನೂ ಬಳಕೆದಾರರು ವೀಕ್ಷಿಸಬಹುದು.

ಉತ್ಪನ್ನಗಳ ಉಚಿತ ಹಾಗೂ ಕ್ಷಿಪ್ರ ಬಟವಾಡೆ, ಅತ್ಯುತ್ತಮ ಕೊಡುಗೆಗಳನ್ನು ಮುಂಚಿತವಾಗಿ ಪಡೆಯುವ ಅವಕಾಶ, ಜಾಹೀರಾತು-ಮುಕ್ತ ಪ್ರೈಮ್ ಮ್ಯೂಸಿಕ್, ಪ್ರೈಮ್ ಗೇಮಿಂಗ್ ಮತ್ತು ಪ್ರೈಮ್ ರೀಡಿಂಗ್ ಸವಲತ್ತುಗಳನ್ನು ಕೂಡ ಬಳಕೆದಾರರು ಒಂದು ವರ್ಷದವರೆಗೆ ಪಡೆಯಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.