ಟ್ರೈನ್ 18 ಯೋಜನೆಯಿಂದ ಚೀನಾ ಕಂಪನಿಗಳನ್ನು ದೂರವಿಡಿ: ಸಿಎಐಟಿ
ದೇಶಿಯ ರೈಲು ವಂದೇ ಭಾರತ್ ಎಂದೇ ಖ್ಯಾತಿ ಪಡೆದಿರುವ ಟ್ರೈನ್ 18 ಯೋಜನೆಯಿಂದ ಚೀನಾ ಕಂಪನಿಗಳನ್ನು ದೂರವಿಡಿ ಎಂದು ಕಾನ್ಪಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಆಗ್ರಹಿಸಿದೆ.

ದೇಶಿಯ ರೈಲು ವಂದೇ ಭಾರತ್ ಎಂದೇ ಖ್ಯಾತಿ ಪಡೆದಿರುವ ಟ್ರೈನ್ 18 ಯೋಜನೆಯಿಂದ ಚೀನಾ ಕಂಪನಿಗಳನ್ನು ದೂರವಿಡಿ ಎಂದು ಕಾನ್ಪಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಆಗ್ರಹಿಸಿದೆ.
ಟ್ರೈನ್ 18 ಯೋಜನೆಗಾಗಿ ಆಹ್ವಾನಿಸಲಾಗಿರುವ ಜಾಗತಿಕ ಟೆಂಡರ್ ನಲ್ಲಿ ಚೀನಾ ಕಂಪನಿಗಳಿಗೆ ಅವಕಾಶ ನೀಡಬಾರದು ಎಂದು ಸಿಎಐಟಿ ಒತ್ತಾಯಿಸಿದೆ.
ಗಡಿ ಭಾಗದಲ್ಲಿ ಉಂಟಾದ ಸಂಘರ್ಷದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಚೀನಾ ಉತ್ಪನ್ನಗಳು ಸೇವೆಗಳನ್ನು ಬಹಿಷ್ಕರಿಸಲು ಕರೆ ನೀಡಲಾಗಿದೆ. ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಸಿಎಐಟಿ ಟ್ರೈನ್ 18 ಯೋಜನೆಗೆ ಕರೆದಿರುವ ಟೆಂಡರ್ ನಿಂದ ಚೀನಾದ ಸಿಆರ್ ಆರ್ ಸಿ ಕಾರ್ಪೊರೇಷನ್ ನ್ನು ದೂರವಿಡಬೇಕೆಂದು ಮನವಿ ಮಾಡಿದೆ.
ಟ್ರೈನ್ 18 ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯಡಿ ಮಾಡಲಾಗುತ್ತಿದೆ. ಆದ್ದರಿಂದ ಈಗಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚೀನಾ ಕಂಪನಿಗಳಿಗೆ ಅವಕಾಶ ನೀಡಬಾರದು ಎಂದು ಪತ್ರದ ಮನವಿ ಮಾಡಲಾಗಿದೆ.
44 ಟ್ರೈನ್ 18 ಗಳಿಗೆ ಬೇಕಾಗಿರುವ ಭಾಗಗಳನ್ನು ಪೂರೈಸುವ 1,500 ಕೋಟಿ ಮೊತ್ತದ ಯೋಜನೆಗೆ ಕೇಂದ್ರ ಸರ್ಕಾರ ಟೆಂಡರ್ ಕರೆದಿತ್ತು. ಈ ಟೆಂಡರ್ ಗೆ ಚೀನಾದ ಸಂಸ್ಥೆಯೂ ಬಿಡ್ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


