ವಾಣಿಜ್ಯ

ನಾಳೆಯಿಂದ ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಯುಎಫ್‍ಬಿಯು ಕರೆ: ಗ್ರಾಹಕರಿಗೆ ಸಂಕಷ್ಟ

ಬ್ಯಾಂಕ್ ಕಾರ್ಮಿಕರು ಮತ್ತು ಅಧಿಕಾರಿಗಳ 9 ಒಕ್ಕೂಟಗಳ ವೇದಿಕೆಯಾಗಿರುವ ಬ್ಯಾಂಕ್ ಕಾರ್ಮಿಕ ಒಕ್ಕೂಟಗಳ ಸಂಯುಕ್ತ ಒಕ್ಕೂಟ(ಯುಎಫ್ ಬಿಯು) ಶುಕ್ರವಾರದಿಂದ ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿರುವುದರಿಂದ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ನಾಳೆಯಿಂದ ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಯುಎಫ್‍ಬಿಯು ಕರೆ: ಗ್ರಾಹಕರಿಗೆ ಸಂಕಷ್ಟ
ಬ್ಯಾಂಕ್
Published On :

ಮುಂಬೈ: ಬ್ಯಾಂಕ್ ಕಾರ್ಮಿಕರು ಮತ್ತು ಅಧಿಕಾರಿಗಳ 9 ಒಕ್ಕೂಟಗಳ ವೇದಿಕೆಯಾಗಿರುವ ಬ್ಯಾಂಕ್ ಕಾರ್ಮಿಕ ಒಕ್ಕೂಟಗಳ ಸಂಯುಕ್ತ ಒಕ್ಕೂಟ(ಯುಎಫ್ ಬಿಯು) ಶುಕ್ರವಾರದಿಂದ ಎರಡು ದಿನಗಳ  ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿರುವುದರಿಂದ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಮುಂಬೈನಲ್ಲಿ ಗುರುವಾರ ಭಾರತೀಯ ಬ್ಯಾಂಕ್ ಗಳ ಸಂಘ (ಐಬಿಎ) ಮತ್ತು ಯುಎಫ್ ಬಿಯು ನಡುವೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಬ್ಯಾಂಕ್ ಮುಷ್ಕರ ನಡೆಸಲು ಯುಎಫ್ ಬಿಯು ನಿರ್ಧರಿಸಿದೆ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ)ದ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಂ ಯುಎನ್ ಐನೊಂದಿಗೆ ಮಾತನಾಡಿ, ಯುಎಫ್ ಬಿಯು ಪ್ರತಿನಿಧಿಗಳು ಮತ್ತು ಐಬಿಎ ವೇತನ ಸಂದಾನ ಸಮಿತಿ ಅಧ್ಯಕ್ಷ ರಾಜ್ ಕಿರಾನ್ ರೈ ನಡುವೆ ನಡೆದ ಮಾತುಕತೆಯಲ್ಲಿ ಯಾವುದೇ ಸಕಾರಾತ್ಮಕ ಫಲಿತಾಂಶ ದೊರೆತಿಲ್ಲ ಎಂದು ಹೇಳಿದ್ದಾರೆ. 

ಇದಕ್ಕೂ ಮುನ್ನ, ಜ 27 ರಂದು ಕೇಂದ್ರ ಕಾರ್ಮಿಕ ಸಚಿವಾಲಯದ ಮುಖ್ಯ ಕಾರ್ಮಿಕ ಆಯುಕ್ತ ರಾಜನ್ ವರ್ಮಾ ಅವರು ನವದೆಹಲಿಯ ತಮ್ಮ ಕಚೇರಿಯಲ್ಲಿ ಯುಎಫ್ ಬಿಯು ಪ್ರತಿನಿಧಿಗಳೊಂದಿಗೆ ಕಾರ್ಮಿಕರ ವೇತನ ಪರಿಷ್ಕರಣೆ ಮತು ಇತರ ಬೇಡಿಕೆಗಳ ಕುರಿತು ನಡೆದ ನಡೆಸಿದ ಸಂಧಾನ ಸಭೆಯಲ್ಲಿ ಯಾವುದೇ ಸಕಾರಾತ್ಮಕ ಫಲಿತಾಂಶ ಕಂಡುಬಂದಿರಲಿಲ್ಲ.

ಶೇ 20ರಷ್ಟು ವೇತನ ಹೆಚ್ಚಳ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಕರೆ ನೀಡಲಾಗಿರುವ ಎರಡು ದಿನಗಳ ಮುಷ್ಕರದಲ್ಲಿ ಸುಮಾರು 10 ಲಕ್ಷ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಎಐಬಿಇಎ, ಎಐಬಿಒಸಿ, ಎನ್ ಸಿಬಿಇ, ಎಐಬಿಒಎ, ಬಿಇಎಫ್ ಐ, ಐಎನ್ ಬಿಇಎಫ್, ಐಎನ್ ಬಿಒಸಿ, ಎನ್ ಒಬಿಡಬ್ಲ್ಯೂ ಮತ್ತು ಎನ್ ಒಬಿಒ ಮುಷ್ಕರದಲ್ಲಿ ಭಾಗವಹಿಸುತ್ತಿರುವ ಒಂಬತ್ತು ಬ್ಯಾಂಕ್ ಒಕ್ಕೂಟಗಳಾಗಿವೆ. ಬರುವ ಮಾರ್ಚ್ 11 ರಿಂದ ದೇಶಾದ್ಯಂತ ಮೂರು ದಿನಗಳ ಮುಷ್ಕರ ಹಾಗೂ ಏಪ್ರಿಲ್ 1 ರಿಂದ ಅನಿರ್ದಿಷ್ಟ ಮುಷ್ಕರ ನಡೆಸಲು ಸಹ ಯುಎಫ್ ಬಿಯು ನಿರ್ಧರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.