ವಾಣಿಜ್ಯ

ಸರ್ಕಾರ ಮತ್ತು ಉದ್ಯಮಗಳ ನಡುವೆ ವಿಶ್ವಾಸ ಕೊರತೆ ಕೊನೆಯಾಗಬೇಕು: ನಿರ್ಮಲಾ ಸೀತಾರಾಮನ್ 

ಸರ್ಕಾರ ಮತ್ತು ಉದ್ಯಮಗಳ ನಡುವಿನ ವಿಶ್ವಾಸಾರ್ಹ ಕೊರತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಎಲ್ಲಾ ವಿಧದಲ್ಲಿಯೂ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸರ್ಕಾರ ಮತ್ತು ಉದ್ಯಮಗಳ ನಡುವೆ ವಿಶ್ವಾಸ ಕೊರತೆ ಕೊನೆಯಾಗಬೇಕು: ನಿರ್ಮಲಾ ಸೀತಾರಾಮನ್ 
ಚೆನ್ನೈಯಲ್ಲಿ ನಿನ್ನೆ ಪುಸ್ತಕ ಬಿಡುಗಡೆ ಮಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
Published On :

ಚೆನ್ನೈ: ಸರ್ಕಾರ ಮತ್ತು ಉದ್ಯಮಗಳ ನಡುವಿನ ವಿಶ್ವಾಸಾರ್ಹ ಕೊರತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಎಲ್ಲಾ ವಿಧದಲ್ಲಿಯೂ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


ಕಂಪೆನಿ ಕಾಯ್ದೆಯಡಿ ನಿರಪರಾಧೀಕರಿಸುವುದು ಮತ್ತು ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ನಷ್ಟಾಗಬೇಕೆಂಬ ಗುರಿ ತಲುಪಲು ಇಂಡಿಯಾ ಇಂಕ್ ನ ಬೆಂಬಲವನ್ನು ನಿರೀಕ್ಷಿಸಲಾಗುತ್ತಿದೆ ಎಂದು ನಿನ್ನೆ ಅವರು ಚೆನ್ನೈಯಲ್ಲಿ ನಾನಿ ಪಲ್ಕಿವಾಲಾ ಫೌಂಡೇಶನ್ ಏರ್ಪಡಿಸಿದ್ದ 5 ಟ್ರಿಲಿಯನ್ ಆರ್ಥಿಕತೆಗೆ ಭಾರತದ ನೀಲನಕ್ಷೆ ಎಂಬುದರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 


ಭಾರತದಲ್ಲಿ ಶೇಕಡಾ 60ರಷ್ಟು ಜಿಡಿಪಿ ಸೇವಾ ವಲಯದಿಂದ ಬರುತ್ತಿದ್ದು ಅದಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯ ಕಡಿಮೆಯಾಗಿದೆ. ಎಲ್ಲಾ ಉದ್ಯಮಗಳನ್ನು ಸಂಶಯದಿಂದ ಸರ್ಕಾರ ನೋಡುವುದಿಲ್ಲ. ಅದು ನಮ್ಮ ಉದ್ದೇಶ ಕೂಡ ಅಲ್ಲ, ಕಂಪೆನಿ ಕಾಯ್ದೆ ಅಥವಾ ಇತರ ಸಂಬಂಧಪಟ್ಟ ಕಾನೂನುಗಳ ಮೂಲಕ ಪ್ರತಿಯೊಂದನ್ನೂ ನಿರಪರಾಧೀಕರಿಸುವುದು ಇಂದಿಗೂ ಕೂಡ ನಮ್ಮ ಆದ್ಯ ಪ್ರಯತ್ನವಾಗಿದೆ ಎಂದರು.


ನಮಗೆ ಮೇಲ್ವಿಚಾರಣೆ ಮಾಡುವವರು ಬೇಕೆ ಹೊರತು ಎಲ್ಲವನ್ನೂ ಸಂಶಯದಿಂದ ನೋಡುವವರು ಆಗಿರಬಾರದು. ನಮ್ಮಲ್ಲಿರುವ ಕಾನೂನುಗಳೆಲ್ಲವೂ ಸಂಶಯದಿಂದಲೇ ನೋಡುತ್ತದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಚಿವೆ, ಸರ್ಕಾರ 16 ಕಾರ್ಯವಿಧಾನ ಅಪರಾಧಗಳನ್ನು ನಿರಪರಾಧೀಕರಣಗೊಳಿಸಿದ್ದು ಇದರಿಂದ ಜೈಲು ಶಿಕ್ಷೆಯಾಗುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.