ದೇಶದ ಪ್ರಮುಖ 9 ನಗರಗಳಲ್ಲಿ ಮನೆಗಳ ಮಾರಾಟದಲ್ಲಿ ಶೇ. 30ರಷ್ಟು ಕುಸಿತ, ಬೆಂಗಳೂರಿನಲ್ಲಿ ಶೇ.50 ರಷ್ಟು ಕುಸಿತ!
ಆರ್ಥಿಕ ಕುಸಿತದ ಪರಿಣಾಮ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಮನೆಗಳ ಮಾರಾಟದಲ್ಲಿ ಶೇ. 30ರಷ್ಟು ಕುಸಿತವಾಗಿದ್ದು, ದೇಶದ ಪ್ರಮುಖ 9 ನಗರಗಳಲ್ಲಿ ಸುಮಾರು 64 ಸಾವಿರ ಮನೆಗಳು ಮಾರಾಟವಾಗಿವೆ ಎಂದು ಪ್ರಾಪ್ ಟೈಗರ್ಸ್ ವರದಿ ತಿಳಿಸಿದೆ.

ನವದೆಹಲಿ: ಆರ್ಥಿಕ ಕುಸಿತದ ಪರಿಣಾಮ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಮನೆಗಳ ಮಾರಾಟದಲ್ಲಿ ಶೇ. 30ರಷ್ಟು ಕುಸಿತವಾಗಿದ್ದು, ದೇಶದ ಪ್ರಮುಖ 9 ನಗರಗಳಲ್ಲಿ ಸುಮಾರು 64 ಸಾವಿರ ಮನೆಗಳು ಮಾರಾಟವಾಗಿವೆ ಎಂದು ಪ್ರಾಪ್ ಟೈಗರ್ಸ್ ವರದಿ ತಿಳಿಸಿದೆ.
ಮೊದಲ ಒಂಬತ್ತು ತಿಂಗಳಲ್ಲಿ ಗೃಹ ಮಾರುಕಟ್ಟೆ ಶೇ. 13ರಷ್ಟು ಕುಸಿದಿದ್ದು, ಅಕ್ಟೋಬರ್ - ಡಿಸೆಂಬರ್ ಅವಧಿಯಲ್ಲಿ ಭಾರತದ ಒಂಬತ್ತು ಪ್ರಮುಖ ನಗರಗಳಲ್ಲಿ ಮನೆ ಖರೀದಿಯು ಶೇ. 30ರಷ್ಟು ಇಳಿಕೆಯಾಗಿದೆ. ಈ ತ್ರೈಮಾಸಿಕದಲ್ಲಿ ಒಂಬತ್ತು ನಗರಗಳಲ್ಲಿ ಒಟ್ಟು 64 ಸಾವಿರ ಮನೆಗಳು ಮಾರಾಟವಾಗಿದೆ ಎಂದು ವರದಿ ಹೇಳಿದೆ.
ಕಳೆದ ವರ್ಷದ ತ್ರೈಮಾಸಿಕ ಅವಧಿಯಲ್ಲಿ 91,464 ಮನೆಗಳು ಮಾರಾಟವಾಗಿದ್ದವು. ಆದರೆ ಈ ತ್ರೈಮಾಸಿಕ ಅವಧಿಯಲ್ಲಿ 64,034 ಮನೆಗಳು ಮಾತ್ರ ಮಾರಾಟವಾಗಿವೆ.
ವರದಿ ಪ್ರಕಾರ, ಬೆಂಗಳೂರಿನಲ್ಲಿ ಮನೆಗಳ ಮಾರಾಟ ಶೇ. 50ರಷ್ಟು ಕುಸಿದಿದ್ದು, ಈ ಅವಧಿಯಲ್ಲಿ ಕೇವಲ 5 , 155 ಮನೆಗಳು ಮಾತ್ರ ಮಾರಾಟವಾಗಿವೆ. ಹೈದರಾಬಾದ್ ನಂತರದ ಸ್ಥಾನ (ಶೇ.44), ಪುಣೆ(ಶೇ. 39, ನೊಯಿಡಾ(ಶೇ. 38) ಚೆನ್ನೈ ಮತ್ತು ಕೋಲ್ಕತ್ತಾ (ಶೇ.33), ದೆಹಲಿ (ಶೇ. 6), ಮತ್ತು ಮುಂಬೈ ಶೇ. 18 ರಷ್ಟು ಇಳಿಕೆ ದಾಖಲಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


