ಚೀನಾದ ಜ್ಯಾಕ್ ಮಾ ಹಿಂದಿಕ್ಕಿದ ಮುಖೇಶ್ ಅಂಬಾನಿ: ಫೇಸ್ ಬುಕ್ ಜೊತೆಗಿನ ಒಪ್ಪಂದ ನಂತರ ಏಷ್ಯಾದ ಅತಿ ದೊಡ್ಡ ಶ್ರೀಮಂತ
ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಜೊತೆ ಒಪ್ಪಂದ ಮಾಡಿಕೊಂಡ ನಂತರ ರಿಲಾಯನ್ಸ್ ಗ್ರೂಪ್ ಮಾಲೀಕ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

ಮುಂಬಯಿ: ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಜೊತೆ ಒಪ್ಪಂದ ಮಾಡಿಕೊಂಡ ನಂತರ ರಿಲಾಯನ್ಸ್ ಗ್ರೂಪ್ ಮಾಲೀಕ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.
ಫೇಸ್‌ಬುಕ್ ಭಾರತದ ರಿಲಾಯನ್ಸ್ ಜಿಯೋ ಸಂಸ್ಥೆಯ ಶೇ 9.99 ರಷ್ಟು ಷೇರುಗಳನ್ನು ಸುಮಾರು 43,574 ಕೋಟಿ ರೂ ನೀಡಿ ಖರೀದಿಸಿದೆ. ಈ ಬಂಡವಾಳ ಹೂಡಿಕೆ ಒಪ್ಪಂದದ ನಂತರ ಅಂಬಾನಿ ಆಸ್ತಿ ಮೌಲ್ಯ 49.2 ಬಿಲಿಯನ್ ಡಾಲರ್‌ಗೆ ಏರಿಕೆ ಕಂಡಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, ಮುಖೇಶ್ ಅಂಬಾನಿ ಇದೀಗ ಚೀನಾದ ಜ್ಯಾಕ್ ಮಾ ಗಿಂತ ಸುಮಾರು 3.2 ಬಿಲಿಯನ್ ಡಾಲರ್ ನಷ್ಟು ಹೆಚ್ಚು ಆಸ್ತಿ ಹೊಂದಿದ್ದು ಏಷ್ಯಾ ಖಂಡದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ.
ಫೇಸ್‌ಬುಕ್ 2014ರಲ್ಲಿ ವಾಟ್ಸಾಪ್ ಅನ್ನು ಖರೀದಿಸಿದ ನಂತರದ ಅತಿದೊಡ್ಡ ಬಂಡವಾಳ ಹೂಡಿಕೆ ಇದಾಗಿದೆ. ಭಾರತದಲ್ಲಿ ರಿಲಾಯನ್ಸ್‌ನ ಎಲ್ಲಾ ಡಿಜಿಟಲ್ ಸೇವೆಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರಲು 2019ರಲ್ಲಿ ಜಿಯೋ ಪ್ಲಾಟ್‌ಫಾರ್ಮ್ ಅನ್ನು ಅರಂಭಿಸಲಾಗಿತ್ತು.
ಇದೀಗ ಫೇಸ್‌ಬುಕ್ ಹೂಡಿಕೆಯಿಂದಾಗಿ ಜಿಯೋ ಮಾರುಕಟ್ಟೆ ಮೌಲ್ಯವು 4.62 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಅಲ್ಲದೆ, ರಿಲಾಯನ್ಸ್ ಜೊತೆ ಫೇಸ್‌ಬುಕ್ ಮತ್ತು ವಾಟ್ಸಾಪ್ ಒಂದಾಗಿ ಭಾರತದ ಎಲ್ಲಾ ಡಿಜಿಟಲ್ ಸೇವೆಯನ್ನೂ ಒಂದೇ ವೇದಿಕೆಯ ಅಡಿಯಲ್ಲಿ ತರುವುದು ಈ ಒಪ್ಪಂದದ ಮೂಲ ಉದ್ದೇಶ ಎನ್ನಲಾಗುತ್ತಿದೆ.
ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಘಟಕವನ್ನು ಹೊಂದಿರುವ ಮುಖೇಶ್ ಅಂಬಾನಿ ಬುಧವಾರ ಈ ಒಪ್ಪಂದ ನಡೆಯುವವರೆಗೆ 2020ರ ಸೂಚ್ಯಾಂಕದಲ್ಲಿ 14 ಬಿಲಿಯನ್ ಡಾಲರ್‌ನಷ್ಟು ನಷ್ಟ ಅನುಭವಿಸಿದ್ದರು. ಇದನ್ನು ಏಷ್ಯಾದ ಯಾವುದೇ ವ್ಯಕ್ತಿಯ ಅತಿದೊದ್ದ ಕುಸಿತ ಎಂದೇ ಪರಿಗಣಿಸಲಾಗಿತ್ತು. ಆದರೆ, ಫೇಸ್‌ಬುಕ್ ಜೊತೆಗಿನ ಹೊಸ ಒಪ್ಪಂದ ರಿಲಾಯನ್ಸ್ ಮಾರುಕಟ್ಟೆಯಲ್ಲಿ ಹೊಸ ಉತ್ಸಾಹವನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ.
ಜಿಯೋ ಜೊತೆಗಿನ ಸಹಭಾಗಿತ್ವದಿಂದಾಗಿ ಜುಕರ್‌ಬರ್ಗ್ ಭಾರತದಲ್ಲಿ ಡಿಜಿಟಲ್ ವೇದಿಕೆಯನ್ನು ಅನ್ನು ಮತ್ತಷ್ಟು ವಿಸ್ತರಿಸಬಹುದು. ಆನ್‌ಲೈನ್ ಪಾವತಿ ಮತ್ತು ಇ-ಕಾಮರ್ಸ್ ವೇಗವಾಗಿ ಬೆಳೆಯುತ್ತಿರುವ ಭಾರತದಂತಹ ದೇಶದಲ್ಲಿ ಫೇಸ್‌ಬುಕ್ ತನ್ನ ವಿಸ್ತರಣೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಇ-ಕಾಮರ್ಸ್ ವಹಿವಾಟು ಆರಂಭಿಸಿ ಅಮೇಜಾನ್ ಮತ್ತು ವಾಲ್ಮಾರ್ಟ್‌ಗೆ ಸೆಡ್ಡು ಹೊಡೆಯುವುದು ಈ ಒಪ್ಪಂದದ ಗುರಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


