ಕೋವಿಡ್-19 ಲಾಕ್ ಡೌನ್: ಎಲೆಕ್ಟ್ರಾನಿಕ್, ಫೋನ್ ತಯಾರಕರಿಂದ ಗ್ರಾಹಕರಿಗೆ ವಾರೆಂಟಿ ಅವಧಿ ವಿಸ್ತರಣೆ
ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್, ಫೋನ್ ತಯಾರಕರಿಂದ ಗ್ರಾಹಕರಿಗೆ ವಾರೆಂಟಿ ಅವಧಿ ವಿಸ್ತರಣೆ ಮಾಡಲಾಗಿದೆ.

ನವದೆಹಲಿ: ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್, ಫೋನ್ ತಯಾರಕರಿಂದ ಗ್ರಾಹಕರಿಗೆ ವಾರೆಂಟಿ ಅವಧಿ ವಿಸ್ತರಣೆ ಮಾಡಲಾಗಿದೆ.
ಸ್ಯಾಮ್ ಸಂಗ್, ಒನ್ ಪ್ಲಸ್, ಓಪ್ಪೋ ಹಾಗೂ ಇತರ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕಾ ಸಂಸ್ಥೆಗಳು ಮಾರ್ಚ್ 20 ರಿಂದ ಏಪ್ರಿಲ್ 30, 2020 ಅವಧಿಯಲ್ಲಿ ಮುಕ್ತಾಯಗೊಳ್ಳುತ್ತಿದ್ದ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳ ವಾರೆಂಟಿ ಅವಧಿಯನ್ನು ಮೇ.31, 2020 ವರೆಗೆ ವಿಸ್ತರಣೆ ಮಾಡುವುದಾಗಿ ಘೋಷಿಸಿವೆ.
ಒನ್ ಪ್ಲಸ್ ಮೊಬೈಲ್ ಸಂಸ್ಥೆ ಮಾ.1 ರಿಂದ ಕ್ಕೆ ಮುಕ್ತಾಯಗೊಳ್ಳುತ್ತಿದ್ದ ವಾರೆಂಟಿ ಅವಧಿಯನ್ನು ಮೇ.31 ರವರೆಗೆ ವಿಸ್ತರಣೆ ಮಾಡುವುದಾಗಿ ತಿಳಿಸಿದೆ. ಓಪ್ಪೋ ಸಹ ಇದೇ ರೀತಿಯ ಘೋಷಣೆಯನ್ನು ಮಾಡಿದೆ.
ಚೀನಾದೇ ಸಂಸ್ಥೆಯಾಗಿರುವ ಶಿಯೋಮಿ ಪರಿಸ್ಥಿತಿ ಉತ್ತಮಗೊಂಡ ಬಳಿಕ ಗ್ರಾಹಕರಿಗೆ ಅಗತ್ಯವಿರುವ ಸೇವೆಗಳನ್ನು ಒದಗಿಸುತ್ತೇವೆ ಎಂದು ಹೇಳಿದೆ.
ರಿಯಲ್ ಮೀ ತನ್ನ ಉತ್ಪನ್ನಗಳ ವಾರೆಂಟಿ ಅವಧಿಯನ್ನು ಮೇ.31 ವರೆಗೆ ವಿಸ್ತರಿಸಿದ್ದು, ಮಾ.15- ಏಪ್ರಿಲ್-30 ರಿಪ್ಲೇಸ್ಮೆಂಟ್ ಅವಧಿಯನ್ನು 30 ದಿನ ವಿಸ್ತರಣೆ ಮಾಡಿದೆ. ಟಿವಿ, ಫೀಚರ್ ಫೋನ್ ಗಳಂತಹ ವಸ್ತುಗಳ ಮೇಲಿನ ವಾರೆಂಟಿಯನ್ನು 60 ದಿನಗಳ ವರೆಗೆ ವಿಸ್ತರಿಸುವುದಾಗಿ ಘೋಷಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


