ಹಬ್ಬದ ಸಂಭ್ರಮಕ್ಕೆ ಗ್ರಾಹಕರಿಗೆ ಶಾಕ್! ಈರುಳ್ಳಿ ಬಳಿಕ ಟೊಮ್ಯಾಟೋಗೂ ತಟ್ಟಿದ ಬೆಲೆ ಏರಿಕೆ ಬಿಸಿ
ಭಾರೀ ಬೆಲೆ ಏರಿಕೆಯಾಗಿ ಗ್ರಾಹಕರಿಗೆ ಈರುಳ್ಳಿ ಇದಾಗಲೇ ಕಣ್ಣೀರು ತರಿಸುತ್ತಿದ್ದು ಇದೀಗ ಈರುಳ್ಳಿ ಬಳಿಕ ಟೊಮ್ಯಾಟೊ ಕೂಡಾ ಪೂರೈಕೆ ಕೊರತೆಯ ಕಾರಣ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಾಣುತ್ತಿದೆ.ಕಳೆದ ಕೆಲವು ವಾರಗಳಿಂದ, ಟೊಮೆಟೊ ಬೆಲೆ ದೆಹಲಿಯಲ್ಲಿ ಶೇಕಡಾ 70 ರಷ್ಟು ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಹಬ್ಬದ ಋತುವಿನಲ್ಲಿ ಜನರು ಕಷ್ಟ ಎದುರಿಸುವಂತಾಗಿದೆ.

ನವದೆಹಲಿ: ಭಾರೀ ಬೆಲೆ ಏರಿಕೆಯಾಗಿ ಗ್ರಾಹಕರಿಗೆ ಈರುಳ್ಳಿ ಇದಾಗಲೇ ಕಣ್ಣೀರು ತರಿಸುತ್ತಿದ್ದು ಇದೀಗ ಈರುಳ್ಳಿ ಬಳಿಕ ಟೊಮ್ಯಾಟೊ ಕೂಡಾ ಪೂರೈಕೆ ಕೊರತೆಯ ಕಾರಣ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಾಣುತ್ತಿದೆ.ಕಳೆದ ಕೆಲವು ವಾರಗಳಿಂದ, ಟೊಮೆಟೊ ಬೆಲೆ ದೆಹಲಿಯಲ್ಲಿ ಶೇಕಡಾ 70 ರಷ್ಟು ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಹಬ್ಬದ ಋತುವಿನಲ್ಲಿ ಜನರು ಕಷ್ಟ ಎದುರಿಸುವಂತಾಗಿದೆ.
ಭಾರೀ ಮಳೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿ ತರಕಾರಿಗಳ ಬೆಲೆ ಏರಿಕೆಯಾಗಿದೆ. ಕಳೆದ ವರ್ಷ ಅದೇ ಸಮಯದಲ್ಲಿ ಈರುಳ್ಳಿಯ ಬೆಲೆಗಳು ದ್ವಿಗುಣವಾಗಿದ್ದರೂ ಟೊಮ್ಯಾಟೊ ಬೆಲೆಗಳಲ್ಲಿ ಅಂತಹಾ ಏರುಪೇರಾಗಿರಲಿಲ್ಲ.
ದೆಹಲಿ-ಎನ್‌ಸಿಆರ್‌ನಲ್ಲಿನ ಟೊಮ್ಯಾಟೋ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು ಕಳೆದ ಕೆಲವು ದಿನಗಳಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ 40-60 ರೂ ಗೆ ತಲುಪಿದೆ.ಭವಿಷ್ಯದಲ್ಲಿ ಬೆಲೆಗಳು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಮಾತ್ರವಲ್ಲ ದೇಶದ ವಿವಿಧೆಡೆ ಟೊಮ್ಯಾಟೋ ಬೆಲೆತೀವ್ರವಾಗಿ ಹೆಚ್ಚಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್ ಪ್ರಕಾರ, ಚಂಡೀಘರ್ ನಲ್ಲಿ ಈರುಳ್ಳಿ ಬೆಲೆ ಬುಧವಾರ ಕೆ.ಜಿ.ಗೆ 52 ರೂ.ಇದೆ.ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಟೊಮ್ಯಾಟೋ ಉತ್ಪಾದನೆ ಪ್ರಮಾಣ ಮೂರನೇ ಒಂದು ಭಾಗಕ್ಕಿಂತ ಕಡಿಮೆಯಾಗಿದೆ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.ಎಪಿಎಂಸಿ ಅಧಿಕಾರಿಗಳು ಮತ್ತು ಟೊಮೆಟೊ ವ್ಯಾಪಾರಿಗಳ ಸಂಘಗಳ ಪ್ರಧಾನ ಕಾರ್ಯದರ್ಶಿ ಮಿಂಟೋ ಚೌಹಾನ್ ಮಾತನಾಡಿ ಟೊಮ್ಯಾಟೋ ಉತ್ಪಾದನೆ ಹಾಗೂ ಆವಕವು ಸುಧಾರಿಸುವ ನಿರೀಕ್ಷೆಯಿಲ್ಲ ಮತ್ತು ಭವಿಷ್ಯದಲ್ಲಿ ಇದರ ಬೆಲೆಗಳು ಹೆಚ್ಚಾಗಬಹುದು ಎಂದು ಹೇಳಿದರು.ಪ್ರವಾಹದಿಂದಾಗಿ ಟೊಮೆಟೊ ಬೆಳೆ ಹಾಳಾಗುತ್ತಿದೆ ಮತ್ತು ಪ್ರತಿದಿನ ಬರುವ ಟ್ರಕ್‌ಗಳ ಸಂಖ್ಯೆ ಹಿಂದಿನ 40 ರಿಂದ 20 ಕ್ಕೆ ಇಳಿದಿದೆ ಎಂದು ಅವರು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


