ಆಂಧ್ರ, ಕಾರ್ಫೊರೇಷನ್ ಬ್ಯಾಂಕ್ ಜತೆ ವಿಲೀನಕ್ಕೆ ಯೂನಿಯನ್ ಬ್ಯಾಂಕ್ ಒಪ್ಪಿಗೆ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ ಮಂಡಳಿಯು ಆಂಧ್ರ ಬ್ಯಾಂಕ್ ಹಾಗೂ ಕಾರ್ಫೊರೇಷನ್ ಬ್ಯಾಂಕ್‌ಗಳ ಜೊತೆ ವಿಲೀನ ಮಾಡುವುದಕ್ಕೆ ಸೋಮವಾರ ಒಪ್ಪಿಗೆ ನೀಡಿದೆ.

ನವದೆಹಲಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ ಮಂಡಳಿಯು ಆಂಧ್ರ ಬ್ಯಾಂಕ್ ಹಾಗೂ ಕಾರ್ಫೊರೇಷನ್ ಬ್ಯಾಂಕ್‌ಗಳ ಜೊತೆ ವಿಲೀನ ಮಾಡುವುದಕ್ಕೆ ಸೋಮವಾರ ಒಪ್ಪಿಗೆ ನೀಡಿದೆ. ಅಲ್ಲದೆ ಪ್ರಸಕ್ತ ಹಣಕಾಸು ವರ್ಷದಲ್ಲಿ 17,200 ಕೋಟಿ ರೂಪಾಯಿ ಮೂಲ ಬಂಡವಾಳಕ್ಕೂ ಅನುಮತಿ ನೀಡಿದೆ.
ಇಂದು ನಡೆದ ಯೂನಿಯನ್ ಬ್ಯಾಂಕ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆಂಧ್ರ ಬ್ಯಾಂಕ್ ಹಾಗೂ ಕಾರ್ಫೊರೇಷನ್ ಬ್ಯಾಂಕ್‌ಗಳ ಜೊತೆ ಯೂನಿಯನ್ ಬ್ಯಾಂಕ್ ವಿಲೀನವನ್ನು ಪರಿಗಣಿಸಿದ ನಿರ್ದೇಶಕ ಮಂಡಳಿ, ಈ ಸಂಬಂಧ ಪ್ರಾಥಮಿಕ ಒಪ್ಪಿಗೆ ಸೂಚಿಸಿದೆ.
ಮಂಡಳಿಯು 2019-20ರ ಪರಿಷ್ಕೃತ ಬಂಡವಾಳ ಯೋಜನೆಯನ್ನು 17,200 ಕೋಟಿ ರೂ.ಗೆ ಹೆಚ್ಚಿಸಲು ಅನುಮೋದನೆ ನೀಡಿದ್ದು, ಅದರಲ್ಲಿ ಈಕ್ವಿಟಿ ಕ್ಯಾಪಿಟಲ್ ಮೂಲಕ 13,000 ಕೋಟಿ ರೂ. ಮತ್ತು ಹೆಚ್ಚುವರಿ ಶ್ರೇಣಿ I/II ಬಾಂಡ್ ಗಳು ಮೂಲಕ 4,200 ಕೋಟಿ ರೂ. ಸೇರಿದೆ ಎಂದು ಯೂನಿಯನ್ ಬ್ಯಾಂಕ್ ತಿಳಿಸಿದೆ.
ಈ ಮೂರು ಬ್ಯಾಂಕ್ ಗಳು ವಿಲೀನ ನಂತ ದೇಶದ ಐದನೇ ಅತಿ ದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


