ರಿಲಯನ್ಸ್ ಡಿಜಿಟಲ್‌ನಲ್ಲಿ ಒನ್‌ಪ್ಲಸ್ ಟಿವಿ ಲೋಕಾರ್ಪಣೆ
ಭಾರತದ ನಂಬರ್ ಒನ್ ಇಲೆಕ್ಟ್ರಾನಿಕ್ಸ್ ರಿಟೇಲರ್ ಆದ ರಿಲಯನ್ಸ್ ಡಿಜಿಟಲ್, ತನ್ನ ರಿಟೇಲ್ ಮಳಿಗೆಗಳಲ್ಲಿ ಒನ್‌ಪ್ಲಸ್ ಟೀವಿ ಸರಣಿಯನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.

ಮುಂಬೈ: ಭಾರತದ ನಂಬರ್ ಒನ್ ಇಲೆಕ್ಟ್ರಾನಿಕ್ಸ್ ರಿಟೇಲರ್ ಆದ ರಿಲಯನ್ಸ್ ಡಿಜಿಟಲ್, ತನ್ನ ರಿಟೇಲ್ ಮಳಿಗೆಗಳಲ್ಲಿ ಒನ್‌ಪ್ಲಸ್ ಟಿವಿ ಸರಣಿಯನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.
ಈ ಸಂಬಂಧ ಒನ್‌ಪ್ಲಸ್ ಜೊತೆಗೆ ಕೈಜೋಡಿಸಿರುವ ರಿಲಯನ್ಸ್ ಡಿಜಿಟಲ್, ಹೊಸ ಒನ್‌ಪ್ಲಸ್ ಟಿವಿ ಶ್ರೇಣಿ ತನ್ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಾಗಲಿದೆ ಎಂದು ಘೋಷಿಸಿದೆ.
ಪ್ರಭಾದೇವಿಯಲ್ಲಿರುವ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿ ಒನ್‌ಪ್ಲಸ್ ಟಿವಿ 55 ಕ್ಯೂ1 ಹಾಗೂ ಒನ್‌ಪ್ಲಸ್ ಟಿವಿ 55 ಕ್ಯೂ1 ಪ್ರೋಗಳೆರಡನ್ನೂ ಇಂದು ಲೋಕಾರ್ಪಣೆಗೊಳಿಸಲಾಯಿತು.
ಈ ವೇಳೆ ರಿಲಯನ್ಸ್ ಡಿಜಿಟಲ್‌ನ ಸಿಇಓ ಬ್ರಿಯಾನ್ ಬೇಡ್, ರಿಲಯನ್ಸ್ ಡಿಜಿಟಲ್‌ನ ಇವಿಪಿ ಮತ್ತು ಸಿಎಂಓ ಕೌಶಲ್ ನೆವ್ರೇಕರ್, ಒನ್‌ಪ್ಲಸ್ ಇಂಡಿಯಾ ಜನರಲ್ ಮ್ಯಾನೇಜರ್ ವಿಕಾಸ್ ಅಗರ್‌ವಾಲ್ ಹಾಗೂ ಬಾಲಿವುಡ್ ನಟಿ ತಾರಾ ಸುತಾರಿಯಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಯಾನ್ ಬೇಡ್, “ಇತ್ತೀಚಿನ ತಂತ್ರಜ್ಞಾನವನ್ನು ಮೊದಲು ಪರಿಚಯಿಸುವ ನಮ್ಮ ದಾಖಲೆಯ ಮುಂದುವರಿಕೆಯಾಗಿ, ರಿಲಯನ್ಸ್ ಡಿಜಿಟಲ್ ಕುಟುಂಬಕ್ಕೆ ಒನ್‌ಪ್ಲಸ್ ಟಿವಿಯನ್ನು ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ. ಭಾರತೀಯ ಗ್ರಾಹಕರು ಮತ್ತು ಪ್ರಪಂಚದೆಲ್ಲೆಡೆಯ ಹೊಸ ತಂತ್ರಜ್ಞಾನ ಬ್ರಾಂಡ್‌ಗಳ ನಡುವಿನ ಸೇತುವೆಯಾಗಿ ನಾವು ಮುಂದುವರಿಯುತ್ತೇವೆ.” ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


