ವಾಣಿಜ್ಯ

ಖಾಸಗೀಕರಣಗೊಳಿಸದಿದ್ದರೆ ಏರ್ ಇಂಡಿಯಾ ಸಂಸ್ಥೆ ಬಂದ್: ನಾಗರಿಕ ವಿಮಾನಯಾನ ಸಚಿವ 

ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆ ವಿಫಲವಾದರೆ ಸಂಸ್ಥೆ ಮುಚ್ಚುವುದಾಗಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಖಾಸಗೀಕರಣಗೊಳಿಸದಿದ್ದರೆ ಏರ್ ಇಂಡಿಯಾ ಸಂಸ್ಥೆ ಬಂದ್: ನಾಗರಿಕ ವಿಮಾನಯಾನ ಸಚಿವ 
ಏರ್ ಇಂಡಿಯಾ
Published On :

ನವದೆಹಲಿ: ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆ ವಿಫಲವಾದರೆ ಸಂಸ್ಥೆ ಮುಚ್ಚುವುದಾಗಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.


ರಾಜ್ಯಸಭೆಯಲ್ಲಿ ಈ ಕುರಿತು ನಿನ್ನೆ ಉತ್ತರಿಸಿದ ಸಚಿವರು, ಉದ್ಯೋಗಿಗಳಿಗೆ ಒಪ್ಪಿಕೆಯಾಗುವ ಒಪ್ಪಂದವನ್ನು ಖಾತ್ರಿಪಡಿಸಲಾಗುತ್ತಿದೆ ಸರ್ಕಾರ ಉದ್ಯೋಗಿಗಳ ಹಿತ ಕಾಪಾಡಲಿದೆ ಎಂದು ಹೇಳಿದರು. 


ಖಾಸಗೀಕರಣಗೊಳಿಸುವ ಪ್ರಕ್ರಿಯೆಯನ್ನು ಸರ್ಕಾರ ಅಂತಿಮಗೊಳಿಸುತ್ತಿದ್ದು ಉದ್ಯೋಗಿಗಳ ಹಿತ ಕಾಪಾಡಲಾಗುವುದು. ಖಾಸಗೀಕರಣವಾಗುವವರೆಗೆ ಯಾರೂ ಉದ್ಯೋಗ ಕಳೆದುಕೊಳ್ಳುವುದಿಲ್ಲ, ಆತಂಕ ಬೇಡ ಎಂದರು.


ಬಂಡವಾಳ ಹೂಡಿಕೆ ಹಿಂತೆಗೆತ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆ ಮುಗಿದ ನಂತರವಷ್ಟೇ ಬಿಡ್ ಖರೀದಿ ನಡೆಯಲಿದೆ. ಇಲ್ಲಿಯವರೆಗೆ ಬದಲಿ ಕ್ರಮವನ್ನು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಮಾಡಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.