ಐಟಿ ಸಂಕಷ್ಟ: ಕಾಗ್ನಿಜೆಂಟ್ ನಂತರ ಸಾವಿರಾರು ಉದ್ದೋಗ ಕಡಿತಕ್ಕೆ ಮುಂದಾದ ಇನ್ಫೋಸಿಸ್
ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅಮೆರಿಕ ಮೂಲದ ಕಾಗ್ನಿಜೆಂಟ್ ಕಂಪೆನಿ ನಂತರ ಈಗ ಬೆಂಗಳೂರು ಮೂಲದ ಪ್ರತಿಷ್ಠಿತ ಐಟಿ ಕಂಪನಿ...

ನವದೆಹಲಿ: ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅಮೆರಿಕ ಮೂಲದ ಕಾಗ್ನಿಜೆಂಟ್ ಕಂಪೆನಿ ನಂತರ ಈಗ ಬೆಂಗಳೂರು ಮೂಲದ ಪ್ರತಿಷ್ಠಿತ ಐಟಿ ಕಂಪನಿ ಇನ್ಫೋಸಿಸ್ ಸಹ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ.
ಇನ್ಫೋಸಿಸ್ ಶೇ. 10 ರಷ್ಟು ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಸಂಸ್ಥೆಯ ಮಧ್ಯಮ ಹಾಗೂ ಉನ್ನತ ಹುದ್ದೆಯಲ್ಲಿರುವ ಸುಮಾರು 2,200 ಸಿಬ್ಬಂದಿಯನ್ನು ವಜಾಗೊಳಿಸಲು ಕಂಪನಿ ನಿರ್ಧರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇನ್ಫೋಸಿಸ್ನ ಜಾಬ್ ಲೆವೆಲ್ 6 ಮತ್ತು ಜಾಬ್ ಲೆವೆಲ್ 7 ಹಾಗೂ ಜಾಬ್ ಲೆವೆಲ್ 8ರ ಶ್ರೇಣಿಯಲ್ಲಿ ಒಟ್ಟು 30,092 ಉದ್ಯೋಗಿಗಳಿದ್ದಾರೆ. ಇವರಲ್ಲಿ ಜೆಲ್ 6 ಹಾಗೂ ಸಿನಿಯರ್ ಮ್ಯಾನೇಜರ್ ಲೆವೆಲ್ನ ಒಟ್ಟು 2,200 ಉದ್ಯೋಗಿಗಳನ್ನು ವಜಾ ಮಾಡಲು ಕಂಪನಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ಅಸೋಸಿಯೇಟ್ ಉದ್ಯೋಗಿಗಳಲ್ಲಿ ಜೆಲ್ 3 ಮತ್ತು ಅದಕ್ಕಿಂತ ಕೆಳಗಿನ ಹಂತದ ಹಾಗೂ ಜೆಎಲ್ 4, ಜೆಎಲ್ 5 ಹಂತದಲ್ಲಿ ಶೇ.2.5ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಲಾಗಿದೆ. ಈ ಶ್ರೇಣಿಗಳಲ್ಲಿ ಒಟ್ಟು 86,558 ಉದ್ಯೋಗಿಗಳಿದ್ದು, ಅಸೋಸಿಯೇಟ್ ಮತ್ತು ಮಧ್ಯಮ ಶ್ರೇಣಿಯಲ್ಲಿ ಒಟ್ಟು 1.1 ಲಕ್ಷ ಉದ್ಯೋಗಿಗಳಿದ್ದಾರೆ. ಇವರಲ್ಲಿ ಸುಮಾರು 4ರಿಂದ 10 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.
ಹಿರಿಯ ಉದ್ಯೋಗಿಗಳ ಶ್ರೇಣಿಯಲ್ಲಿ ಶೇ.2.5ರಷ್ಟು ಉದ್ಯೋಗಿಗಳನ್ನು ಕಡಿತ ಮಾಡಲಿದ್ದು, ಸೀನಿಯರ್ ಎಕ್ಸಿಕ್ಯೂಟಿವ್ಸ್, ಸಹಾಯಕ ಉಪಾಧ್ಯಕ್ಷ, ಉಪಾಧ್ಯಕ್ಷ, ಹಿರಿಯ ಉಪಾಧ್ಯಕ್ಷ, ಕಾರ್ಯಕಾರಿ ಉಪಾಧ್ಯಕ್ಷ ಸೇರಿದಂತೆ ಹೀಗೆ 50 ಮಂದಿ ತಮ್ಮ ಹುದ್ದೆ ಕಳೆದುಕೊಳ್ಳಲಿದ್ದಾರೆ.
ಕಳೆದ ವಾರ ಅಮೆರಿಕ ಮೂಲದ ಕಾಗ್ನಿಜೆಂಟ್ ಕಂಪೆನಿ ವೆಚ್ಚ ಕಡಿತ ಯೋಜನೆ ಭಾಗವಾಗಿ 7000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ನಿರ್ಧಾರ ಪ್ರಕಟಿಸಿತ್ತು. ಇದು ಸಹ ಮಧ್ಯಮ ವರ್ಗದ ಶ್ರೇಣಿಯ ಹುದ್ದೆಯಿಂದ ಉನ್ನತ ಶ್ರೇಣಿಯ ಹುದ್ದೆಯವರೆಗೂ ಉದ್ಯೋಗ ಕಡಿತ ಮಾಡಲಾಗುವುದು ಎಂದು ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


