ವಾಣಿಜ್ಯ

ಬಿಎಸ್ಎನ್ಎಲ್ ಲ್ಯಾಂಡ್​ ಲೈನ್​ ಗ್ರಾಹಕರಿಗೆ ಉಚಿತ ವೈಫೈ!

ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸುದ್ದಿಯಾಗಿದ್ದ ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಪರ್ಕ ಸಂಸ್ಥೆ ಬಿಎಸ್ಎನ್ಎಲ್ ಮಾರುಕಟ್ಟೆಯಲ್ಲಿ ಭರ್ಜರಿ ಪೈಪೋಟಿ ನೀಡಲು ಸಜ್ಜಾಗಿದ್ದು, ಇದೀಗ ಬಿಎಸ್ಎನ್ಎಲ್ ಲ್ಯಾಂಡ್​ ಲೈನ್​ ಗ್ರಾಹಕರಿಗೆ ಉಚಿತ ವೈಫೈ ಸೇವೆ ನೀಡುವ ಕುರಿತು ಘೋಷಣೆ ಮಾಡಿದೆ.

ಬಿಎಸ್ಎನ್ಎಲ್ ಲ್ಯಾಂಡ್​ ಲೈನ್​ ಗ್ರಾಹಕರಿಗೆ ಉಚಿತ ವೈಫೈ!
ಸಂಗ್ರಹ ಚಿತ್ರ
Published On :
ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸುದ್ದಿಯಾಗಿದ್ದ ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಪರ್ಕ ಸಂಸ್ಥೆ ಬಿಎಸ್ಎನ್ಎಲ್ ಮಾರುಕಟ್ಟೆಯಲ್ಲಿ ಭರ್ಜರಿ ಪೈಪೋಟಿ ನೀಡಲು ಸಜ್ಜಾಗಿದ್ದು, ಇದೀಗ ಬಿಎಸ್ಎನ್ಎಲ್ ಲ್ಯಾಂಡ್​ ಲೈನ್​ ಗ್ರಾಹಕರಿಗೆ ಉಚಿತ ವೈಫೈ ಸೇವೆ ನೀಡುವ ಕುರಿತು ಘೋಷಣೆ ಮಾಡಿದೆ.
ಎಲ್ಲಾ ಲ್ಯಾಂಡ್​ ಲೈನ್​ ಫೋನ್​ ಬಳಸುತ್ತಿರುವ ಗ್ರಾಹಕರಿಗಾಗಿ ಉಚಿತ ಬ್ರಾಡ್​ಬ್ಯಾಂಡ್​​ ಸೇವೆಯನ್ನು ಒದಗಿಸಲು ಬಿಎಸ್ಎನ್ಎಲ್ ಮುಂದಾಗಿದ್ದು, ಲ್ಯಾಂಡ್​ ಲೈನ್​ ಗ್ರಾಹಕರು ಉಚಿತವಾಗಿ ಹೈಸ್ಪೀಡ್​ ಹೋಮ್​ ವೈಫೈ ಸೇವೆಯನ್ನು ಪಡೆಯಬಹುದಾಗಿದೆ. ಗ್ರಾಹಕರು ದಿನಕ್ಕೆ 10 ಎಂಬಿಪಿಎಸ್​ ವೇಗದಲ್ಲಿ 5 ಜಿಬಿ ಡೇಟಾವನ್ನು ಡೌನ್​ಲೋಡ್​ ಮಾಡುವ ಅವಕಾಶವನ್ನು ಬಿಎಸ್​ಎನ್​ಎಲ್​​ ಸಂಸ್ಥೆ ಒದಗಿಸುತ್ತಿದೆ.
ಇದರ ಜೊತೆಗೆ ಬಿಎಸ್​ಎನ್​ಎಲ್​ ಸಂಸ್ಥೆ ಲ್ಯಾಂಡ್​ ಲೈನ್​ ಮತ್ತು ಮೊಬೈಲ್​ ಗ್ರಾಹಕರಿಗೆ 'ಫ್ರಿ ವಾಯ್ಸ್​ ಕಾಲಿಂಗ್​' ಸೇವೆಯನ್ನು ಒದಗಿಸುತ್ತಿದೆ. ‘ವಿಂಗ್ಸ್​‘ ವಿಒಐಪಿ ಪ್ಲಾಟ್ ಫಾರಂ ಮೂಲಕ ಈ ಸೇವೆ ದೊರಕಲಿದೆ. ಗ್ರಾಹಕರು ವೈಫೈ ಸೇವೆಯನ್ನು ಪಡೆಯಲು ಕೇವಲ ಒಂದು ಕರೆ ಮಾಡಿದರೆ ಸಾಕು. ಬಿಎಸ್​ಎನ್​ಎಲ್​​ ನೀಡಿರುವ 18003451504 ಸಂಖ್ಯೆಗೆ ಕರೆ ಮಾಡುವ ಮೂಲಕ ಈ ಯೋಜನೆಯನ್ನು ಪಡೆಯಬಹುದಾಗಿದೆ. ಹೋಮ್​ ವೈಫೈ ಇನ್ಸ್ಟಾಲ್​​ ಮಾಡಲು ಯಾವುದೇ ಶುಲ್ಕವಿಲ್ಲ ಎಂದು ಬಿಎಸ್​​ಎನ್​ಎಲ್​​ ಸಂಸ್ಥೆ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.