ಜನ ತಮಗೇನು ಬೇಕೋ ಅದನ್ನು ಹೇಳುತ್ತಾರೆ: ಒವೈಸಿ ಪಕ್ಷಪಾತಿ ಆರೋಪಕ್ಕೆ ರವಿ ಶಂಕರ್ ಗುರೂಜಿ ತಿರುಗೇಟು
ಜನ ತಮಗೇನು ಬೇಕೋ ಅದನ್ನು ಹೇಳುತ್ತಾರೆ ಎಂದು ಅಯೋಧ್ಯೆ ಭೂ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನಿಂದ ನೇಮಕವಾಗಿರುವ ಸಂಧಾನ ಸಮಿತಿ ಸದಸ್ಯ ರವಿಶಂಕರ್ ಗುರೂಜಿ ಹೇಳಿದ್ದಾರೆ.

Published On :
ನವದೆಹಲಿ: ಜನ ತಮಗೇನು ಬೇಕೋ ಅದನ್ನು ಹೇಳುತ್ತಾರೆ ಎಂದು ಅಯೋಧ್ಯೆ ಭೂ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನಿಂದ ನೇಮಕವಾಗಿರುವ ಸಂಧಾನ ಸಮಿತಿ ಸದಸ್ಯ ರವಿಶಂಕರ್ ಗುರೂಜಿ ಹೇಳಿದ್ದಾರೆ.
ಅಯೋಧ್ಯೆ ಭೂ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಂಧಾನ ಸಮಿತಿಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿರುವಂತೆಯೇ ಸಮಿತಿಗೆ ಆರ್ಟ್ ಆಫ್ ಲಿವಿಂಗ್ ನ ಮುಖ್ಯಸ್ಥರಾದ ರವಿಶಂಕರ್ ಗುರೂಜಿ ಅವರ ನೇಮಕ ವಿಚಾರ ಸಂಬಂಧ ಎಐಎಂಎಂ ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ ಮಾಡಿರುವ ಆರೋಪಕ್ಕೆ ರವಿಶಂಕರ್ ಗುರೂಜಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ರವಿ ಶಂಕರ್ ಗುರೂಜಿ, ಜನ ತಮಗೇನು ಬೇಕೋ ಅದನ್ನು ಹೇಳುತ್ತಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಯೋಧ್ಯೆ ವಿಚಾರ ಬಗೆಹರಿಯಲಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಸಂಧಾನ ಸಮಿತಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಒವೈಸಿ, ರವಿಶಂಕರ್ ಗುರೂಜಿ ಪಕ್ಷಪಾತಿಯಾಗಿದ್ದು, ಅವರಿಂದ ಸೌಹಾರ್ಧ ಮತ್ತು ನ್ಯಾಯಯುತ ಸಂಧಾನ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅಲ್ಲದೆ 2018 ನವೆಂಬರ್ 4ರಂದು ರವಿಶಂಕರ್ ಗುರೂಜಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದ ಒವೈಸಿ, ಆಯೋಧ್ಯೆ ವಿವಾದ ಬಗೆಹರಿಯದಿದ್ದರೆ ಭಾರತ ಕೂಡ ಸಿರಿಯಾ ಆಗುತ್ತದೆ. ಮುಸ್ಲಿಮರು ತಮ್ಮ ವಾದ ಕೈಬಿಡದಿದ್ದರೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದರು ಎಂದು ಒವೈಸಿ ಕಿಡಿಕಾರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtನವದೆಹಲಿNew Delhiಸುಪ್ರೀಂ ಕೋರ್ಟ್Asaduddin Owaisiಅಸಾದುದ್ದೀನ್ ಒವೈಸಿRavi shankar gurujiರವಿ ಶಂಕರ್ ಗುರೂಜಿAyodhya Land Caseಅಯೋಧ್ಯೆ ಭೂ ವಿವಾದ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


