ಇಸ್ರೇಲ್ ತಂಟೆಗೆ ಬಂದರೆ ಜೋಕೆ : ಹಿಜ್ಬುಲ್ ಸಂಘಟನೆಗೆ ಪ್ರಧಾನಿ ನೆತಾನ್ಯಾಹು ಎಚ್ಚರಿಕೆ
ಇಸ್ರೇಲ್ ದೇಶವನ್ನು ನಾಶಗೊಳಿಸಲು ಲೆಬನಾನ್ ಸಮರ್ಥವಾಗಿದೆ ಎಂದು ಲೆಬನಾನ್ ಮೂಲದ ಭಯೋತ್ಪಾದಕನೊಬ್ಬ ನೀಡಿರುವ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಕಿಡಿಕಾರಿದ್ದು

Published On :
ಇಸ್ರೇಲ್ ದೇಶವನ್ನು ನಾಶಗೊಳಿಸಲು ಲೆಬನಾನ್ ಸಮರ್ಥವಾಗಿದೆ ಎಂದು ಲೆಬನಾನ್ ಮೂಲದ ಭಯೋತ್ಪಾದಕನೊಬ್ಬ ನೀಡಿರುವ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಕಿಡಿಕಾರಿದ್ದು, 'ಇಸ್ರೇಲ್ ತಂಟೆಗೆ ಬಂದರೆ ಜೋಕೆ' ಎಂದು ಎಚ್ಚರಿಸಿದ್ದಾರೆ.
“ಇಸ್ರೇಲ್ ಮೇಲೆ ದಾಳಿಯಂತಹ ಮೂರ್ಖ ಕೆಲಸಕ್ಕೆ ಹಿಜ್ಬುಲ್ ಧೈರ್ಯ ತೋರಿದೆ. ನಾವು ಲೆಬನಾನ್ ಮತ್ತು ಹಿಜ್ಬುಲ್ ಹೊಡೆತವನ್ನು ಸಹಿಸುವಷ್ಟು ಸಮರ್ಥರಾಗಿದ್ದೇವೆ” ಎಂದು ಸಚಿವ ಸಂಪುಟ ಸಭೆಯಲ್ಲಿ ಹೇಳಿರುವುದಾಗಿ ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
ಹಿಜ್ಬುಲ್ ಮುಖ್ಯಸ್ಥ ಹಸನ್ ನಸ್ರಲ್ಲಾ, ಶನಿವಾರದ ತನ್ನ ಭಾಷಣದಲ್ಲಿ, ಇಸ್ರೇಲ್ ದೇಶವು ಲೆಬನಾನ್ ಮೇಲೆ ದಾಳಿ ಮಾಡುವ ಧೈರ್ಯ ತೋರಿದರೆ, ಇಸ್ರೇಲ್ ನಾಶ ಮಾಡಲು ಶಿಟ್ಟೆ ಸಂಘಟನೆ ಸಮರ್ಥವಾಗಿದೆ ಎಂದು ಹೇಳಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


