ದಶಕಗಳಲ್ಲಿ 2 ನೇ ಬಾರಿ ಬಜೆಟ್ ನಂತರ ಸೆನ್ಸೆಕ್ಸ್ ಮಹಾ ಕುಸಿತ!
ಬಜೆಟ್ ನಂತರದಲ್ಲಿ ಸೆನ್ಸೆಕ್ಸ್ ಭಾರಿ ಕುಸಿತ ಕಂಡಿದ್ದು, ಈಕ್ವಿಟಿ ಹೂಡಿಕೆದಾರರು ಹತ್ತಿರ ಹತ್ತಿರ 3.2 ಲಕ್ಷ ಕೋಟಿ ರೂಪಾಯಿ ನಷ್ಟ ಎದುರಿಸಿದ್ದಾರೆ.

Published On :
ಮುಂಬೈ: ಬಜೆಟ್ ನಂತರದಲ್ಲಿ ಸೆನ್ಸೆಕ್ಸ್ ಭಾರಿ ಕುಸಿತ ಕಂಡಿದ್ದು, ಈಕ್ವಿಟಿ ಹೂಡಿಕೆದಾರರು ಹತ್ತಿರ ಹತ್ತಿರ 3.2 ಲಕ್ಷ ಕೋಟಿ ರೂಪಾಯಿ ನಷ್ಟ ಎದುರಿಸಿದ್ದಾರೆ.
11 ವರ್ಷಗಳಲ್ಲಿ 2 ನೇ ಬಾರಿಗೆ ಸೆನ್ಸೆಕ್ಸ್ ಈ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದಕ್ಕೂ ಮುನ್ನ 2018 ರಲ್ಲಿ ಇದೇ ಪರಿಸ್ಥಿತಿ ಉಂಟಾಗಿತ್ತು. ಜೂ. 09 ರಂದು ಸೆನ್ಸೆಕ್ಸ್ ಸೂಚ್ಯಂಕ 793 ಪಾಯಿಂಟ್ ಗಳಷ್ಟು ಕುಸಿತ ಕಂಡಿದೆ.
ಸಂಸ್ಥೆಗಳಿಂದ ಈಕ್ವಿಟಿಯನ್ನು ವಾಪಸ್ ಖರೀದಿಸುವುದಕ್ಕೆ ತೆರಿಗೆ ವಿಧಿಸುವ ಸರ್ಕಾರದ ನಿರ್ಧಾರಕ್ಕೆ ಹೂಡಿಕೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇವೆಲ್ಲದರ ಪರಿಣಾಮ ದಶಕಗಳಲ್ಲಿ 2 ನೇ ಬಾರಿ ಸೆನ್ಸೆಕ್ಸ್ ಮಹಾ ಕುಸಿತ ಕಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


