ಕೇಂದ್ರದಿಂದ ಶೀಘ್ರವೇ ಉಡಾನ್-3 ಯೋಜನೆ: ವಿದೇಶಗಳಿಗೆ ಅಗ್ಗದ ಟಿಕೆಟ್ ದರ ಕೇಳಿದರೆ ದಂಗಾಗುತ್ತೀರ!
ಅಗ್ಗದ ದರದಲ್ಲಿ ಭಾರತದ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗ ಅಗ್ಗದ ದರದಲ್ಲಿ ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ದರವನ್ನು ನಿಗದಿಪಡಿಸಲು ಮುಂದಾಗಿದೆ.

Published On :
ನವದೆಹಲಿ: ಅಗ್ಗದ ದರದಲ್ಲಿ ಭಾರತದ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗ ಅಗ್ಗದ ದರದಲ್ಲಿ ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ದರವನ್ನು ನಿಗದಿಪಡಿಸಲು ಮುಂದಾಗಿದೆ.
ಈ ಭಾಗವಾಗಿ ಉಡಾನ್-3 ನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಎಲ್ಲಾ ಸಿದ್ಧತೆ ನಡೆಸಿದ್ದು ಕೇವಲ 2,500 ರೂಪಾಯಿಗಳಿಗೆ ವಿದೇಶಗಳಿಗೆ ಹಾರಬಹುದಾಗಿದೆ. ಖಾಸಗಿ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ ಅಸ್ಸಾಂ ಉಡಾನ್ ಯೋಜನೆಯಡಿ ಬ್ಯಾಂಕಾಕ್ ಥಾಯ್ ಲ್ಯಾಂಡ್, ಕಠ್ಮಂಡುಗಳಿಗೆ ಅಗ್ಗದ ದರದಲ್ಲಿ ವಿಮಾನ ಸಂಪರ್ಕ ಹೊಂದಿರಲಿದೆ.
ಇದೇ ಮಾದರಿಯಲ್ಲಿ ಬಿಹಾರ ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳು ನೇಪಾಳ, ಬಾಂಗ್ಲಾದೇಶ, ಮಾಯನ್ಮಾರ್ ಗೆ ಹಾಗೂ ಚೆನ್ನೈ ನಲ್ಲಿರುವ ವಿಮಾನ ನಿಲ್ದಾಣಗಳು ಸಿಂಗಪೂರ್ ಗೆ ಅಗ್ಗದ ದರದಲ್ಲಿ ಸಂಪರ್ಕ ಕಲ್ಪಿಸಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


