ವಾಣಿಜ್ಯ

ಚಿನ್ನದ ಬಾಂಡ್ ಯೋಜನೆ ಐದನೇ ಆವೃತ್ತಿ ಜನವರಿ 14 ರಿಂದ ಪ್ರಾರಂಭ

ಸರ್ಕಾರದ ಮಹತ್ವಾಕಾಂಕ್ಷಿ ಚಿನ್ನದ ಬಾಂಡ್ ಯೋಜನೆಯ ಐದನೇ ಆವೃತ್ತಿ 2018-19ರ ಸರಣಿಯನ್ನು ಇದೇ ಜನವರಿ 14ರಿಂದ ಪ್ರಾರಂಭಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಚಿನ್ನದ ಬಾಂಡ್ ಯೋಜನೆ ಐದನೇ ಆವೃತ್ತಿ ಜನವರಿ 14 ರಿಂದ ಪ್ರಾರಂಭ
ಸಂಗ್ರಹ ಚಿತ್ರ
Published On :
ನವದೆಹಲಿ: ಸರ್ಕಾರದ ಮಹತ್ವಾಕಾಂಕ್ಷಿ ಚಿನ್ನದ ಬಾಂಡ್ ಯೋಜನೆಯ ಐದನೇ ಆವೃತ್ತಿ  2018-19ರ ಸರಣಿಯನ್ನು ಇದೇ ಜನವರಿ 14ರಿಂದ ಪ್ರಾರಂಭಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಚಿನ್ನದ ಬಾಂಡ್ ಕೊಳ್ಳುವವರು ಜನವರಿ 14ರಿಂದ 18ರವರೆಗೆ ನಿಗದಿತ ಬ್ಯಾಂಕ್ ಗಳಿಗೆ ತೆರಳಿ ಬಾಂಡ್ ಪಡೆದುಕೊಳ್ಲಲು ಅವಕಾಶವಿದೆ.
ಬಾಂಡ್ ಮೇಲೆ ಚಿನ್ನದ ಪ್ರತಿ ಗ್ರಾಮ್ ಗೆ 3,214 ರೂ. ಬೆಲೆ ನಿಗದಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆ ಹೇಳಿದೆ.
ಇನ್ನು ಆನ್ ಲೈನ್ ನಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ಹಾಗೂ ಡಿಜಿಟಲ್ ಪೇಮೆಂಟ್ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಗ್ರಾಮ್ ಒಂದಕ್ಕೆ 50 ರು. ರಿಯಾಯ್ತಿ ಒದಗಿಸಲು ರಿಸರ್ವ್ ಬ್ಯಾಂಕ್ ನೊಡನೆ ಸಮಾಲೋಚನೆ ನಡೆಸಿ ನಿರ್ಧರಿಸಲಾಗುವುದು ಎಂದು ಸರ್ಕಾರ ಹೇಳಿದೆ. ಅಂತಹ ಹೂಡಿಕೆದಾರರಿಗೆ, ಚಿನ್ನದ ಬಾಂಡ್ ಒಂದರ ಬೆಲೆ  ಪ್ರತಿ ಗ್ರಾಂಗೆ 3,164 ರೂ.ಆಗಿರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.