ಇನ್ಫೋಸಿಸ್ 3ನೇ ತ್ರೈಮಾಸಿಕ ನಿವ್ವಳ ಲಾಭದಲ್ಲಿ 30 ಪರ್ಸೆಂಟ್ ಇಳಿಕೆ
ಡಿಸೆಂಬರ್ 2018 ರ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಕಂಪನಿಯ ನಿವ್ವಳ ಲಾಭವು ಶೇ .30 ರಷ್ಟು ಕುಸಿದಿದ್ದು, 3,610 ಕೋಟಿ ರೂಪಾಯಿಗೆ ಇಳಿದಿದೆ. ಆದಾಗ್ಯೂ, 8,260 ಕೋಟಿ ರೂಪಾಯಿ ಷೇರು ಖರೀದಿ ಯೋಜನೆಯನ್ನು ಘೋಷಿಸಿದೆ.

ನವದೆಹಲಿ: ಡಿಸೆಂಬರ್ 2018 ರ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಕಂಪನಿಯ ನಿವ್ವಳ ಲಾಭವು ಶೇ .30 ರಷ್ಟು ಕುಸಿದಿದ್ದು, 3,610 ಕೋಟಿ ರೂಪಾಯಿಗೆ ಇಳಿದಿದೆ. ಆದಾಗ್ಯೂ, 8,260 ಕೋಟಿ ರೂಪಾಯಿ ಷೇರು ಖರೀದಿ ಯೋಜನೆಯನ್ನು ಘೋಷಿಸಿದೆ.
ದೇಶದ ಎರಡನೇ ಅತಿದೊಡ್ಡ ಸಾಪ್ಟ್ ವೇರ್ ಸೇವಾ ಸಂಸ್ಥೆಯಾಗಿರುವ ಇನ್ಫೋಸಿಸ್ 2017ರ ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ 5.129 ಕೋಟಿ ನಿವ್ಳಳ ಲಾಭ ಗಳಿಸಿತ್ತು.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಡಿಸೆಂಬರ್ 2018 ತ್ರೈಮಾಸಿಕ ಅವಧಿಯಲ್ಲಿ ಬೆಂಗಳೂರು ಮೂಲದ ಸಂಸ್ಥೆಯ ಆದಾಯ ಶೇ, 20.3 ರಿಂದ 21, 400 ಕೋಟಿಯವರೆಗೂ ಅಭಿವೃದ್ಧಿಯಾಗಿದೆ.
ಪ್ರತಿ ಷೇರಿಗೆ 800 ರೂಗೆ ಮೀರದ ಬೆಲೆಗೆ 8,260 ಕೋಟಿ ರೂ. (1.18 ಶತಕೋಟಿ ಯುಎಸ್ ಡಾಲರ್) ವರೆಗೆ ಮುಕ್ತ ಮಾರುಕಟ್ಟೆ ಮಾರ್ಗದಿಂದ ಇಕ್ವಿಟಿ ಷೇರುಗಳ ಮರುಖರೀದಿಗೆ ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ. ಅಲ್ಲದೇ, ಇನ್ಪೋಸಿಸ್ ಪ್ರತಿಷೇರಿಗೆ 4 ರೂ. ವಿಶೇಷ ಡಿವಿಡೆಂಡ್ ಘೋಷಿಸಿರುವುದರಿಂದ 2.107 ಕೋಟಿ ಹಣವನ್ನು ಪಾವತಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


