ಲಾಕ್-ಇನ್ ಇಲ್ಲದ ಹೂಡಿಕೆ ಆಯ್ಕೆ!
ಮಾರುಕಟ್ಟೆಯಲ್ಲಿ ಊಹೆಗೆ ನಿಲುಕದ ಏರಿಳಿತ, ಆರ್ಥಿಕ ಕ್ಷೇತ್ರದ ವ್ಯತ್ಯಯಗಳ ನಡುವೆ ನಮ್ಮ ಪರಿಶ್ರಮದ ಹಣವನ್ನು ಎಲ್ಲಿ ಹೂಡುವುದು? ಹೇಗೆ ಹೂಡಿಕೆ ಮಾಡುವುದು ಸೂಕ್ತ?

• ರೂ. 1000 ರೂ. ಗಳಿಗೆ ಹೂಡಿಕೆಯನ್ನು ಆರಂಭಿಸಿ
• ರಿಟರ್ನ್ಸ್ ಇಲ್ಲಿ ನಿಶ್ಚಿತ, ತೆರಿಗೆಯಲ್ಲೂ ವಿನಾಯಿತಿ ಖಚಿತ
• ಹೂಡಿಕೆ ಸುರಕ್ಷಿತ, ಪಾರದರ್ಶಕತೆಯೇ ಇದರ ವಿಶೇಷ
ಅನಿಶ್ಚಿತತೆ ಇಂದಿನ ದಿನಗಳಲ್ಲಿ ಹೂಡಿಕೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಅಲ್ಲವೆ?
ಮಾರುಕಟ್ಟೆಯಲ್ಲಿ ಊಹೆಗೆ ನಿಲುಕದ ಏರಿಳಿತ, ಆರ್ಥಿಕ ಕ್ಷೇತ್ರದ ವ್ಯತ್ಯಯಗಳ ನಡುವೆ ನಮ್ಮ ಪರಿಶ್ರಮದ ಹಣವನ್ನು ಎಲ್ಲಿ ಹೂಡುವುದು? ಹೇಗೆ ಹೂಡಿಕೆ ಮಾಡುವುದು ಸೂಕ್ತ?
ನಿಮ್ಮ ಹಣವನ್ನು ಹೂಡಿಕೆ ಮಾಡುವುದಕ್ಕೆ ಹಲವು ದಾರಿಗಳಿವೆ- ಸ್ಟಾಕ್ ಮಾರ್ಕೆಟ್, ಮ್ಯೂಚ್ಯುವಲ್ ಫಂಡ್, ಫಿಕ್ಸೆಡ್ ಡಿಪಾಸಿಟ್ಸ್ ಮತ್ತು ಸುರಕ್ಷತೆ ಮತ್ತು ಗಳಿಕೆಯ ವಿಷಯ ಬಂದಾಗ ಇದು ಸುಲಭವಾದ ಆಯ್ಕೆಯಾಗಿರುವುದಿಲ್ಲ.
ಗೊಂದಲಕ್ಕೆ ಸದ್ಯಕ್ಕೆ ಒಂದೇ ಉತ್ತರ, ಭಾರತ್ ಬಾಂಡ್ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್. ಎಡೆಲ್ವೈಸ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯು ಭಾರತದ ಮೊದಲ ಕಾರ್ಪೋರೇಟ್ ಬಾಂಡ್ ಇಟಿಎಫ್, ಭಾರತ್ ಬಾಂಡ್ ಇಟಿಎಫ್ ಅನ್ನು ಬಿಡುಗಡೆ ಮಾಡುತ್ತಿದೆ.
ಈ ಇಟಿಎಫ್ ಭಾರತ ಸರ್ಕಾರದ ಕಾರ್ಯಕ್ರಮವಾಗಿದ್ದು, ಡಿಪಾರ್ಟ್ಮೆಂಟ್ ಆಫ್ ಇನ್ವೆಸ್ಟ್ಮೆಂಟ್ ಅಂಡ್ ಪಬ್ಲಿಕ್ ಅಸೆಟ್ ಮ್ಯಾನೇಜ್ಮೆಂಟ್ ಅವರಿಂದ ಅಭಿವೃದ್ಧಿಪಡಿಸಲಾಗಿದೆ.
ಭಾರತ್ ಬಾಂಡ್ ಇಟಿಎಫ್ ಹಲಕಾಲದ ನಂತರ ಭಾರತದ ಹೂಡಿಕೆಯ ಕ್ಷೇತ್ರದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದೆ.
ಭಾರತದ ಸಣ್ಣಹೂಡಿಕೆದಾರರು ವಿಶ್ವಾಸಾರ್ಹ, ತೆರಿಗೆ ಉಳಿಸುವ ಮತ್ತು ಆದಾಯಗಳಿಕೆಯ ಅಂದಾಜು ಮಾಡಬಲ್ಲ ಆಯ್ಕೆಯನ್ನು ಬಯಸುತ್ತಾರೆ.
ಭಾರತ್ ಬಾಂಡ್ ಇಟಿಎಫ್ ನಲ್ಲಿ ತೊಡಗಿಸಲಾಗುವ ಹಣವು ‘ಎಎಎ’ ಶ್ರೇಯಾಂಕ ಹೊಂದಿರುವ ಸರ್ಕಾರಿ ಸ್ವಾಮ್ಯದಲ್ಲಿರುವ ಸಂಸ್ಥೆಗಳಲ್ಲಿ ಹೂಡಿಕೆಯಾಗಲಿದೆ. ಪವರ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್, ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ, ಇಂಡಿಯನ್ ರಿಯಲ್ ವೇವ್ ಫೈನಾನ್ಸ್ ಕಾರ್ಪೊರೇಷನ್, ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ಅರೇ ಡೆವಲಪ್ಮೆಂಟ್ ಸೇರಿದಂತೆ ಪ್ರಮುಖ ಸಾರ್ವಜನಿಕ ಸಂಸ್ಥೆಗಳಲ್ಲಿ ಹೂಡಿಕೆಯಾಗಲಿದೆ.
ಹೂಡಿಕೆಯನ್ನು ಕನಿಷ್ಠ 1000 ರೂ. ಗಳಿಂದ ಮಾಡಬಹುದು. ಇಟಿಎಫ್ ಎರಡು ಮೆಚ್ಯುರಿಟಿ ಅವಧಿಯನ್ನು ಹೊಂದಿದೆ, ಕ್ರಮವಾಗಿ 3 ಮತ್ತು 10 ವರ್ಷಗಳು.
ಆದರೆ ಹೂಡಿಕೆದಾರ ಈ ಅವಧಿ ಪೂರ್ಣವಾಗುವವರೆಗೂ ಕಾಯಬೇಕೆಂದೇನಿಲ್ಲ.
ಭಾರತ್ ಬಾಂಡ್ ಇಟಿಎಫ್ ನ ಇಟಿಎಫ್ ನ ವಿಶೇಷತೆ ಎಂದರೆ, ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಮಾರುಕಟ್ಟೆಯ ಅವಧಿಯಲ್ಲಿ ಕೊಳ್ಳಬಹುದು ಅಥವಾ ಮಾರಾಟ ಮಾಡಬಹುದು.
ತಮ್ಮ ಹೂಡಿಕೆಯ ಹಣ ಸುರಕ್ಷಿತವಾಗಿರಬೇಕು, ಹೆಚ್ಚು ಗಳಿಸಬೇಕು ಎಂದು ಬಯಸುವ ಸಣ್ಣ ಹೂಡಿಕೆದಾರರು ಯಾವಾಗಲೂ ಗೊಂದಲದಲ್ಲಿ ಮತ್ತು ಆತಂಕದಲ್ಲಿರುತ್ತಾರೆ.
ಹಣದ ಸುರಕ್ಷತೆಗಾಗಿ ನಿಶ್ಚಿತ ಠೇವಣಿ ಆಯ್ಕೆ ಮಾಡಿಕೊಳ್ಳುತ್ತಾರೆ.
ನೀವು ಈಗಾಗಲೇ ಡಿಮ್ಯಾಟ್ ಅಕೌಂಟ್ ಹೊಂದಿದ್ದರೆ, ನಿಮ್ಮ ಟ್ರೇಡಿಂಗ್ ಅಕೌಂಟ್ ಮೂಲಕ ಭಾರತ್ ಬಾಂಡ್ ಇಟಿಎಫ್ನಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಬಳಿಡಿಮ್ಯಾಟ್ ಅಕೌಂಟ್ ಇಲ್ಲವಾದರೆ, ಚಿಂತಿಸಬೇಡಿ. ಎಡಿಲ್ವೈಸ್ ಮ್ಯೂಚ್ಯುವಲ್ ಫಂಡ್ ವೆಬ್ಸೈಟ್ ಮೂಲಕ ಭಾರತ್ ಬಾಂಡ್ ಫಂಡ್ಸ್ ನಲ್ಲಿ ಹೂಡಿಕೆ ಮಾಡಬಹುದು.
ಎಡಿಲ್ವೈಸ್ ಸಂಸ್ಥೆಯ ನಿರ್ವಹಣೆಯಲ್ಲಿರುವ ಭಾರತ್ ಬಾಂಡ್ ಗಳ ವಿತರಣೆ ಡಿಸೆಂಬರ್ 12 ರಿಂದ ಆರಂಭವಾಗುತ್ತಿದ್ದು, ಡಿಸೆಂಬರ್ 20ರವರೆಗೆ ಖರೀದಿಗೆ ಲಭ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


