ಮಾರುತಿ ಸುಝುಕಿಯಿಂದ 5 ವರ್ಷ, 1 ಲಕ್ಷ ಕಿಮೀ ವಾರಂಟಿಯ ಕೊಡುಗೆ
ದೇಶಾದ್ಯಂತ 2.9 ದಶಲಕ್ಷ ಗ್ರಾಹಕರನ್ನು ಹೊಂದಿರುವ ಮಾರುತಿ ಸುಝುಕಿ ಕಂಪನಿ, ಡಿಸೈರ್, ಎಸ್-ಕ್ರಾಸ್, ಸ್ವಿಫ್ಟ್ ಹಾಗೂ ವಿಟಾರಾ ಬ್ರೀಝಾದ ಡೀಸೆಲ್ ಕಾರುಗಳಿಗೆ 5 ವರ್ಷ ಹಾಗೂ 1 ಲಕ್ಷ ಕಿಮೀವರೆಗಿನ ವಾರಂಟಿ ಘೋಷಿಸಿದೆ.

ನವದೆಹಲಿ: ದೇಶಾದ್ಯಂತ 2.9 ದಶಲಕ್ಷ ಗ್ರಾಹಕರನ್ನು ಹೊಂದಿರುವ ಮಾರುತಿ ಸುಝುಕಿ ಕಂಪನಿ, ಡಿಸೈರ್, ಎಸ್-ಕ್ರಾಸ್, ಸ್ವಿಫ್ಟ್ ಹಾಗೂ ವಿಟಾರಾ ಬ್ರೀಝಾದ ಡೀಸೆಲ್ ಕಾರುಗಳಿಗೆ 5 ವರ್ಷ ಹಾಗೂ 1 ಲಕ್ಷ ಕಿಮೀವರೆಗಿನ ವಾರಂಟಿ ಘೋಷಿಸಿದೆ.
ದೇಶಾದ್ಯಂತ 1,893 ಪಟ್ಟಣ ಹಾಗೂ ನಗರಗಳಲ್ಲಿ ಡೀಲರ್ ಗಳನ್ನು ಹೊಂದಿರುವ ಕಂಪನಿ, ಹೊಸ ಖರೀದಿದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ಯೋಜನೆಯನ್ನು ಒದಗಿಸುತ್ತಿದೆ. ಈ ಕುರಿತು ಹೇಳಿಕೆ ನೀಡಿರುವ ಮಾರುತಿ ಸುಝುಕಿ ಇಂಡಿಯಾ ಲಿ. ನ (ಮಾರುಕಟ್ಟೆ ಮತ್ತು ಮಾರಾಟ) ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವತ್ಸ, 'ಕೇವಲ ಒಂದು ಕಂಪನಿಯಾಗಿದ್ದ ಮಾರುತಿ ಝುಕಿಯನ್ನು ಭಾರತದ ಆಟೊಮೊಬೈಲ್ ಉದ್ಯಮವನ್ನಾಗಿ ಬದಲಾಯಿಸುವಲ್ಲಿ ಡಿಸೈರ್, ಎಸ್-ಕ್ರಾಸ್, ಸ್ವಿಫ್ಟ್ ಹಾಗೂ ವಿಟಾರಾ ಬ್ರೀಝಾ ವಾಹನಗಳ ಪಾತ್ರ ಮಹತ್ವದ್ದು. ಈ ಬ್ರಾಂಡ್ ಗಳನ್ನು ಲಕ್ಷಾಂತರ ಗ್ರಾಹಕರು ಮೆಚ್ಚಿದ್ದಾರೆ. ಇವುಗಳು ಭವಿಷ್ಯದಲ್ಲಿಯೂ ಕಂಪನಿಯ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ ' ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


