ಆರ್ಥಿಕ ಕುಸಿತ ಆತಂಕಕಾರಿ, ಹೊಸ ಸುಧಾರಣೆಗಳು ಅಗತ್ಯ: ರಘುರಾಮ್ ರಾಜನ್
ಆರ್ಥಿಕ ಕುಸಿತ ಅಥವಾ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿರುವುದು ಆತಂಕಕಾರಿ, ಇಂಧನ ಹಾಗೂ ಬ್ಯಾಂಕ್ ಯೇತರ ಆರ್ಥಿಕ...

ಆರ್ಥಿಕ ಕುಸಿತ ಅಥವಾ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿರುವುದು ಆತಂಕಕಾರಿ, ಇಂಧನ ಹಾಗೂ ಬ್ಯಾಂಕ್ ಯೇತರ ಆರ್ಥಿಕ ಕ್ಷೇತ್ರಗಳ ತಕ್ಷಣದ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಸರಿಪಡಿಸಬೇಕೆಂದು ಆರ್ ಬಿಐ ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಸಿಎನ್ ಬಿಸಿ 18 ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಘುರಾಮ್ ರಾಜನ್, ಖಾಸಗಿ ಕ್ಷೇತ್ರದಲ್ಲಿನ ಹೂಡಿಕೆಗೆ ಸರ್ಕಾರ ಹೊಸ ಸುಧಾರಣೆಗಳಿಗೆ ಮುಂದಾಗಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಅರವಿಂದ್ ಸುಬ್ರಹ್ಮಣಿಯನ್ ಅವರನ್ನೂ ಉಲ್ಲೇಖಿಸಿರುವ ರಘುರಾಮ್ ರಾಜನ್, ಜಿಡಿಪಿ ಲೆಕ್ಕಾಚಾರದ ವಿಧಾನದಲ್ಲೂ ಭಾರತ ಬದಲಾಗಬೇಕಿದೆ ಖಾಸಗಿ ವಿಶ್ಲೇಷಕರು ಹಲವು ರೀತಿಗಳಲ್ಲಿ ಬೆಳವಣಿಗೆ ಅಂದಾಜನ್ನು ವಿಶ್ಲೇಷಿಸುತ್ತಾರೆ. ಈ ಪೈಕಿ ಹಲವು ಸರ್ಕಾರದ ಅಂದಾಜಿಗಿಂತಲೂ ಕಡಿಮೆ ಇರುತ್ತದೆ ಎಂದು ಹೇಳಿದ್ದಾರೆ.
2018-19 ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.6.8 ಕ್ಕೆ ಕುಸಿದಿತ್ತು. ಈ ಸಾಲಿನಲ್ಲಿ ಸರ್ಕಾರದ ಅಂದಾಜಿನ ಪ್ರಕಾರ ಇರುವ ಶೇ.7 ಕ್ಕಿಂತಲೂ ಆರ್ಥಿಕ ಬೆಳವಣಿಗೆ ಕಡಿಮೆ ಇರಲಿದೆ ಎಂದು ಹಲವು ಖಾಸಗಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


