ಭಾರತದ ಮೂಲಭೂತ ಕೈಗಾರಿಕೆ ಉತ್ಪಾದನೆ ಶೇ.4.7ರಷ್ಟು ಏರಿಕೆ
ಸಿಮೆಂಟ್ ಮತ್ತು ಕಲ್ಲಿದ್ದಲ್ಲು ಉತ್ಪಾದನೆ ಏರಿಕೆ ಬೆನ್ನಲ್ಲೇ, ಮೂಲಭೂತ ಕೈಗಾರಿಕೆ ಸೂಚ್ಯಂಕ ಮಾರ್ಚ್ 2019ರಲ್ಲಿ ಶೇ.4.7ರಷ್ಟು ಏರಿಕೆಯಾಗಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.

Published On :
ನವದೆಹಲಿ: ಸಿಮೆಂಟ್ ಮತ್ತು ಕಲ್ಲಿದ್ದಲ್ಲು ಉತ್ಪಾದನೆ ಏರಿಕೆ ಬೆನ್ನಲ್ಲೇ, ಮೂಲಭೂತ ಕೈಗಾರಿಕೆ ಸೂಚ್ಯಂಕ ಮಾರ್ಚ್ 2019ರಲ್ಲಿ ಶೇ.4.7ರಷ್ಟು ಏರಿಕೆಯಾಗಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.
8 ಕೋರ್ ಕೈಗಾರಿಕೆಗಳ ಒಟ್ಟಾರೆ ಸೂಚ್ಯಂಕ 2018-19ರ ಏಪ್ರಿಲ್‌ನಿಂದ ಮಾರ್ಚ್ ಅವಧಿಗೆ ಶೇ. 4.32ರಷ್ಟು ಹೆಚ್ಚಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಮಾರ್ಚ್ 2019ರಲ್ಲಿ ಕಲ್ಲಿದ್ದಲ್ಲು ಉತ್ಪಾದನೆ ಶೇ.9.1ರಷ್ಟು ಏರಿಕೆ ಕಂಡಿದೆ. ಕಚ್ಚಾ ತೈಲ ಉತ್ಪಾದನೆ ಶೇ.6.2ರಷ್ಟು ಕುಸಿದಿದೆ. 2018-19ರ ಅವಧಿಯ ಇದರ ಸಮಗ್ರ ಸೂಚ್ಯಂಕ ಶೇ.4.1ರಷ್ಟು ಇಳಿಕೆಯಾಗಿದೆ.
ಅಡುಗೆ ಅನಿಲ ಉತ್ಪಾದನೆ ಶೇ.1.4ರಷ್ಟು ಏರಿಕೆ ಕಂಡಿದ್ದು, 2018-19ರ ಅವಧಿಯಲ್ಲಿ ಶೇ.0.8ರಷ್ಟು ಪ್ರಗತಿ ಸಾಧಿಸಿದೆ ಎಂದು ಸಚಿವಾಲಯ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


