ದಿವಾಳಿತನದ ಪ್ರಕ್ರಿಯೆಗಳ ಕುರಿತು ಆರ್ ಬಿಐ ಆದೇಶ ಅದರ ಅಧಿಕಾರ ವ್ಯಾಪ್ತಿಗೆ ಮೀರಿದ್ದು: ಸುಪ್ರೀಂ ಕೋರ್ಟ್
ದಿನಕ್ಕೆ 2 ಸಾವಿರ ಕೋಟಿ ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಸಾಲಕ್ಕೆ ದಿವಾಳಿತನದ ಪ್ರಕ್ರಿಯೆಗಳ ಆದೇಶ ಹೊರಡಿಸಬೇಕೆಂಬ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸುತ್ತೋಲೆ...

Published On :
ನವದೆಹಲಿ: ದಿನಕ್ಕೆ 2 ಸಾವಿರ ಕೋಟಿ ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಸಾಲಕ್ಕೆ ದಿವಾಳಿತನದ ಪ್ರಕ್ರಿಯೆಗಳ ಆದೇಶ ಹೊರಡಿಸಬೇಕೆಂಬ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸುತ್ತೋಲೆ ಕಾನೂನು ಮತ್ತು ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಅದನ್ನು ತಳ್ಳಿ ಹಾಕಿದೆ.
ಇದರಿಂದ ಮಾರುಕಟ್ಟೆಯಲ್ಲಿನ ನಿಯಂತ್ರಣ ವಲಯಕ್ಕೆ ನಿರಾಳತೆ ಸಿಕ್ಕಂತಾಗಿದೆ. ಆರ್ ಬಿಐ ಸುತ್ತೋಲೆ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ಕೈಗಾರಿಕೆ, ವಿದ್ಯುತ್, ರಸಗೊಬ್ಬರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ರೊಹಿಂಟನ್ ಫಾಲಿ ನಾರಿಮನ್ ಅವರನ್ನೊಳಗೊಂಡ ನ್ಯಾಯಪೀಠ, ಆರ್ ಬಿಐಯ ಸುತ್ತೋಲೆ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ಘೋಷಿಸಿದ್ದಾರೆ. ಆರ್ ಬಿಐಯ ಸುತ್ತೋಲೆಯನ್ನು ಪ್ರಶ್ನಿಸಿ ಕಳೆದ ವರ್ಷ ಫೆಬ್ರವರಿ 12ರಂದು ಈ ವಲಯಗಳ ಮುಖ್ಯಸ್ಥರು ಕೋರ್ಟ್ ಮೊರೆ ಹೋಗಿದ್ದರು.
ಉದ್ಯಮ ವಲಯದಲ್ಲಿ ಸುಮಾರು 2.2 ಲಕ್ಷ ಕೋಟಿ ಸಾಲ ಬ್ಯಾಂಕಿಗೆ ಹಿಂತಿರುಗಿಸದೆ ಬಾಕಿಯಾಗಿದ್ದ ಬಗ್ಗೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಪೂರ್ವ-ದಿವಾಳಿತನ ಮತ್ತು ದಿವಾಳಿತನ ಸಂಹಿತೆ (IBC) ಹಂತದಲ್ಲಿ ವಾಣಿಜ್ಯ ಸಂಸ್ಥೆಯೊಂದು ದಿನಕ್ಕೆ 2 ಸಾವಿರ ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಮೊತ್ತದ ಸಾಲಕ್ಕೆ ಅವಧಿ ಮುಗಿದ ಒಂದು ದಿನದ ನಂತರವೂ ಕೂಡ ಬಡ್ಡಿ ಪಾವತಿಸದಿದ್ದರೆ ಅವುಗಳನ್ನು ವಸೂಲಿ ಮಾಡಲು ಆರ್ ಬಿಐ ಕ್ರಮ ತೆಗೆದುಕೊಳ್ಳಬಹುದೆಂದು ಸುತ್ತೋಲೆಯಲ್ಲಿ ಆದೇಶ ಹೊರಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtReserve Bankರಿಸರ್ವ್ ಬ್ಯಾಂಕ್ಸುಪ್ರೀಂ ಕೋರ್ಟ್RBI circularUltra viresಆರ್ ಬಿಐ ಸುತ್ತೋಲೆದಿವಾಳಿತನ ಪ್ರಕ್ರಿಯೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


