ಉಚಿತ ಅಥವಾ ಗೌರವ ಐಪಿಎಲ್ ಟಿಕೇಟುಗಳ ಮೇಲೆ 18 ಶೇ. ಜಿಎಸ್ಟಿ ಪಾವತಿ: ಎಎಆರ್ ಆದೇಶ
ಐಪಿಎಲ್ ಪಂದ್ಯಗಳಿಗೆ ಫ್ರಾಂಚೈಸಿ ಮಾಲೀಕರಿಂದ ನೀಡಲ್ಪಟ್ಟ ಉಚಿತ ಅಥವಾ ಗೌಯ್ರವ ಟಿಕೆಟ್ ಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಬೇಕು ಎಂದು ಅಥಾರಿಟಿ ಫಾರ್.....

Published On :
ನವದೆಹಲಿ ಐಪಿಎಲ್ ಪಂದ್ಯಗಳಿಗೆ ಫ್ರಾಂಚೈಸಿ ಮಾಲೀಕರಿಂದ ನೀಡಲ್ಪಟ್ಟ ಉಚಿತ ಅಥವಾ ಗೌಯ್ರವ ಟಿಕೆಟ್ ಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಬೇಕು ಎಂದು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ (ಎಎಆರ್) ಆದೇಶಿಸಿದೆ.
ಐಪಿಎಲ್ ಲ್ರಿಕೆಟ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲೀಕ ವ ಕೆ.ಪಿ.ಪಿ ಡ್ರೀಮ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಅರ್ಜಿಯ ಪ್ರತಿಕ್ರಿಯೆಯಾಗಿ, ಎಎಆರ್ ಹೇಳಿಕೆ ನಿಡಿದೆ. ಉಚಿತ ಅಥವಾ ಗೌರವ ಟಿಕೆಟ್ ನೀಡುವ ವ್ಯವ್ಬಸ್ಥೆಯು ಸೇವೆಯ ಪೂರೈಕೆ ಎನ್ನುವ ಅರ್ಥವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ ಹೀಗಾಗಿ ಅದಕ್ಕೆ ಸರಕು ಸೇವಾ ತೆರಿಗೆ ವ್ಯಾಪ್ತಿಗೆ ಬರಲಿದೆ ಎಂದು ಅದು ಹೇಳಿದೆ.
ಐಪಿಎಲ್ ಟಿಕೆಟ್ ಗಳ ಮಾರಾಟದ ಮೇಲಿನ ಜಿಎಸ್ಟಿ ದರವು ಶೇಕಡಾ 18 ಆಗಿದೆ.
ಇನ್ನು ಇಂತಹಾ ಟಿಕೆಟ್ ಗಳ ಇನ್ ಪುಟ್ ಹಾಗೂ ಇನ್ ಪುಟ್ ಸೇವೆಗೆ ಮಾತ್ರವೇ ಉಚಿತ, ಗೌರವ ಟಿಕೆಟ್ ಗಾಗಿ ಪಾವತಿಸಿದ ತೆರಿಗೆಗಳ ಮರುಪಾವತಿ ಪಡೆಯಲು ಪಿ ಪಿ ಎಚ್ ಡ್ರೀಮ್ ಕ್ರಿಕೆಟ್ ಅರ್ಹತೆ ಪಡೆಯುತ್ತದೆ ಎಂದು ಎಎಆರ್ ಹೇಳಿದೆ. ವಿವಿಧ ವ್ಯಕ್ತಿಗಳಿಗೆ ಕೆ.ಪಿ.ಪಿ ಡ್ರೀಮ್ ಕ್ರಿಕೆಟ್ ನೀಡಿದಉಚಿತ ಹಾಗೂ ಗೌರವ ಟಿಕೆಟ್ ಗಳು ಜಿಎಸ್ಟಿ ತೆರಿಗೆ ವ್ಯಾಪ್ತಿಗೆ ಬರಲಿದೆ ಎನ್ನುವುದು ಜಿಎಸ್ಟಿ ಕಾನೂನಿನಲ್ಲಿನ ನಿಯಮಗಳಿಂದ ಖಚಿತವಾಗಲಿದೆ.
ಎಎಆರ್ ಆದೇಶದ ಬಗ್ಗೆ ಪ್ರತಿಕ್ರಯಿಸಿದ ಇವೈ ತೆರಿಗೆ ಪಾಲುದಾರ ಅಭಿಷೇಕ್ ಜೈನ್ "ಜಿಎಸ್ಟಿ ಕಾನೂನಿನಡಿಯಲ್ಲಿ ಸಂಬಂಧವಿಲ್ಲದ ವ್ಯಕ್ತಿಗಳಿಗೆ ಅಥವಾ ಪಕ್ಷಕ್ಕೆ ನೀಡಲ್ಪಡುವ ಸೇವೆಗಳ ಕುರುಇತು ಜಿಎಸ್ಟಿ ಲೆವಿ ಇರುವುದಿಲ್ಲ.ಇಂತಹ ವೇಳೆ ಉದ್ಯಮವು ಅಳವಡಿಸಿಕೊಂಡಿರುವ ಯಾವುದೇ ಜಿಎಸ್ಟಿ ನಿಯಮಾವಳಿಗೆ ಈ ಕಾನೂನು ಅನ್ವಯವಾಗುವುದಿಲ್ಲ"
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


