ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ 50 ಸಾವಿರ ಕೋಟಿ ರೂ. ನಷ್ಟ: ಸಿಆರ್ ಐಎಸ್ಐಎಲ್
ಸತತ ಮೂರನೇ ವರ್ಷ ಕೂಡ ಸಾರ್ವಜನಿಕ ವಲಯ ಬ್ಯಾಂಕುಗಳು ಮರುಪಾವತಿಯಾಗದ ಸಾಲದಿಂದ ...

ಮುಂಬೈ: ಸತತ ಮೂರನೇ ವರ್ಷ ಕೂಡ ಸಾರ್ವಜನಿಕ ವಲಯ ಬ್ಯಾಂಕುಗಳು ಮರುಪಾವತಿಯಾಗದ ಸಾಲದಿಂದ ನಷ್ಟ ಅನುಭವಿಸಿವೆ ಎಂದು ರೇಟಿಂಗ್ ಗಳು, ಸಂಶೋಧನೆ ಮತ್ತು ನೀತಿ ಸಲಹಾ ಸೇವೆಗಳನ್ನು ಒದಗಿಸುವ ಜಾಗತಿಕ ವಿಶ್ಲೇಷಣಾತ್ಮಕ ಕಂಪನಿ ಸಿಆರ್ ಐಎಸ್ಐಎಲ್ ವರದಿ ಹೇಳಿದೆ.
ಆದರೆ ಒಂದು ಸಮಾಧಾನಕರ ಸಂಗತಿಯೆಂದರೆ ಕಳೆದ ವರ್ಷ 85 ಸಾವಿರ ಕೋಟಿ ರೂಪಾಯಿ ಅನುತ್ಪಾದಕ ಸಾಲಗಳಿಂದ ನಷ್ಟವಾಗಿದ್ದು ಈ ವರ್ಷ ಅದರ ಮೊತ್ತ 50 ಸಾವಿರ ಕೋಟಿ ರೂಪಾಯಿಗೆ ಇಳಿದಿದೆ.
ಬ್ಯಾಂಕಿಂಗ್ ವಲಯದಲ್ಲಿ ಅನುತ್ಪಾದಕ ಆಸ್ತಿಗಳ ಮೌಲ್ಯ 2019ರ ಹಣಕಾಸು ವರ್ಷದ ಕೊನೆಯ ವೇಳೆಗೆ ಶೇಕಡಾ 60ರಷ್ಟಾಗುವ ಸಾಧ್ಯತೆಯಿದೆ. ಕಳೆದ ಹಣಕಾಸು ವರ್ಷದ ಕೊನೆಗೆ ಇದು ಶೇಕಡಾ 50ರಷ್ಟಾಗಿತ್ತು, ಬ್ಯಾಂಕಿಂಗ್ ವಹಿವಾಟುಗಳು ಹೆಚ್ಚಾಗಲು ಖಾಸಗಿ ಬ್ಯಾಂಕುಗಳು ಸ್ವಲ್ಪ ಉತ್ತೇಜನ ನೀಡುತ್ತವೆ ಎಂದು ಸಿಆರ್ ಐಎಸ್ಐಎಲ್ ಹೇಳುತ್ತದೆ.
ಅನುತ್ಪಾದಕ ಆಸ್ತಿಗಳ ಕುಸಿತಗಳು ಕ್ರಮೇಣ ಕಡಿಮೆಯಾಗುತ್ತದೆಯಾದರೂ ನಮ್ಮ ನಿರೀಕ್ಷೆಯ ಹೊರತಾಗಿಯೂ ಈ ಹಣಕಾಸು ವರ್ಷಕ್ಕೆ ಸರಬರಾಜು ವೆಚ್ಚಗಳು 2.8 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಶೇಕಡಾ 100ರಷ್ಟು ಅನುತ್ಪಾದಕ ಸಾಲಗಳ ಮೊತ್ತದಲ್ಲಿ ಶೇಕಡಾ 25ರಷ್ಟು ಇಂಧನ ವಲಯ ಸಾಲಗಳಾಗಿವೆ.
ಈ ಹಣಕಾಸು ವರ್ಷದ ದ್ವಿತೀಯ ಅವಧಿಯಲ್ಲಿ ಬ್ಯಾಂಕಿಂಗ್ ವಲಯಗಳ ಲಾಭಗಳು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಸಿಆರ್ ಐಎಸ್ ಐಎಲ್ ಹಿರಿಯ ನಿರ್ದೇಶಕ ಕೃಷ್ಣನ್ ಸೀತಾರಾಮ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


