ವಾಣಿಜ್ಯ

ವಾಟ್ಸಾಪ್ ಸಂಸ್ಥೆಯ ಭಾರತದ ಮುಖ್ಯ ಉದ್ಯಮ ಅಧಿಕಾರಿ ನೀರಜ್ ಅರೊರ ರಾಜೀನಾಮೆ

ತಾವು ವಾಟ್ಸಾಪ್ ಸಂಸ್ಥೆ ತೊರೆಯುತ್ತಿರುವುದಾಗಿ ಭಾರತದ ಮುಖ್ಯ ಉದ್ಯಮ ಅಧಿಕಾರಿ ನೀರಜ್ ಅರೊರ...

ವಾಟ್ಸಾಪ್ ಸಂಸ್ಥೆಯ ಭಾರತದ ಮುಖ್ಯ ಉದ್ಯಮ ಅಧಿಕಾರಿ ನೀರಜ್ ಅರೊರ ರಾಜೀನಾಮೆ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ತಾವು ವಾಟ್ಸಾಪ್ ಸಂಸ್ಥೆ ತೊರೆಯುತ್ತಿರುವುದಾಗಿ ಭಾರತದ ಮುಖ್ಯ ಉದ್ಯಮ ಅಧಿಕಾರಿ ನೀರಜ್ ಅರೊರ ಘೋಷಿಸಿದ್ದಾರೆ.

ಕಳೆದ ವರ್ಷ ಫೇಸ್ ಬುಕ್ ಮತ್ತು ಅದರ ಇತರ ಸೋಷಿಯಲ್ ಮೀಡಿಯಾ ಕಂಪೆನಿಗಳನ್ನು ತೊರೆದಿದ್ದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮುಂದಿನ ತಮ್ಮ ಕಾರ್ಯವನ್ನು ಮುಂದುವರಿಸುವುದಾಗಿಯೂ ತಿಳಿಸಿದ್ದಾರೆ.

ದೆಹಲಿಯ ಐಐಟಿಯ ವಿದ್ಯಾರ್ಥಿಯಾಗಿದ್ದ ನೀರಜ್ ಅರೊರ ವಾಟ್ಸಾಪ್ ಸೋಷಿಯಲ್ ಮೀಡಿಯಾ ಸಂಸ್ಥೆಯಲ್ಲಿ ನಾಲ್ಕನೇ ದರ್ಜೆಯ ಅಧಿಕಾರಿಯಾಗಿದ್ದರು. ಈ ವರ್ಷದ ಆರಂಭದಲ್ಲಿ ವಾಟ್ಸಾಪ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.

2011ರಿಂದ ವಾಟ್ಸಾಪ್ ಕಂಪೆನಿ ಜೊತೆ ಸಹಯೋಗ ಹೊಂದಿದ್ದ ಅರೊರ ವಾಟ್ಸಾಪ್ ನ ಸಹ ಸಂಸ್ಥಾಪಕ ಜಾನ್ ಕೌಮ್ ಕಂಪೆನಿ ತೊರೆದ ಏಳು ತಿಂಗಳಲ್ಲಿಯೇ ತಾವು ಕೂಡ ಅದೇ ಹಾದಿ ತುಳಿದಿದ್ದಾರೆ.

ವಾಟ್ಸಾಪ್ ಕಂಪೆನಿ ಸೇರಿಕೊಂಡು 7 ವರ್ಷ ಕಳೆದವು ಎಂದರೆ ನಂಬಲಸಾಧ್ಯವಾಗುತ್ತಿದೆ. ಇದೀಗ ಮುಂದೆ ಹೋಗುವ ಸಮಯ ಬಂದಿದೆ. ವಾಟ್ಸಾಪ್ ಪ್ರತಿದಿನ ಸಮಾಜದ ವಿವಿಧ ವರ್ಗಗಳ ಜನರನ್ನು ತಲುಪುವಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿಕೊಳ್ಳಲು ಖುಷಿಯಾಗುತ್ತಿದೆ ಎಂದು ಅರೊರ ನಿನ್ನೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಮುಂದೆ ಕೂಡ ವಾಟ್ಸಾಪ್ ಸೋಷಿಯಲ್ ಮೀಡಿಯಾ ಜನರಿಗೆ ಹತ್ತಿರವಾಗಿ, ಸರಳವಾಗಿ, ಸುರಕ್ಷಿತವಾಗಿ ಮತ್ತು ನಂಬಲರ್ಹ ಸಂವಹನ ಮಾಧ್ಯಮವಾಗಿ ಕೆಲಸ ಮಾಡುತ್ತದೆ ಎಂದು ನಂಬಿಕೆ ಹೊಂದಿದ್ದೇನೆ ಎಂದು ಅರೊರ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿಗಳು ತಪ್ಪಾಗಿ ಹೋಗುತ್ತಿವೆ ಎಂದು ಬಳಕೆದಾರರಿಂದ ದೂರುಗಳು ಬರುತ್ತಿರುವ ಸಂದರ್ಭದಲ್ಲಿ ಅರೊರ ನಿರ್ಗಮನ ವಾಟ್ಸಾಪ್ ಕಂಪೆನಿಗೆ ನಿಜಕ್ಕೂ ಸವಾಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.