ವಾಣಿಜ್ಯ

ವಿಶ್ವಸಂಚಾರಕ್ಕಾಗಿ ಸಂಬಳ - ಅದು ವಿಶ್ವಾಸಾರ್ಹ ವೃತ್ತಿ ಮಾರ್ಗವೇ?

ನಿಮ್ಮ ವ್ಯಕ್ತಿತ್ವ ಮತ್ತು ಕೌಶಲ್ಯಗಳನ್ನು ಯಾವ ವೃತ್ತಿಜೀವನವು ಅತ್ಯುತ್ತಮವಾಗಿ ಸರಿಹೊಂದಿಸುತ್ತದೆ ಎಂಬುದರ ಕುರಿತು ಯೋಚನೆಯೇ?

ವಿಶ್ವಸಂಚಾರಕ್ಕಾಗಿ ಸಂಬಳ - ಅದು ವಿಶ್ವಾಸಾರ್ಹ ವೃತ್ತಿ ಮಾರ್ಗವೇ?
ವಿಶ್ವಸಂಚಾರಿ - ಅದು ವಿಶ್ವಾಸಾರ್ಹ ವೃತ್ತಿ
Published On :

ನಿಮ್ಮ ವ್ಯಕ್ತಿತ್ವ ಮತ್ತು ಕೌಶಲ್ಯಗಳನ್ನು ಯಾವ ವೃತ್ತಿಜೀವನವು ಅತ್ಯುತ್ತಮವಾಗಿ ಸರಿಹೊಂದಿಸುತ್ತದೆ ಎಂಬುದರ ಕುರಿತು ಯೋಚನೆಯೇ? ಇದು ಕಷ್ಟದ ವಿಷಯ. ಭವಿಷ್ಯದಲ್ಲಿ ಏನು ಮಾಡಬೇಕೆಂದು ಆಯ್ಕೆ ಮಾಡಬೇಕೆಂದು ನಿರ್ಧರಿಸಿ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಅನೇಕ ಜನರು ಸಮಸ್ಯೆ ಎದುರಿಸುತ್ತಾರೆ. ನೀವು ಇನ್ನೂ ವಿದ್ಯಾರ್ಥಿಯಾಗಿರಬಹುದು, ಅಥವಾ ನೀವು ಗೃಹಾಧಾರಿತ ವ್ಯವಹಾರವನ್ನು ಹೊಂದಿರಬಹುದು ಮತ್ತು ನಿಮಗೆ ಅದರಿಂದ ಸಾಕಾಯ್ತು ಅನಿಸಿರಬಹುದು. ಇತ್ತೀಚಿನ ದಿನಗಳಲ್ಲಿ, ಸುಮಾರು ಎಂಟು ಗಂಟೆಗಳಿಗಿಂತ ಕಡಿಮೆ ಕೆಲಸ ಮಾಡುವುದು ಮತ್ತು ಅವರು ಬಯಸುವ ಯಾವುದೇ ಕೆಲಸವನ್ನು ಮಾಡಲು ಸಾಕಷ್ಟು ಹಣವನ್ನು ಗಳಿಸುವುದು ಬಹುತೇಕ ಎಲ್ಲರ ಉದ್ದೇಶ. ಇದು ನನಸಾಗಲು ಕಷ್ಟಕರವಾದ ಕನಸು ಎಂಬಂತ ತೋರುತ್ತದೆ, ಆದರೆ ಅದೇ ಸಮಯದಲ್ಲಿ ಈ ಎರಡು ಅಗತ್ಯಗಳನ್ನು ಪೂರೈಸುವ ಒಂದು ಉದ್ಯೋಗವಿದೆ. ವಿಶ್ವ ಪರ್ಯಟನೆ ಮಾಡುತ್ತಾ ಕೆಲವು ಚಿತ್ರಗಳನ್ನು ತೆಗೆದುಕೊಳ್ಳುವುದು ಮತ್ತು ಅದಕ್ಕಾಗಿ ಸಂಬಳ ಪಡೆಯುವ ಕೆಲಸ ಹೇಗೆ? ನೀವು ಎಂದಾದರೂ 'ವಿಶ್ವಸಂಚಾರಿ' (ಗ್ಲೋಬ್ ಟ್ರೋಟರ್) ಗಳ ಬಗ್ಗೆ ಕೇಳಿದ್ದೀರಾ? ಪ್ರಯಾಣ ಮಾಡುವ ಖುಷಿ ಹೊಂದಿರುವ ಮತ್ತು ಅದಕ್ಕಾಗಿ ಅವರ ಸಮಯ ಮತ್ತು ಸಂಪನ್ಮೂಲಗಳನ್ನು ಖರ್ಚು ಮಾಡುತ್ತಿರುವ ಜನರು ಇವರು. ಆದರೂ ವಿಶ್ವಸಂಚಾರಿ (ಗ್ಲೋಬ್ ಟ್ರೋಟರ್) ಆಗಿರುವುದರಿಂದ ಬಹಳಷ್ಟು ಹಣವನ್ನು ಗಳಿಸಬಹುದು ಎಂಬುದನ್ನು ತಿಳಿದಿರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ.

ಏಕೆ ಇದಕ್ಕೆ ಹೆಚ್ಚು ಪ್ರಚಾರ, ಪ್ರೋತ್ಸಾಹ ನೀಡಲಾಗುತ್ತಿಲ್ಲ? ಏಕೆಂದರೆ, ಹೆಚ್ಚಿನವರು ಸ್ಥಿರತೆ ನೀಡುವ ಕಟ್ಟುನಿಟ್ಟಾದ ಕೆಲಸವನ್ನು ಹೊಂದಿರಲು ಆದ್ಯತೆ ನೀಡುತ್ತಾರೆ. ಎಲ್ಲರೂ ವಿಶ್ವಸಂಚಾರಿಯಾಗಿ ಬದುಕಲಾರರು. ಈ ಕೆಲಸದಲ್ಲಿರುವವರು ಎಂದಿಗೂ ಒಂದು ಸ್ಥಳದಲ್ಲಿ ಅಥವಾ ಮತ್ತೊಂದರಲ್ಲಿ ನೆಲೆಗೊಳ್ಳುವಂತಿಲ್ಲ. ನೀವು ಜನರನ್ನು ಭೇಟಿ ಮಾಡುತ್ತೀರಿ, ನೀವು ನೆನಪುಗಳನ್ನು ಸೃಷ್ಟಿಸುತ್ತೀರಿ - ಆದರೆ ಅದನ್ನು ಮೀರಲು ಮತ್ತು ನಿಮ್ಮ ಮುಂದಿನ ಸಾಹಸಕ್ಕೆ ತೆರಳಲು ನೀವು ಶಕ್ತಿಯನ್ನು ಹೊಂದಿರಬೇಕು. ಈ ಕೆಲಸಕ್ಕೆ ಬೇಕಾಗುವ ಎಲ್ಲವನ್ನೂ ನೀವು ಹೊಂದಿದ್ದರೆ, ನೀವು ಉತ್ಸಾಹಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು ಮತ್ತು ಸ್ವಶಕ್ತಿಯಿಂದ ಹೇಗೆ ನಿಲ್ಲಬಹುದು ಎಂಬುದನ್ನು ತೋರಿಸಿ ಎಲ್ಲರೂ ಆಶ್ಚರ್ಯಪಡುವಂತೆ ಮಾಡಬಹುದು. ಇದನ್ನೇ ತಾನೇ ನೀವು ಮನಸ್ಸಿನಲ್ಲಿ ಅಂದುಕೊಂಡಿದ್ದು? ಈ ಅಸಾಮಾನ್ಯ ವೃತ್ತಿಜೀವನದ ಮಾರ್ಗವನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.

ಇದು ಕಾನೂನುಬದ್ಧವೇ?
ಮೊದಲನೆಯದಾಗಿ, ಇಂತಹ ಕೆಲಸವು ಕಾನೂನುಬದ್ಧವೇ? ಉತ್ತರ ಹೌದು. ನಿಮ್ಮನ್ನು ಹವ್ಯಾಸಿ ಎಂದು ಕರೆದುಕೊಳ್ಳಬಹುದು. ಪ್ರಯಾಣದ ಮೂಲಕ ನೀವು ಪಡೆಯುವ ಎಲ್ಲಾ ಹಣವು,  ವಿವಿಧ ಉದ್ದೇಶಗಳಿಗಾಗಿ ನಿಮ್ಮ ಸೇವೆಗಳನ್ನು ಬಳಸಬಹುದಾದ ಜನರಿಗಾಗಿ. ಆದಾಗ್ಯೂ, ನೀವು ವೀಸಾ ಮತ್ತು ಇತರ ಪ್ರಯಾಣದ ದಾಖಲೆಗಳ ಬಗ್ಗೆ ಹೆಚ್ಚಿನ ಎಚ್ಚರಿಕೆಯಿಂದಿರಬೇಕು. ಪ್ರತಿಯೊಂದು ದೇಶಕ್ಕೂ ವಿವಿಧ ರೀತಿಯ ವೀಸಾ, ಪ್ರಯಾಣ ದಾಖಲೆಗಳು ಮತ್ತು ಗುರುತಿನ (ಐಡಿ) ದಾಖಲೆಗಳು ಬೇಕಾಗುತ್ತವೆ. ನಿಮ್ಮ ನಿರ್ಗಮನಕ್ಕೆ ಮುಂಚೆಯೇ ಮಾಹಿತಿ ಪಡೆದುಕೊಂಡಿರಿ. ಅಗತ್ಯವಿರುವ ವೀಸಾದ ಕಾರಣದಿಂದಾಗಿ ಮಲೇಷ್ಯಾ ಅಥವಾ ಭಾರತದಂತಹ ಸ್ಥಳಗಳಿಗೆ ಭೇಟಿ ನೀಡುವುದಕ್ಕೆ ಅಥವಾ ಅಲ್ಲಿ ಕೆಲಸ ಮಾಡುವುದಕ್ಕೆ ಸ್ವಲ್ಪ ಎಚ್ಚರಿಕೆ ಅಗತ್ಯ. ನೀವು ಮುಂಬೈ ಮೂಲಕ ಮಲೇಷ್ಯಾ ಎಂಟ್ರಿ ವೀಸಾ ಗಾಗಿ ಆನ್ಲೈನ್ ನಲ್ಲಿ ನೋಡಬಹುದು ಮತ್ತು ನಿಮಗೆ ಬೇಕಾದ ಮಾಹಿತಿಯನ್ನು ಅಲ್ಲಿ ಕಂಡುಕೊಳ್ಳಬಹುದು. ಅದರ ಬಗ್ಗೆ ತುಂಬಾ ಚಿಂತಿಸಬೇಡಿ - ಹೊರಡುವ ಮೊದಲು ನೀವು ಇದನ್ನು ನೋಡಿಕೊಳ್ಳಬಹುದು. ಜೊತೆಗೆ, ನೀವು ಒಂದೇ ಸ್ಥಳದಲ್ಲಿ ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ಸಮಯವನ್ನು ಕಳೆಯಬಹುದು.

ನನ್ನ ಆದಾಯ ಮೂಲಗಳು ಯಾವುವು?
ನೀವು ನಿಮ್ಮ ಪ್ರಯಾಣವನ್ನು ಆರಂಭಿಸಿದ ತಕ್ಷಣವೇ ಬ್ರ್ಯಾಂಡ್ ಪಾಲುದಾರಿಕೆಗಳನ್ನು ಆಕರ್ಷಿಸಲು ಪ್ರಾರಂಭಿಸಬಹುದು. ನೀವು ಸುಂದರವಾದ ಫೋಟೋಗಳನ್ನು ತೆಗೆದರೆ ಅಥವಾ ನೀವು ನೋಡುವುದನ್ನು ಸುಂದರವಾಗಿ ವಿವರಿಸುವ ಸಾಮರ್ಥ್ಯವಿದ್ದರೆ, ಬ್ರ್ಯಾಂಡ್ ರಾಯಭಾರಿಯಾಗುವುದು ನಿಮ್ಮ ಅಂದುಕೊಂಡಿದ್ದಕ್ಕಿಂತ ಸುಲಭವಾಗಿದೆ. ಪ್ರಯಾಣ, ಸ್ಥಳಗಳು, ನೀವು ಆಗಾಗ್ಗೆ ಬಳಸುವ ಪದಾರ್ಥಗಲು, ನೀವು ಸೇವಿಸುವ ಆಹಾರ, ವಿಮಾನ ಕಂಪನಿಗಳು ಮುಂತಾದವುಗಳನ್ನು ಪ್ರಚಾರ ಮಾಡಿ. ನೀವು ಭೇಟಿ ನೀಡುವ ಸ್ಥಳಗಳನ್ನು ಅವಲಂಬಿಸಿ, ಡೆಸ್ಟಿನೇಶನ್ ವ್ಯಾಪಾರೋದ್ಯಮಿಯಾಗಿ ಕೆಲಸ ಮಾಡುವ ಅವಕಾಶವೂ ಇರುತ್ತದೆ. ಅಂದರೆ, ನೀವು ಆಯಾ ಸ್ಥಳಗಳ ಕುರಿತು ಬರೆಯಲು, ಮತ್ತು ಅದನ್ನು ಬೇರೆ ಜನರಿಗೆ ಪ್ರಚಾರ ಮಾಡುವ ಬ್ಲಾಗ್ ಅನ್ನು ನೀವು ರಚಿಸುತ್ತೀರಿ. ಸಾಮಾಜಿಕ ಮಾಧ್ಯಮದ ವಿಷಯ, ಛಾಯಾಗ್ರಹಣ ಅಥವಾ ವಿಡಿಯೋ ತುಣುಕನ್ನು ರಚಿಸುವುದು ಸಹ ಈ ಕೆಲಸದ ಭಾಗವಾಗಿದೆ, ಆದರೆ ನಿಮಗೆ ಬೇಕಾದುದನ್ನು ಮಾಡಲು ಸಾಕಷ್ಟು ಹಣವನ್ನು ನೀವು ಗಳಿಸುವಿರಿ.

ನೀವು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್ನಿಂದ ವಿರಾಮವನ್ನು ತೆಗೆದುಕೊಳ್ಳಲು ಬಯಸಿದರೆ, ನೀವು ಭೇಟಿ ನೀಡುವ ಸ್ಥಳಗಳಲ್ಲಿ ಪ್ರವಾಸಗಳನ್ನು ಆಯೋಜಿಸಿ. ಕೆಲವು ಆಕರ್ಷಕ ಸ್ಥಳಗಳಲ್ಲಿ ಇಂಗ್ಲೀಷ್-ಮಾತನಾಡುವ ಮಾರ್ಗದರ್ಶಿಗಳಿರುವುದಿಲ್ಲ, ಆದ್ದರಿಂದ ನಿಮ್ಮ ಕೆಲಸ ಸ್ಥಳೀಯರಿಗೆ ಮತ್ತು ನಿಮಗೂ ಸಹಾಯಕವಾಗಬಹುದು. ಜೊತೆಗೆ, ವಾರಾಂತ್ಯಗಳಲ್ಲಿ ಅಥವಾ ಸಂಜೆಯ ವೇಳೆ ಅದನ್ನು ಮಾಡಲು ಖಂಡಿತವಾಗಿಯೂ ಸಂತೋಷವಾಗುತ್ತದೆ. ನೀವು ಸ್ವಲ್ಪ ಸಮಯ ಸಿಕ್ಕಿದರೆ, ನೀವು ಈ ಕ್ಷಣದಲ್ಲಿ ಜೀವಿಸುತ್ತಿರುವ ಸಂಪೂರ್ಣ ಪ್ರಯಾಣದ ಅನುಭವದ ಬಗ್ಗೆ ನಿಮ್ಮ ಅನಿಸಿಕೆಯನ್ನು ಬರೆಯಿರಿ. ಅಂತಹ ಬರಹಗಳನ್ನು ಓದಲು ಜನರು ಆಸಕ್ತರಾಗಿರುತ್ತಾರೆ, ಮತ್ತು ಸ್ವಲ್ಪ ಸಮಯದ ನಂತರ ನೀವು ಅದರ ಬಗ್ಗೆ ಪುಸ್ತಕವನ್ನೂ ಬರೆದು ಮಾರಾಟ ಮಾಡಬಹುದು.

ಕೆಲ ಸಮಯದ ನಂತರ ಇದರಿಂದ ಸಾಕಾಯ್ತು ಅನಿಸಬಹುದೇ?
ಈ ವೃತ್ತಿಜೀವನದ ಮಾರ್ಗವು ಸರಿಯಾದುದೇ ಎಂದು ಅನೇಕ ಜನರು ಆಶ್ಚರ್ಯಪಡುತ್ತಾರೆ, ಏಕೆಂದರೆ ಇದಕ್ಕೆ ಮುಗಿತಾಯದ ದಿನಾಂಕ ಇಲ್ಲ ಎಂದು ಅವರು ನಂಬಿದ್ದಾರೆ. ನಿಜ ಏನೆಂದರೆ, ವಯಸ್ಸು ಕೇವಲ ಒಂದು ಸಂಖ್ಯೆ ಮತ್ತು ಅಂತಹ ಕೆಲಸ ಮಾಡುವುದನ್ನು ತಡೆಯುವ ಏಕೈಕ ವಿಷಯವೆಂದರೆ ಆರೋಗ್ಯ ಸಮಸ್ಯೆಗಳು. ಗ್ಲೋಬ್ ಟ್ರೋಟರ್ (ವಿಶ್ವಸಂಚಾರಿ) ಆಗಲು ನಿಮ್ಮಲ್ಲಿ ಎಲ್ಲವೂ ಇದೆ ಎಂದು ನಿಮಗನ್ನಿಸಿದರೆ, ಹಿಂಜರಿಯಬೇಡಿ. ಅವಕಾಶವು ನಿಮಗೆ ಕಾಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.