ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದ 41 ಲಕ್ಷ ಉಳಿತಾಯ ಬ್ಯಾಂಕ್ ಖಾತೆಗಳನ್ನು ರದ್ದುಪಡಿಸಿದ ಎಸ್ಬಿಐ
ಸರಾಸರಿ ಮಾಸಿಕ ಹಣವನ್ನು ಖಾತೆಯಲ್ಲಿ ನಿರ್ವಹಿಸದಿದ್ದ ಸುಮಾರು 41.16 ಉಳಿತಾಯ ಖಾತೆಗಳನ್ನು ...

ಇಂದೋರ್: ಸರಾಸರಿ ಮಾಸಿಕ ಹಣವನ್ನು ಖಾತೆಯಲ್ಲಿ ನಿರ್ವಹಿಸದಿದ್ದ ಸುಮಾರು 41.16 ಉಳಿತಾಯ ಖಾತೆಗಳನ್ನು ಪ್ರಸಕ್ತ ಹಣಕಾಸು ವರ್ಷದ ಕಳೆದ ಏಪ್ರಿಲ್ ನಿಂದ ಜನವರಿಯವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರದ್ದುಪಡಿಸಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ.
5 ವರ್ಷಗಳ ಅಂತರದ ನಂತರ ಉಳಿತಾಯ ಖಾತೆಗಳಲ್ಲಿ ಸರಾಸರಿ ಕನಿಷ್ಠ ಹಣವನ್ನು ಇರಿಸದಿದ್ದ ಗ್ರಾಹಕರಿಗೆ ಶುಲ್ಕವಿದಿಸುವ ನಿಯಮವನ್ನು ಕಳೆದ ಏಪ್ರಿಲ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮರು ಜಾರಿಗೊಳಿಸಿತ್ತು.
ನಂತರ ಅಕ್ಟೋಬರ್ ನಲ್ಲಿ ಕೆಲವು ಹಂತದವರೆಗೆ ಶುಲ್ಕವನ್ನು ಪರಿಷ್ಕರಿಸಿತ್ತು. ಉಳಿತಾಯ ಖಾತೆಯಲ್ಲಿ ಕನಿಷ್ಠ ಹಣ ನಿರ್ವಹಿಸದಿದ್ದರೆ ದಂಡ ವಿಧಿಸುವ ಪ್ರಕ್ರಿಯೆಯಲ್ಲಿ ಬ್ಯಾಂಕ್ ಕಳೆದ ಏಪ್ರಿಲ್ ನಿಂದ ಈ ವರ್ಷ ಜನವರಿ 31ರವರೆಗೆ 41.16 ಲಕ್ಷ ಉಳಿತಾಯ ಖಾತೆಗಳನ್ನು ರದ್ದುಪಡಿಸಿದೆ ಎಂದು ಮಧ್ಯ ಪ್ರದೇಶದ ನೀಮುಚ್ ನ ಚಂದ್ರಶೇಖರ್ ಗೌದ್ ಎಂಬವರು ಸಲ್ಲಿಸಿದ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕಳೆದ ಫೆಬ್ರವರಿ 28ರಂದು ಸ್ಟೇಟ್ ಬ್ಯಾಂಕ್ ಈ ಉತ್ತರ ನೀಡಿದ್ದು ನಂತರ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿರುವ ಗ್ರಾಹಕರಿಗೆ ವಿಧಿಸುವ ದಂಡ ಶುಲ್ಕದ ಮೊತ್ತವನ್ನು ಕಡಿಮೆ ಮಾಡಿದೆ.
ಸ್ಟೇಟ್ ಬ್ಯಾಂಕ್ ನಲ್ಲಿ 41 ಕೋಟಿ ಉಳಿತಾಯ ಖಾತೆಗಳಿವೆ. ಅದರಲ್ಲಿ 16 ಕೋಟಿ ಪ್ರಧಾನ ಮಂತ್ರಿ ಜನ ಧನ ಯೋಜನೆ/ ಮೂಲ ಉಳಿತಾಯ ಬ್ಯಾಂಕ್ ಠೇವಣಿ(ಬಿಎಸ್ ಬಿಡಿ), ಪಿಂಚಣಿದಾರರು, ಅಪ್ರಾಪ್ತರು, ಸಾಮಾಜಿಕ ಭದ್ರತೆ ಫಲಾನುಭವಿಗಳ ಖಾತೆಗಳಾಗಿವೆ. ಈ ಎಲ್ಲಾ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಇಡದಿದ್ದರೆ ದಂಡವಿಧಿಸುವುದಿಲ್ಲ.
ಸ್ಟೇಟ್ ಬ್ಯಾಂಕ್ ಮೆಟ್ರೊ ಮತ್ತು ನಗರ ಪ್ರದೇಶಗಳಲ್ಲಿ ಸರಾಸರಿ ಕನಿಷ್ಠ ಬ್ಯಾಲೆನ್ಸ್ ಇಡದಿರುವ ಖಾತೆಗಳಿಗೆ ವಿಧಿಸುವ ದಂಡ ಮೊತ್ತವನ್ನು 50 ರೂಪಾಯಿ ಮತ್ತು ಶೇಕಡಾ 18ರಷ್ಟು ತೆರಿಗೆಯಿಂದ 15 ರೂಪಾಯಿ ಮತ್ತು ಶೇಕಡಾ 18ರಷ್ಟು ತೆರಿಗೆಗೆ ಕಡಿಮೆ ಮಾಡಿದೆ.
ನಗರ ಪ್ರದೇಶ ಮತ್ತು ಮೆಟ್ರೊ ನಗರಗಳಲ್ಲಿ ಪ್ರತಿ ತಿಂಗಳಿಗೆ ಗ್ರಾಹಕರು ಕನಿಷ್ಠ 3,000 ರೂಪಾಯಿ ಕನಿಷ್ಠ ಬ್ಯಾಲೆನ್ಸ್ ಹೊಂದಿರಬೇಕು. ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡದಿದ್ದರೆ ದಂಡದ ಮೊತ್ತವನ್ನು 40 ರೂಪಾಯಿಗಳಿಂದ 12 ಮತ್ತು 10 ರೂಪಾಯಿಗಳಿಗೆ ಇಳಿಸಿದೆ.
ಅರೆ ನಗರ ಪ್ರದೇಶಗಳಲ್ಲಿ ತಿಂಗಳಿಗೆ 2,000 ರೂಪಾಯಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1,000 ರೂಪಾಯಿ ಇರಿಸಬೇಕು. ದಂಡ ಶುಲ್ಕವನ್ನು ತಪ್ಪಿಸಬಹುದಾದ್ದರಿಂದ ಬ್ಯಾಂಕು ಗ್ರಾಹಕರಿಗೆ ಉಳಿತಾಯ ಖಾತೆಯಿಂದ ಬಿಎಸ್ ಬಿಡಿಗೆ ವರ್ಗಾಯಿಸುವಂತೆ ಪ್ರೋತ್ಸಾಹಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


