2017-18 ಹಣಕಾಸು ವರ್ಷದಲ್ಲಿ 10, 767 ಕೋಟಿ ಬಹಿರಂಗಪಡಿಸದ ಆದಾಯ ಪತ್ತೆ: ಐಟಿ ಇಲಾಖೆ ವರದಿ
ಆದಾಯ ತೆರಿಗೆ ಇಲಾಖೆ 2017-18ರಲ್ಲಿ 10,000 ಕೋಟಿ ರು. ಬಹಿರಂಗಪಡಿಸದ ಆದಾಯವನ್ನು ಪತ್ತೆಹಚ್ಚಿದೆ..

Published On :
ನವದೆಹಲಿ: ಆದಾಯ ತೆರಿಗೆ ಇಲಾಖೆ 2017-18ರಲ್ಲಿ 10,000 ಕೋಟಿ ರು. ಬಹಿರಂಗಪಡಿಸದ ಆದಾಯವನ್ನು ಪತ್ತೆಹಚ್ಚಿದೆ.. ಇದು ಈ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 20 ಪ್ರತಿಶತದಷ್ಟು ಹೆಚ್ಚಳವಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಎ ಎನ್ ಐ ಗೆ ಹೇಳಿದ್ದಾರೆ.
ಆದಾಯ ತೆರಿಗೆ (ಇಂಟೆಲಿಜೆನ್ಸ್ ಅಂಡ್ ಕ್ರಿಮಿನಲ್ ಇನ್ವೆಸ್ಟಿಗೇಷನ್) ನ ನಿರ್ದೇಶನಾಲಯವು ಈ ಸಾಲಿನಲಿ 10,767 ಕೋಟಿ ರೂ. ಬಹಿರಂಗಪಡಿಸದ ಆದಾಯ ಪತ್ತೆಯಾಗಿದೆ. ಕಳೆದ 2016-17ರಲ್ಲಿ ಈ ಆದಾಯ ಪ್ರಮಾಣವು 9051 ಕೋಟಿ ರೂ. ಆಗಿತ್ತು.
ಪ್ಯಾನ್ ಕಾರ್ಡ್ ಇಲ್ಲದಿರುವುಕೆ, ಫಾರಿನ್ ಅಕೌಂಟ್ ಟ್ಯಾಕ್ಸ್ ಕಂಪ್ಲೈಯನ್ಸ್ ಆಕ್ಟ್ (ಎಫ್ಎಟಿಸಿಎ), ಆಟೊಮೋಟಿವ್ ಎಕ್ಸ್ಚೇಂಜ್ ಆಫ್ ಇನ್ಫೋ (ಎಇಒಐ), ಮತ್ತು ಕಾಮನ್ ರಿಪೋರ್ಟಿಂಗ್ ಸ್ಟ್ಯಾಂಡರ್ಡ್ (ಸಿಆರ್ಎಸ್) ಡೇಟಾದ ಪ್ರಕರಣಗಳ ಪರಿಶೀಲನೆ ಸಂದರ್ಭದಲ್ಲಿ ಈ ಆದಾಯ ಪತ್ತೆಯಾಗಿದೆ.
ಐಟಿ ಇಲಾಖೆಯ ಮೂಲದ ಪ್ರಕಾರ ಈ ಸಾಲಿನಲ್ಲಿ ಎಫ್ಎಟಿಸಿಎ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ. 3500ಕ್ಕೂ ಹೆಚ್ಚು ಎಫ್ಎಟಿಸಿಎ ಪ್ರಕರಣಗಳು ಈ ಸಾಲಿನಲ್ಲಿ ಬಹಿರಂಗವಾಗಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ಬಹಿರಂಗವಾದ ಆದಾಯ ಪ್ರಮಾಣ ಸಹ ದ್ವಿಗುಣವಾಗಿದೆ.
ನವೆಂಬರ್ 2016ರ ಅಪನಗದೀಕರಣ ಬಳಿಕ ಎಇಒಐ / ಸಿಆರ್ಎಸ್ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಇಲಾಖೆ ಮೂಲಗಳು ಹೇಳಿದೆ. 2017-18 ಹಣಕಾಸು ವರ್ಷದಲ್ಲಿ 25.92 ಕೋಟಿ ರು., ಇದೆ.
ವರದಿಯ ಪ್ರಕಾರ, 6000 ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
income taxundisclosed incomeಬಹಿರಂಗಪಡಿಸದ ಆದಾಯFATCADirectorate General of Income Tax (Intelligence and Criminal Investigation). ಆದಾಯ ತೆರಿಗೆಎಫ್ಎಟಿಸಿಎಆದಾಯ ತೆರಿಗೆ ನಿರ್ದೇಶನಾಲ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


