ಸೆನ್ಸೆಕ್ಸ್ ದಾಖಲೆಯ ಆರಂಭ, 11 ಸಾವಿರ ಗಡಿ ದಾಟಿದ ನಿಫ್ಟಿ
ವಾರದ ಆರಂಭದ ದಿನ ಚೇತರಿಕೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರವೂ ಅದೇ ಟ್ರೆಂಡ್ ಮುಂದುವರೆಸಿದ್ದು, ಮಂಗಳವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ದಾಖಲೆ ಅಂಶಗಳ ಏರಿಕೆ ಕಂಡಿದೆ.

Published On :
ಮುಂಬೈ: ವಾರದ ಆರಂಭದ ದಿನ ಚೇತರಿಕೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರವೂ ಅದೇ ಟ್ರೆಂಡ್ ಮುಂದುವರೆಸಿದ್ದು, ಮಂಗಳವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ದಾಖಲೆ ಅಂಶಗಳ ಏರಿಕೆ ಕಂಡಿದೆ.
ವಹಿವಾಟು ಆರಂಭವಾಗುತ್ತಿದ್ದಂತೆಯೇ 150 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ದಾಖಲೆ 36,869.34 ಅಂಕಗಳಿಗೆ ಏರಿಕೆ ಕಂಡಿತು. ಪ್ರಮುಖವಾಗಿ ಏಷ್ಯಾ ಮಾರುಕಟ್ಟೆಯಲ್ಲಿ ಕಂಡುಬಂದ ಸಕಾರಾತ್ಮಕ ಬೆಳವಣಿಗೆ ಮತ್ತು ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದರಿಂದ ಸೆನ್ಸೆಕ್ಸ್ ದಾಖಲೆಯ ಏರಿಕೆ ಕಂಡಿದೆ.
ಅಂತೆಯೇ ನಿಫ್ಚಿ ಕೂಡ ಏರಿಕೆಯತ್ತ ಮುಖ ಮಾಡಿದ್ದು ನಿಫ್ಟಿ 11 ಸಾವಿರದ ಗಡಿ ದಾಟಿದೆ.. ಆ ಮೂಲಕ ಕಳೆದ ಎರಡು ದಿನಗಳಲ್ಲಿ ಸೆನ್ಸೆಕ್ಸ್ 367.37 ಅಂಕಗಳಿಕೆ ಮಾಡಿದ್ದು, ನಿಫ್ಟಿ 0.37ರಷ್ಟು ಏರಿಕೆ ಕಂಡಿದೆ. ಇನ್ನು ಇಂದಿನ ದಾಖಲೆಯ ಏರಿಕೆ ಮೂಲಕ ಉಕ್ಕು, ಇಂಧನ, ಗ್ಯಾಸ್ ಮತ್ತು ಮೂಲಭೂತ ಸೌಕರ್ಯಕ್ಷೇತ್ರಗಳ ಷೇರುಗಳು ಉತ್ತಮ ವಹಿವಾಟು ಕಂಡಿವೆ. ಇದಲ್ಲದೆ ಕ್ಯಾಪಿಟಲ್ ಗೂಡ್ಸ್ ನ ವಹಿವಾಟಿನಲ್ಲಿ 0.88ರಷ್ಟು ಏರಿಕೆ ಕಂಡಿದೆ.
ಮಾರುತಿ ಸುಜುಕಿ. ಟಾಟಾ ಮೋಟರ್ಸ್. ಎಂಅಂಡ್ಎಂ, ಟಾಟಾ ಸ್ಟೀಲ್, ಅಡಾನಿ ಪೋರ್ಟ್ಸ, ಎಲ್ ಅಂಡ್ ಟಿ, ಐಸಿಐಸಿಐ ಬ್ಯಾಂಕ್. ಕೋಲ್ ಇಂಡಿಯಾ, ಇಂಡಸ್ ಇಂಡ್, ಎಚ್ ಡಿಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಪವರ್ ಗ್ರಿಡ್, ಕೋಟಕ್ ಬ್ಯಾಂಕ್, ಎಸ್ ಬಿಐ, ಏಷ್ಯನ್ ಪೇಂಟ್ಸ್, ಏಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ ಶೇರುಗಳ ಮೌಲ್ಯದಲ್ಲಿ ಶೇ.1.42ರಷ್ಟು ಏರಿಕೆ ಕಂಡುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


