ರಿಲಯನ್ಸ್ ಜಿಯೊದಿಂದ ಗ್ರಾಹಕರಿಗೆ 'ಮಾನ್ಸೂನ್ ಹಂಗಾಮ' ಆಫರ್; ನಾಳೆ ಆರಂಭ
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ತನ್ನ ಜಿಯೊಫೋನ್ ಗ್ರಾಹಕರಿಗೆ 501 ರೂಪಾಯಿಗಳ ...

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ತನ್ನ ಜಿಯೊಫೋನ್ ಗ್ರಾಹಕರಿಗೆ 501 ರೂಪಾಯಿಗಳ ಮಾನ್ಸೂನ್ ಹಂಗಾಮ ಸ್ಕೀಮ್ ಆರಂಭಿಸುತ್ತಿದ್ದು ಇಂದು ಆರಂಭವಾಗುತ್ತಿದ್ದು ನಾಳೆಯಿಂದ ಚಾಲನೆಯಾಗಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ಈ ವಿಷಯ ಪ್ರಕಟಿಸಿದ್ದು ನಾಳೆಯಿಂದ ಗ್ರಾಹಕರಿಗೆ ಮಾನ್ಸೂನ್ ಹಂಗಾಮ ಆಫರ್ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಇಂದು ಸಂಜೆ 5.01 ಕ್ಕೆ ಮಾನ್ಸೂನ್ ಹಂಗಾಮ ಯೋಜನೆ ಆರಂಭಕ್ಕೆ ಸಮಯ ನಿಗದಿಪಡಿಸಲಾಗಿದೆ.
ಮಾನ್ಸೂನ್ ಹಂಗಾಮ ಯೋಜನೆಯಡಿ ಮೊಬೈಲ್ ಬಳಕೆದಾರರು ಯಾವುದೇ ಬ್ರಾಂಡ್ ನ ಫ್ಯೂಚರ್ ನ್ನು 501 ರೂಪಾಯಿಗಳ ಜಿಯೊಫೋನ್ ಆಫರ್ ನೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.
2003ರಲ್ಲಿ ರಿಲಯನ್ಸ್ ಇನ್ಕಾಮ್(ಈಗ ರಿಲಯನ್ಸ್ ಕಮ್ಯುನಿಕೇಷನ್) ಆರಂಭಗೊಂಡಿದ್ದಾಗ ಇದೇ ಯೋಜನೆಯಿದ್ದು ಮುಕೇಶ್ ಅಂಬಾನಿಯವರ ನಿಯಂತ್ರಣದಲ್ಲಿತ್ತು.2003ರಲ್ಲಿ ರಿಲಯನ್ಸ್ ಕಂಪೆನಿಯ ಷೇರು ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಳವಾಗಿದ್ದರಿಂದ ಬೇರೆ ಮೊಬೈಲ್ ನಿರ್ವಾಹಕರಿಗೆ ಉಳಿಕೆಯ ಪ್ರಶ್ನೆಯುಂಟಾಗಿತ್ತು.
ರಿಲಯನ್ಸ್ ಜಿಯೊ ಈ ಯೋಜನೆಯ ನಿಯಮ ಮತ್ತು ಷರತ್ತುಗಳನ್ನು ನಾಳೆ ಘೋಷಿಸಲಿದೆ. ಆಗಸ್ಟ್ 15ರ ನಂತರ ಈಗಿರುವ ಮತ್ತು ಹೊಸ ಜಿಯೊಫೋನ್ ಬಳಕೆದಾರರಿಗೆ ಫೇಸ್ ಬುಕ್, ವಾಟ್ಸಾಪ್ ಮತ್ತು ಯೂಟ್ಯೂಬ್ ಗಳು ಕೂಡ ಲಭ್ಯವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


