ಕೇಂದ್ರ ಬಜೆಟ್ ಮಂಡನೆಯ ನಂತರ 439 ಅಂಕ ಇಳಿಕೆ ಕಂಡ ಸೆನ್ಸೆಕ್ಸ್
ಬಜೆಟ್ ಮಂಡನೆಗೆ ಮುನ್ನ ಏರಿಕೆ ಕಂಡುಬಂದಿದ್ದ ಸೆನ್ಸೆಕ್ಸ್ ಹಣಕಾಸು ಸಚಿವ ...

Published On :
ಮುಂಬೈ: ಬಜೆಟ್ ಮಂಡನೆಗೆ ಮುನ್ನ ಏರಿಕೆ ಕಂಡುಬಂದಿದ್ದ ಸೆನ್ಸೆಕ್ಸ್ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಬಜೆಟ್ ಮಂಡಿಸಿದ ನಂತರ 439 ಅಂಕ ಇಳಿಕೆ ಕಂಡುಬಂದಿದೆ.
ಗ್ರಾಹಕ ಬಾಳಿಕೆ ವಸ್ತುಗಳು, ಲೋಹಗಳು ಮತ್ತು ಆರೋಗ್ಯದ ವಲಯದ ಷೇರುಗಳ ಮಾರಾಟದಲ್ಲಿ ತೀವ್ರ ಒತ್ತಡ ಕಂಡುಬಂತು.
ಇಂದು ಮಧ್ಯಾಹ್ನ 12.16ರ ವೇಳೆಗೆ ನಿಫ್ಟಿ 50 ಅಂಕ ಇಳಿಕೆ ಕಂಡುಬಂದರೆ, ಬಿಎಸ್ಇ ಸೆನ್ಸೆಕ್ಸ್ 36,000 ವಹಿವಾಟುಗಳಿಂದ 35,880.47 ಅಂಕಗಳಷ್ಟು 84.55 ಅಂಕ ಇಳಿಕೆ ಕಂಡುಬಂದಿದೆ.
ಇತ್ತೀಚಿನ ವರದಿಯಂತೆ ಬಿಎಸ್ಇ ಸೆನ್ಸೆಕ್ಸ್ 75 ಅಂಕ ಇಳಿಕೆ ಕಂಡು 35,891ರಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 32 ಅಂಕ ಏರಿಕೆ ಕಂಡುಬಂದು 11,060ರಲ್ಲಿ ವಹಿವಾಟು ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


