ನಾನು ಇನ್ನಷ್ಟು ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಬೇಕು: ಬಿಲ್ ಗೇಟ್ಸ್
ತಾವು ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಕಟ್ಟಬೇಕಾಗಿದ್ದು, ಹೆಚ್ಚಿಗೆ ತೆರಿಗೆ ಹಣ ಕಟ್ಟುವ ಅತಿ ಶ್ರೀಮಂತ ವ್ಯಕ್ತಿಗಳು ....

Published On :
ನ್ಯೂಯಾರ್ಕ್: ತಾವು ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಕಟ್ಟಬೇಕಾಗಿದ್ದು, ಹೆಚ್ಚಿಗೆ ತೆರಿಗೆ ಹಣ ಕಟ್ಟುವ ಅತಿ ಶ್ರೀಮಂತ ವ್ಯಕ್ತಿಗಳು ಸರ್ಕಾರಕ್ಕೆ ಅಗತ್ಯವಾಗಿದೆ ಎಂದು ಮೈಕ್ರೊಸಾಫ್ಟ್ ಸ್ಥಾಪಕ ಮತ್ತು ಶತಕೋಟಿ ಸಂಪತ್ತಿನ ಒಡೆಯ ಬಿಲ್ ಗೇಟ್ಸ್ ಹೇಳಿದ್ದಾರೆ.
ನಾನು ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಕಟ್ಟಬೇಕು ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ 90 ಶತಕೋಟಿ ಡಾಲರ್ ನ ಒಡೆಯ ಬಿಲ್ ಗೇಟ್ಸ್ ಹೇಳಿದ್ದಾರೆ.
ನಾನು ಹೆಚ್ಚು ತೆರಿಗೆ ಕಟ್ಟಿದ್ದೇನೆ. ಉಳಿದವರಿಗೆಲ್ಲರಿಗಿಂತ ಹೆಚ್ಚು 10 ಶತಕೋಟಿ ಡಾಲರ್ ಗಿಂತಲೂ ಹೆಚ್ಚು ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದ್ದೇನೆ. ಆದರೆ ನನ್ನ ಸ್ಥಾನದಲ್ಲಿರುವಂತಹ ಶ್ರೀಮಂತ ವ್ಯಕ್ತಿಗಳು ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಪಾವತಿಸಬೇಕಾಗಿದೆ ಎಂದು ಹೇಳಿದರು.
ಅಮೆಜಾನ್ ನ ಜೆಫ್ ಬೆಜೊಸ್ ಅವರ ನಂತರ ವಿಶ್ವದಲ್ಲಿ ಎರಡನೇ ಅತಿ ಶ್ರೀಮಂತ ವ್ಯಕ್ತವಾಗಿರುವ ಬಿಲ್ ಗೇಟ್ಸ್, ರಿಪಬ್ಲಿಕನ್ ತೆರಿಗೆ ಕಾನೂನು ವಿಷಯ ಬಂದಾಗ ತೆರಿಗೆ ಪಾವತಿಸುವುದನ್ನು ತಪ್ಪಿಸಿಲ್ಲ. ರಿಪಬ್ಲಿಕನ್ ತೆರಿಗೆ ಕಾನೂನಿನಲ್ಲಿ ಕಾರ್ಪೊರೇಟ್ ವಲಯಗಳಿಗೆ ತೆರಿಗೆ ಕಡಿತ ಮಾಡುತ್ತದೆ.
ಇದು ಸುಧಾರಿತ ತೆರಿಗೆ ಮಸೂದೆಯಲ್ಲ. ಇದು ಹಿಂದಕ್ಕೆ ಹೋಗುವ ತೆರಿಗೆ ಮಸೂದೆ ಎಂದು ಗೇಟ್ಸ್ ಹೇಳಿದ್ದಾರೆ. ರಿಪಬ್ಲಿಕನ್ ತೆರಿಗೆ ಮಸೂದೆಯಿಂದ ಅಮೆರಿಕಾದ ಕಾರ್ಮಿಕ ಮತ್ತು ಮಧ್ಯಮ ವರ್ಗಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದ್ದರೂ ಅತಿ ಹೆಚ್ಚು ಲಾಭವಾಗುವುದು ಅತಿ ಶ್ರೀಮಂತ ವ್ಯಕ್ತಿಗಳಿಗೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.
ಅಮೆರಿಕಾದಲ್ಲಿ ಅಸಮಾನತೆ ಹೆಚ್ಚಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಲ್ ಗೇಟ್ಸ್, ಎಲ್ಲಾ ಸುಧಾರಿತ ಬೆಳವಣಿಗೆ ಕಂಡ ಪ್ರಜಾಪ್ರಭುತ್ವ ರಾಷ್ಟ್ರಗಳು ಈ ಬಗ್ಗೆ ಯೋಚಿಸಬೇಕು. ಈ ದೇಶದ ಜನಸಂಖ್ಯೆಯಲ್ಲಿ 6ರಷ್ಟು ಭಾಗ ಅತ್ಯಂತ ದುಃಖದ ಪರಿಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದಾರೆ. ಇಂತಹ ನಾಗರಿಕರಿಗೆ ಉದ್ಯೋಗಾವಕಾಶಗಳನ್ನು ಸರ್ಕಾರ ಏಕೆ ಹೆಚ್ಚಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಿಲ್ ಗೇಟ್ಸ್ ತಮ್ಮ ಸಂಪತ್ತಿನಲ್ಲಿ 40 ಶತಕೋಟಿ ಡಾಲರ್ ಗೂ ಅಧಿಕ ಹಣವನ್ನು ಚಾರಿಟೇಬಲ್ ಟ್ರಸ್ಟ್ ಗೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


