ಅಬು ಧಾಬಿ ತೈಲ ನಿಕ್ಷೇಪಗಳಲ್ಲಿ ಭಾರತದ ಮೊದಲ ಪಾಲುದಾರಿಕೆ: 600 ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆ
ಇಲ್ಲಿನ ಬೃಹತ್ ಪ್ರಮಾಣದ ತೈಲ ನಿಕ್ಷೇಪದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ತೈಲ ...

ಅಬುಧಾಬಿ: ಇಲ್ಲಿನ ಬೃಹತ್ ಪ್ರಮಾಣದ ತೈಲ ನಿಕ್ಷೇಪದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ತೈಲ ಒಕ್ಕೂಟವು ಪಾಲನ್ನು ಪಡೆಯುತ್ತಿದೆ. ಇದು ಪ್ರಧಾನಿಯವರ ಮೊನ್ನೆಯ ಅರಬ್ ರಾಷ್ಟ್ರದ ಭೇಟಿಯ ಫಲವಾಗಿದೆ ಎಂದು ಬಣ್ಣಿಸಲಾಗಿದೆ.
ಭಾರತ ಮೂಲದ ತೈಲ ನಿಕ್ಷೇಪ ಘಟಕ ಒಎನ್ ಜಿಸಿ ವಿದೇಶ್, ಭಾರತ್ ಪೆಟ್ರೊರಿಸೊರ್ಸಸ್, ಇಂಡಿಯನ್ ಆಯಿಲ್ ಮತ್ತು ಅಬುಧಾಬಿ ರಾಷ್ಟ್ರೀಯ ತೈಲ ಕಂಪೆನಿಗಳ ನಡುವೆ ಮೊನ್ನೆ ಶನಿವಾರ ನಿಲುವಳಿ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದ್ದು ರಿಯಾಯಿತಿ ದರದಲ್ಲಿ ಅಬುಧಾಬಿಯ ಜಾಕಮ್ ತೈಲ ಘಟಕದಿಂದ ತೈಲ ಪಡೆದುಕೊಳ್ಳಲು ಶೇಕಡಾ 10ರಷ್ಟು ಪಾಲುದಾರಿಕೆಯನ್ನು ಭಾರತೀಯ ಕಂಪೆನಿಗಳು 600 ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆ ಮಾಡಿ ಪಡೆಯಲಿವೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನ ಒಂದು ಘಟಕವಾಗಿರುವ ಅಬುಧಾಬಿ ಗಲ್ಫ್ ಸಹಕಾರ ಮಂಡಳಿಯ ಸದಸ್ಯವಾಗಿದೆ. ಭಾರತಕ್ಕೆ ಅತಿ ಹೆಚ್ಚು ಕಚ್ಚಾತೈಲ ಪೂರೈಕೆ ರಾಷ್ಟ್ರ ಯುಎಇ ಆಗಿದ್ದು 10ನೇ ಅತಿದೊಡ್ಡ ಹೂಡಿಕೆ ದೇಶವಾಗಿದೆ.
ಭಾರತದ ಇಂಧನ ಭದ್ರತೆ ವಿಚಾರದಲ್ಲಿ ಈ ನಿಲುವಳಿ ಒಪ್ಪಂದ ಪ್ರಮುಖ ಮೈಲುಗಲ್ಲು ಆಗಿದೆ. ಭಾರತದ ಒಎನ್ ಜಿಸಿ ವಿದೇಶ್ ತೈಲ ಒಕ್ಕೂಟ ಅರಬ್ ಎಮಿರೇಟ್ಸ್ ದಿರ್ಹಮ್ ಜೊತೆ ಸಹಭಾಗಿತ್ವಕ್ಕಾಗಿ ಪಾಲುದಾರಿಕೆ ಶುಲ್ಕವಾಗಿ 2.2 ಶತಕೋಟಿ ಡಾಲರ್ ಮೊತ್ತವನ್ನು ನೀಡಲಿದೆ. ರಿಯಾಯಿತಿಯನ್ನು ಆಡ್ ನಾಕ್ ಕಡಲಾಚೆಯ ತೈಲ ಘಟಕ ನಿರ್ವಹಿಸಲಿದೆ. 40 ವರ್ಷಗಳವರೆಗೆ ಈ ಒಪ್ಪಂದವಿರಲಿದ್ದು ಈ ವರ್ಷ ಮಾರ್ಚ್ 9ರಿಂದ ಅನ್ವಯವಾಗಲಿದೆ. ಒಎನ್ ಜಿಸಿ ಅಧ್ಯಕ್ಷ ಶಶಿ ಶಂಕರ್ ಮತ್ತು ಅಡ್ನಾಕ್ ಗ್ರೂಪ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲ್ತಾನ್ ಅಹ್ಮದ್ ಅಲ್ ಜಬೆರ್ ಅವರ ಸಮ್ಮುಖದಲ್ಲಿ ಕಳೆದ ಶನಿವಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಪ್ರಸ್ತುತ ಲೋವರ್ ಝಕಮ್ ತೈಲ ನಿಕ್ಷೇಪದಿಂದ 4,00,000 ಬ್ಯಾರಲ್ ಗಳನ್ನು ಪ್ರತಿದಿನ ತಗೆಯಲಾಗುತ್ತಿದ್ದು 2025ರ ವೇಳೆಗೆ ಅದನ್ನು ಪ್ರತಿದಿನಕ್ಕೆ 4,50,000 ಬ್ಯಾರೆಲ್ ಗೆ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ.
ಅಡ್ನಾಕ್ ಕಡಲಾಚೆಯ ತೈಲ ನಿಕ್ಷೇಪ ಘಟಕ ಪ್ರಸ್ತುತ ಪ್ರತಿದಿನ 1.4 ದಶಲಕ್ಷ ಬ್ಯಾರೆಲ್ ತೈಲ ಉತ್ಪತ್ತಿ ಮಾಡುತ್ತಿದೆ ಎಂದು ಅಡ್ನಾಕ್ ಹೇಳಿಕೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


