ಪಕ್ಷಪಾತ ಶೋಧ ಮಾಹಿತಿ: ಸ್ಪರ್ಧಾ ಆಯೋಗದಿಂದ ಗೂಗಲ್ ಗೆ 136 ಕೋಟಿ ದಂಡ!
ಪಕ್ಷಪಾತ ಮಾಡಿದ ಆರೋಪದಡಿಯಲ್ಲಿ ಖ್ಯಾತ ಆನ್ ಲೈನ್ ಶೋಧ ತಾಣ ಗೂಗಲ್ ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಬರೊಬ್ಬರಿ 136 ಕೋಟಿ ದಂಡ ವಿಧಿಸಿದೆ.

Published On :
ನವದೆಹಲಿ: ಪಕ್ಷಪಾತ ಮಾಡಿದ ಆರೋಪದಡಿಯಲ್ಲಿ ಖ್ಯಾತ ಆನ್ ಲೈನ್ ಶೋಧ ತಾಣ ಗೂಗಲ್ ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಬರೊಬ್ಬರಿ 136 ಕೋಟಿ ದಂಡ ವಿಧಿಸಿದೆ.
ಭಾರತದಲ್ಲಿ ಆನ್ ಲೈನ್ ಶೋಧತಾಣಗಳಲ್ಲಿ ಗೂಗಲ್ ಗೆ ಅಗ್ರಸ್ಥಾನವಿದ್ದು, ಅತೀ ಹೆಚ್ಚು ಮಂದಿ ಭಾರತೀಯರು ಆನ್ ಲೈನ್ ಶೋಧಕ್ಕಾಗಿ ಗೂಗಲ್ ಮೇಲೆ ಅವಲಂಬಿತರಾಗಿದ್ದಾರೆ. ಇದನ್ನು ತನ್ನ ಲಾಭಕ್ಕಾಗಿ ಬಳಿಸಿಕೊಂಡ ಗಂಭೀರ ಆರೋಪ ಗೂಗಲ್ ಮೇಲೆ ಇದ್ದು, ಬಳಕೆದಾರರಿಗೆ ಆನ್ ಲೈನ್ ಶೋಧದ ವೇಳೆ ಕೆಲ ಕಂಪನಿಗಳ ಪರವಾದ ಮಾಹಿತಿಗಳನ್ನು ನೀಡುತ್ತಿದೆ ಎಂಬ ಆರೋಪದ ಮೇರೆಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ ಗೂಗಲ್ ಇಂಡಿಯಾ 136 ಕೋಟಿ ದಂಡ ವಿಧಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಸಿಐನ ಅಧಿಕಾರಿಯೊಬ್ಬರು, ಭಾರತದಲ್ಲಿ ಆನ್ಲೈನ್ ಹುಡುಕಾಟ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಗೂಗಲ್, ಈ ವಿಷಯವನ್ನೇ ಮುಂದಿಟ್ಟುಕೊಂಡು ಕೆಲವೊಂದು ಸಂಸ್ಥೆಗಳ ಪರವಾಗಿ ಕಾರ್ಯ ನಿರ್ವಹಿಸುವ ಮೂಲಕ ನಿಯಮ ಬಾಹಿರವಾಗಿ ವರ್ತಿಸುತ್ತಿದೆ ಎಂದು ಹೇಳಿದ್ದಾರೆ. ಅಂತೆಯೇ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎಲ್‌ಐಸಿ, ಮ್ಯಾಟ್ರಿಮೋನಿಯಲ್.ಕಾಂ ಸೇರಿದಂತೆ ಹಲವು ಕಂಪನಿಗಳು 2012ರಲ್ಲಿ ಸಿಸಿಐಗೆ ದೂರು ಸಲ್ಲಿಸಿದ್ದವು. ಈ ಕುರಿತು ವಿಚಾರಣೆ ನಡೆಸಿದ್ದ ಸಿಸಿಐ ಇದೀಗ, ಗೂಗಲ್ ಇಂಡಿಯಾ ಸಂಸ್ಥೆಗೆ ಭಾರಿ ಪ್ರಮಾಣದ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಈ ಹಿಂದೆಯೂ ಕೂಡ ನಂಬಿಕೆ ದ್ರೋಹ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂರೋಪಿಯನ್ ಒಕ್ಕೂಟ 16 ಸಾವಿರ ಕೋಟಿ ರೂ. ವಿಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Businessವಾಣಿಜ್ಯನವದೆಹಲಿNew DelhiGoogleCompetition Commission of Indiaಭಾರತೀಯ ಸ್ಪರ್ಧಾತ್ಮಕ ಆಯೋಗSearch Bias Rowಪಕ್ಷಪಾತ ಪೂರಿತ ಶೋಧ ಮಾಹಿತಿ ವಿವಾದ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


