ದಶಕದ ದಾಖಲೆ ಕುಸಿತದ ಬಳಿಕ ಮತ್ತೆ ಚೇತರಿಸಿಕೊಂಡ ಅಮೆರಿಕ ಷೇರುಪೇಟೆ!
ಮಂಗಳವಾರ ದಾಖಲೆ ಪ್ರಮಾಣದಲ್ಲಿ ಕುಸಿದಿದ್ದ ಅಮೆರಿಕ ಷೇರುಪೇಟೆ ಬುಧವಾರ ಚೇತರಿಕೆ ಕಂಡಿದ್ದು, ಆರಂಭಿಕ ವಹಿವಾಟಿನಲ್ಲೇ 567.02 ಅಂಕಗಳಿಗೆ ಏರಿಕೆ ಕಂಡಿದೆ.

Published On :
ವಾಷಿಂಗ್ಟನ್: ಮಂಗಳವಾರ ದಾಖಲೆ ಪ್ರಮಾಣದಲ್ಲಿ ಕುಸಿದಿದ್ದ ಅಮೆರಿಕ ಷೇರುಪೇಟೆ ಬುಧವಾರ ಚೇತರಿಕೆ ಕಂಡಿದ್ದು, ಆರಂಭಿಕ ವಹಿವಾಟಿನಲ್ಲೇ 567.02 ಅಂಕಗಳಿಗೆ ಏರಿಕೆ ಕಂಡಿದೆ.
ಮಂಗಳವಾರ ಬರೊಬ್ಬರಿ ಒಂದು ಸಾವಿರ ಅಂಕಗಳ ಕುಸಿತದ ಮೂಲಕ 24,912.77 ಅಂಕಗಳಿಗೆ ಕುಸಿದಿದ್ದ ಅಮೆರಿಕ ಷೇರುಪೇಟೆ, 567 ಅಂಕಗಳ ಏರಿಕೆ ಕಂಡಿದೆ. ಅಂತೆಯೇ ಎಸ್ ಅಂಡ್ ಪಿ 500 ಕೂಡ 46.2 ಅಂಕಗಳ ಏರಿಕೆ ಕಾಣುವ ಮೂಲಕ 2,695.14 ಅಂಕಗಳಿಗೆ ಏರಿಕೆಯಾಗಿದೆ. ಅಂತೆಯೇ ನಸ್ಜಾಕ್ ಕಂಪೋಸಿಟ್ 148.36 ಅಂಕಗಳ ಏರಿಕೆಯೊಂದಿಗೆ 7,115.88 ಅಂಕಗಳಿಗೆ ಏರಿಕೆಯಾಗಿದೆ.
ಇನ್ನು ಜಪಾನ್ ಷೇರುಪೇಟೆ ಕೂಡ ಚೇತರಿಕೆ ಕಂಡಿದ್ದು, ಜಪಾನ್ ನಿಕ್ಕೀ ಶೇ.2.9ರಷ್ಟು ಏರಿಕೆ ಕಂಡಿದೆ. ಅಂತೆಯೇ ಹಾಂಗ್ ಕಾಂಗ್ ಸೆಂಗ್ ಸೂಚ್ಯಂಕ ಶೇ.5.68ಕಷ್ಟು ಏರಿಕೆ ಕಂಡಿದ್ದು, ದಕ್ಷಿಣ ಕೊರಿಯಾದ ಕೊಸ್ಪಿ 0.17ರಷ್ಟು ಚೇತರಿಕೆ ಕಂಡಿದೆ. ಅತ್ತ ಆಸ್ಟ್ರೇಲಿಯಾ. ಇಂಗ್ಲೆಂಡ್ ಮಾರುಕಟ್ಟೆಗಳೂ ಕೂಡ ಚೇತರಿಕೆಯತ್ತ ಮುಖ ಮಾಡಿವೆ ಎಂದು ತಿಳಿದುಬಂದಿದೆ.
ಮಂಗಳವಾರ ಒಂದೇ ದಿನ ವಾಲ್ ಸ್ಟ್ರೀಟ್ ನ ಡೋ ಬರೊಬ್ಬರಿ 11100 ಅಂಕಗಳ ಕುಸಿತ ಕಂಡಿತ್ತು. ಪರಿಣಾಮ ಅಮೆರಿಕದ ಇಂಟ್ರಾಡೇ ವಹಿವಾಟಿನಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಇದರ ಪರಿಣಾಮ ಏಷ್ಯನ್ ಮಾರುಕಟ್ಟೆ ಮೇಲೂ ಕೂಡಿ ಭಾರತೀಯ ಷೇರುಪೇಟೆ ಸಾವಿರಕ್ಕೂ ಹೆಚ್ಚು ಅಂಕಗಳ ಕುಸಿತ ಕಂಡು ಸುಮಾರು 4 ಲಕ್ಷ ಕೋಟಿ ರು. ನಷ್ಟ ಅನುಭವಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


