ಶುಕ್ರವಾರ ಮತ್ತೆ ಇಳಿದ ತೈಲೋತ್ಪನ್ನಗಳ ದರ, ಇಂದಿನ ದರ ಪಟ್ಟಿ ಇಲ್ಲಿದೆ!
ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಶುಕ್ರವಾರವೂ ಇಳಿಕೆಯಾಗಿದ್ದು, ಇಂದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಮತ್ತೆ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

Published On :
ಮುಂಬೈ: ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಶುಕ್ರವಾರವೂ ಇಳಿಕೆಯಾಗಿದ್ದು, ಇಂದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಮತ್ತೆ ಅಲ್ಪ ಪ್ರಮಾಣದ ಇಳಿಕೆಯಾಗಿದೆ.
ದೇಶದ ಪ್ರಮುಖ ಮೆಟ್ರೋ ನಗರಳಲ್ಲಿ ಪೆಟ್ರೋಲ್ ದರ 5 ಪೈಸೆಯಷ್ಟು ಮತ್ತು ಡೀಸೆಲ್ ದರ 7 ಪೈಸೆಯಷ್ಟು ಇಳಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 69.74ರೂಗೆ ಇಳಿಕೆಯಾಗಿದ್ದು, ಡೀಸೆಲ್ ದರ 63.76 ಕ್ಕೆ ಇಳಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ಪ್ರತೀ ಲೀಟರ್ ಪೆಟ್ರೋಲ್ ದರ 75.36 ರೂಗಳಿಗೆ ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ ಪ್ರತೀ ಲೀಟರ್ ಗೆ 66.72ಕ್ಕೆ ಇಳಿಕೆಯಾಗಿದೆ.
ಚೆನ್ನೈ ಮತ್ತು ಕೋಲ್ಕತಾದಲ್ಲಿ ಪೆಟ್ರೋಲ್ ದರ ಕ್ರಮವಾಗಿ 72.36 ರೂ ಗೆ ಮತ್ತು 71.84 ರೂಗಳಿಗೆ ಇಳಿಕೆಯಾಗಿದೆ. ಅಂತೆಯೇ ಡೀಸೆಲ್ ದರ ಕ್ರಮವಾಗಿ 67.31ರೂಗೆ ಮತ್ತು 65.51 ರೂಗೆ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿಂದು ಪೆಟ್ರೋಲ್ ಬೆಲೆ ರೂ.70.03
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 70.03 ರೂಗೆ ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ 64.11 ರೂಗೆ ಇಳಿಕೆಯಾಗಿದೆ. ಈ ಬಗ್ಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ತನ್ನ ವೆಬ್ ಸೈಟಿನಲ್ಲಿ ಮಾಹಿತಿ ನೀಡಿದೆ.
ಅಂತಾರಾಷ್ಟ್ರೀಯ ಕಚ್ಛಾ ತೈಲ ದರ ಇಳಿಕೆಯೇ ತೈಲದರಗಳ ಇಳಿಕೆಗೆ ಕಾರಣ ಎನ್ನಲಾಗುತ್ತಿದ್ದು, ಮುಂದಿನ ದಿನಗಳ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉಚಿತ ಎಸ್ಎಂಎಸ್ ಮಾಡಿ, ತೈಲೋತ್ಪನ್ನಗಳ ದರ ತಿಳಿಯಿರಿ
ಇನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಗೆ ಗ್ರಾಹಕರು ಎಸ್ಎಂಎಸ್ ಕಳುಹಿಸುವ ಮೂಲಕ ಆಯಾ ನಗರದಲ್ಲಿನ ದರಗಳ ಮಾಹಿತಿ ಪಡೆಯಬಹುದು. ಈ ಬಗ್ಗೆ ಸಂಸ್ಥೆ ತನ್ನ ವೆಬೈ ಸೈಟ್ ನಲ್ಲಿ ಮಾಹಿತಿ ನೀಡಿದ್ದು, ಗ್ರಾಹಕರು https://www.iocl.com/Products/PetrolDieselPrices.aspx ಗೆ ಭೇಟಿ 92249 92249 ನಂಬರ್ ಗೆ ಆಯಾ ಜಿಲ್ಲೆಯ ಕೋಡ್ ಅನ್ನು ಎಸ್ಎಂಎಸ್ ಮಾಡಿ ದರಗಳ ಮಾಹಿತಿ ಪಡೆಯಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


