ವಾಣಿಜ್ಯ

ಫೆಡ್ ಎಕ್ಸ್‌ ಅಧ್ಯಕ್ಷರಾಗಿ ಭಾರತೀಯ-ಅಮೆರಿಕನ್‌ ರಾಜೇಶ್ ಸುಬ್ರಮಣಿಯನ್ ನೇಮಕ

ಅಮೆರಿಕದ ಬಹುರಾಷ್ಟ್ರೀಯ ಕೊರಿಯರ್‌ ಡೆಲಿವರಿ ದಿಗ್ಗಜ ಫೆಡ್‌ಎಕ್ಸ್‌ ಎಕ್ಸ್‌ಪ್ರೆಸ್‌ ಸಂಸ್ಥೆಯ ಅಧ್ಯಕ್ಷ ಹಾಗೂ ಸಿಇಓ ಆಗಿ ಭಾರತೀಯ....

ಫೆಡ್ ಎಕ್ಸ್‌ ಅಧ್ಯಕ್ಷರಾಗಿ ಭಾರತೀಯ-ಅಮೆರಿಕನ್‌ ರಾಜೇಶ್ ಸುಬ್ರಮಣಿಯನ್ ನೇಮಕ
ರಾಜೇಶ್ ಸುಬ್ರಮಣಿಯನ್
Published On :
ಹ್ಯೂಸ್ಟನ್‌: ಅಮೆರಿಕದ ಬಹುರಾಷ್ಟ್ರೀಯ ಕೊರಿಯರ್‌ ಡೆಲಿವರಿ ದಿಗ್ಗಜ ಫೆಡ್‌ಎಕ್ಸ್‌ ಎಕ್ಸ್‌ಪ್ರೆಸ್‌ ಸಂಸ್ಥೆಯ ಅಧ್ಯಕ್ಷ ಹಾಗೂ ಸಿಇಓ ಆಗಿ ಭಾರತೀಯ-ಅಮೆರಿಕನ್‌ ರಾಜೇಶ್‌ ಸುಬ್ರಮಣಿಯನ್‌ ಅವರನ್ನು ನೇಮಿಸಲಾಗಿದೆ.
ರಾಜೇಶ್ ಅವರು ಸದ್ಯ ಫೆಡ್‌ಎಕ್ಸ್‌ ಕಾರ್ಪೊರೇಶನ್‌ ನ ಕಾರ್ಯನಿರ್ವಾಹಕ ಉಪಾಧ್ಯಕ್ಷರು ಹಾಗೂ ಚೀಫ್ ಮಾರ್ಕೆಟಿಂಗ್‌ ಮತ್ತು ಕಮ್ಯುನಿಕೇಶನ್‌ ಆಫೀಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, 2019ರ ಜನವರಿ1ರಿಂದ ಫೆಡ್ ಎಕ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಟೆನಿಸೀಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಫೆಡ್ ಎಕ್ಸ್ ಅಧ್ಯಕ್ಷ ಡೇವಿಡ್‌ ಎಲ್‌ ಕನ್ನಿಂಗ್ ಹ್ಯಾಮ್ ಅವರ ಉತ್ತರಾಧಿಕಾರಿಯಾಗಿ ರಾಜೇಶ್ ಸುಬ್ರಮಣಿಯನ್‌ ಅವರು ನೇಮಕಗೊಂಡಿದ್ದಾರೆ.
ಕೇರಳದ ತಿರುವನಂತಪುರಂ ಮೂಲದ ರಾಜೇಶ್ ಅವರು ಐಐಟಿ-ಬಾಂಬೆಯಲ್ಲಿ ಪದವಿ ಪಡೆದಿದ್ದು, ಕಳೆದ 27 ವರ್ಷಗಳಿಂದ ಫೆಡ್ ಎಕ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.