ವಾಣಿಜ್ಯ

2ನೇ ದಿನವೂ ತೈಲೋತ್ಪನ್ನಗಳ ದರ ಏರಿಕೆ, ಇಂದಿನ ದರ ಎಷ್ಟು ಗೊತ್ತಾ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದರೂ ಭಾರತೀಯ ತೈಲ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಸತತ ಎರಡನೇ ದಿನವೂ ಅಲ್ಪ ಪ್ರಮಾಣದ ಏರಿಕೆಯಾಗಿದೆ.

2ನೇ ದಿನವೂ ತೈಲೋತ್ಪನ್ನಗಳ ದರ ಏರಿಕೆ, ಇಂದಿನ ದರ ಎಷ್ಟು ಗೊತ್ತಾ?
ಸಂಗ್ರಹ ಚಿತ್ರ
Published On :
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದರೂ ಭಾರತೀಯ ತೈಲ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಸತತ ಎರಡನೇ ದಿನವೂ ಅಲ್ಪ ಪ್ರಮಾಣದ ಏರಿಕೆಯಾಗಿದೆ.
ಮೂಲಗಳ ಪ್ರಕಾರ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 10 ಪೈಸೆ, ಡೀಸೆಲ್ ದರದಲ್ಲಿ 7 ಪೈಸೆ ಏರಿಕೆ ಕಂಡುಬಂದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 70.63 ರೂ (10 ಪೈಸೆ ಏರಿಕೆ), ಮತ್ತು ಡೀಸೆಲ್‌ ದರ 64.54 ರೂ (07 ಪೈಸೆ ಏರಿಕೆ) ಇದೆ. 
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇಂದಿನ ಪೆಟ್ರೋಲ್‌ ದರ 76.21 ರೂ (10 ಪೈಸೆ ಏರಿಕೆ), ಡೀಸೆಲ್ ಬೆಲೆ 67.52 ರೂ (08 ಪೈಸೆ ಏರಿಕೆ) ಆಗಿದೆ. ಕೋಲ್ಕತಾದಲ್ಲಿ ಇಂದಿನ ಪೆಟ್ರೋಲ್‌ ಬೆಲೆ 72.68 ರೂ (10 ಪೈಸೆ ಏರಿಕೆ) ಮತ್ತು ಡೀಸೆಲ್ ಬೆಲೆ 66.27 ರೂ (07 ಪೈಸೆ ಏರಿಕೆ) ಗಳಾಗಿವೆ.  ಚೆನ್ನೈನಲ್ಲಿ ಇಂದಿನ ಪೆಟ್ರೋಲ್‌ ಬೆಲೆ 73.26 ರೂ. (11 ಪೈಸೆ ಏರಿಕೆ), ಡೀಸೆಲ್‌ ಬೆಲೆ 68.11 ರೂ (07 ಪೈಸೆ ಏರಿಕೆ) ಆಗಿದೆ. 
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರದ ಪೆಟ್ರೋಲ್‌ ದರ ಲೀಟರ್‌ಗೆ 71.17 ರೂ (10 ಪೈಸೆ ಏರಿಕೆ) ಮತ್ತು ಡೀಸೆಲ್‌ ದರ 64.87 (07 ಪೈಸೆ ಏರಿಕೆ) ರೂ ಇದೆ. 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್ ಗೆ ಇಂದಿನ ಬೆಲೆ 3,606 ರೂ (84 ರೂ ಇಳಿಕೆ) ಆಗಿದ್ದರೂ ಭಾರತೀಯ ಮಾರುಕಟ್ಟೆಗೆ ಅನುಸಾರವಾಗಿ ತೈಲೋತ್ಪನ್ನ ದರಗಳು ಅಲ್ಪ ಪ್ರಮಾಣದ ಏರಿಕೆ ಕಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.