ಕಳೆದ 20 ದಿನಗಳಲ್ಲಿ ಪೆಟ್ರೋಲ್ ದರದಲ್ಲಿ 13 ರೂ. ಇಳಿಕೆ
ತೈಲೋತ್ಪನ್ನಗಳ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ 20 ದಿನಗಳಿಂದ ಪೆಟ್ರೋಲ್ ದರದಲ್ಲಿ 13 ರೂಪಾಯಿಯಷ್ಟು ಇಳಿಕೆ ಕಂಡುಬಂದಿದೆ ಎನ್ನಲಾಗಿದೆ.

Published On :
ನವದೆಹಲಿ: ತೈಲೋತ್ಪನ್ನಗಳ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ 20 ದಿನಗಳಿಂದ ಪೆಟ್ರೋಲ್ ದರದಲ್ಲಿ 13 ರೂಪಾಯಿಯಷ್ಟು ಇಳಿಕೆ ಕಂಡುಬಂದಿದೆ ಎನ್ನಲಾಗಿದೆ.
ಶುಕ್ರವಾರ ಮತ್ತೆ ತೈಲೋತ್ಪನ್ನಗಳ ದರಗಳು ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 40 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 41 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ. ಆ ಮೂಲಕ ಕಳೆದ 20 ದಿನಗಳಿಂದ ಇಲ್ಲಿಯವರೆಗೂ ಪೆಟ್ರೋಲ್ ದರದಲ್ಲಿ 13 ರೂ ಇಳಿಕೆಯಾದಂತಾಗಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ತಿಂಗಳು 85 ರು. ತಲುಪಿದ್ದ ಪೆಟ್ರೋಲ್ ದರ ಶುಕ್ರವಾರ 40 ಪೈಸೆ ಕಡಿಮೆಯಾಗುವ ಮೂಲಕ 71.32ಕ್ಕೆ ಇಳಿದಿದ್ದರೆ, ಡೀಸೆಲ್ ಬೆಲೆಯೂ 41 ಪೈಸೆ ಕುಸಿತಗೊಂಡು 65.55ಕ್ಕೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ಎಷ್ಟಿದೆ ಇಂಧನ ದರ?
ಸಿಲಿಕಾನ್ ಸಿಟಿಯಲ್ಲೂ ಗಗನಕ್ಕೇರಿದ್ದ ಇಂಧನ ದರ ಈಗ ಕಡಿಮೆಯಾಗಿರುವುದು ಗ್ರಾಹಕರು ನಿಟ್ಟುಸಿರು ಬಿಡುವಂತೆ ಆಗಿದೆ. ಪ್ರತಿ ಲೀಟರ್ ಪೆಟ್ರೋಲ್ 71.46 ರು. (40 ಪೈಸೆ ಇಳಿಕೆ ನಂತರ) ಮತ್ತು ಡೀಸೆಲ್ 65.88 ರು.ಗೆ (41 ಪೈಸೆ ಇಳಿಕೆ ನಂತರ) ಮಾರಾಟವಾಗುತ್ತಿದೆ.
ಇನ್ನೂ ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಕ್ರಮವಾಗಿ 76.50 ರು., 68.59 ರು.ಗೆ ಮಾರಾಟವಾಗುತ್ತಿದ್ದರೆ, ಇತರ ಮೆಟ್ರೊ ಸಿಟಿಗಳಾದ ಚೆನ್ನೈ ಮತ್ತು ಕೋಲ್ಕತದಲ್ಲಿ ಪೆಟ್ರೋಲ್ ದರ ಕ್ರಮವಾಗಿ 73.57 ರು. ಮತ್ತು 72.97 ರು. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿಯುತ್ತಿರುವುದರ ಪರಿಣಾಮ ದೇಶದೆಲ್ಲೆಡೆ ಇಂಧನ ದರದಲ್ಲಿ ಗಣನೀಯ ಇಳಿಕೆಯಾಗಿದೆ. ಕಳೆದ ಅಕ್ಟೋಬರ್‌ನಿಂದ ಇಲ್ಲಿಯವರೆಗೂ ಕಚ್ಚಾ ತೈಲ ಬೆಲೆ ಶೇ.30ರಷ್ಟು ಕಡಿಮೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BusinessನವದೆಹಲಿNew DelhiPetrol priceಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಉದ್ಯಮಪೆಟ್ರೋಲ್ ಬೆಲೆInternational Oil Market
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


