ವಾಣಿಜ್ಯ

ಇನ್ನು ಮುಂದೆ ಕೇವಲ 4 ಗಂಟೆಗಳಲ್ಲಿ ಕೈ ಸೇರಲಿದೆ ಪ್ಯಾನ್ ಕಾರ್ಡ್!

ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದರೆ ಹಲವು ದಿನಗಳ ಕಾಲ ಕಾಯುವುದು ಶೀಘ್ರವೇ ಕೊನೆಯಾಗಲಿದೆ.

ಇನ್ನು ಮುಂದೆ ಕೇವಲ 4 ಗಂಟೆಗಳಲ್ಲಿ ಕೈ ಸೇರಲಿದೆ ಪ್ಯಾನ್ ಕಾರ್ಡ್!
ಇನ್ನು ಮುಂದೆ ಕೇವಲ 4 ಗಂಟೆಗಳಲ್ಲಿ ಕೈ ಸೇರಲಿದೆ ಪ್ಯಾನ್ ಕಾರ್ಡ್!
Published On :
ನವದೆಹಲಿ: ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದರೆ ಹಲವು ದಿನಗಳ ಕಾಲ ಕಾಯುವುದು ಶೀಘ್ರವೇ ಕೊನೆಯಾಗಲಿದೆ. 
ಹೌದು, ತೆರಿಗೆ ಇಲಾಖೆ  ಕೇವಲ 4 ಗಂಟೆಗಳಲ್ಲಿ ಪ್ಯಾನ್ ಕಾರ್ಡ್ ನ್ನು ನೀಡುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಶೀಘ್ರವೇ ಗ್ರಾಹಕರಿಗೆ ಪ್ಯಾನ್ ಕಾರ್ಡ್ ನಾಲ್ಕು  ಗಂಟೆಗಳಲ್ಲೇ ಕೈ ಸೇರಲಿದೆ. 
ನೇರ ತೆರಿಗೆ ವಿಭಾಗದ ಕೇಂದ್ರ ಮಂಡಾಳಿಯ ಅಧ್ಯಕ್ಷ ಸುಶೀಲ್ ಚಂದ್ರ ಇಂಡಸ್ಟ್ರಿ ಕಾನ್ಫರೆನ್ಸ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ಇಲಾಖೆ ತಂತ್ರಜ್ಞಾನ ಹಾಗೂ ಆಟೋಮೇಷನ್ ನ್ನು ತೆರಿಗೆ ಪೂರ್ವಪಾವತಿ, ರಿಟರ್ನ್ಸ್ ಸಲ್ಲಿಕೆ, ರೀಫಂಡ್ ಸೇರಿದಂತೆ ಹಲವು ವಿಭಾಗಗಳಲ್ಲಿ ಅಳವಡಿಸಿಕೊಂಡಿದೆ.  ಈ ಪೈಕಿ ಪ್ಯಾನ್ ಕಾರ್ಡ್ ವಿತರಣೆಯೂ ಒಂದಾಗಿದ್ದು ಒಂದು ವರ್ಷದೊಳಗಾಗಿ ಕೇವಲ 4 ಗಂಟೆಗಳಲ್ಲಿ ಪ್ಯಾನ್ ಕಾರ್ಡ್ ಗ್ರಾಹಕರ ಕೈ ಸೇರಲಿದೆ ಎಂದು ಹೇಳಿದ್ದಾರೆ. 
2018-19 ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ನ್ನು ಸಲ್ಲಿಕೆ ಮಾಡುವವರ ಸಂಖ್ಯೆ  ಕಳೇದ ವರ್ಷಕ್ಕಿಂತ ಶೇ.50  ರಷ್ಟು ಹೆಚ್ಚಾಗಿದೆ (6.08 ಕೋಟಿ) ಎಂದು ಸುಶೀಲ್ ಚಂದ್ರ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.